• Home
 • »
 • News
 • »
 • national-international
 • »
 • ನನ್ನ ಮೇಲಿನ #METOO ಆರೋಪ ಸುಳ್ಳು ಇದರಿಂದ ನನ್ನ ಮನಸಿಗೆ ತೀವ್ರ ಆಘಾತವಾಗಿದೆ; ಅನುರಾಗ್ ಕಶ್ಯಪ್

ನನ್ನ ಮೇಲಿನ #METOO ಆರೋಪ ಸುಳ್ಳು ಇದರಿಂದ ನನ್ನ ಮನಸಿಗೆ ತೀವ್ರ ಆಘಾತವಾಗಿದೆ; ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್.

ಅನುರಾಗ್ ಕಶ್ಯಪ್.

ಕಳೆದ ಕೆಲವು ವರ್ಷ #MeToo ಚಳವಳಿಯಲ್ಲಿ ಚಲನಚಿತ್ರೋದ್ಯಮದ ಹಲವಾರು ಖ್ಯಾತನಾಮರ ಹೆಸರುಗಳು ಸಿಲುಕಿಕೊಂಡಿತ್ತು. ಖ್ಯಾತ ನಟ ನಾನಾ ಪಟೇಕರ್, ಅಲೋಕ್ ನಾಥ್, ಸುಭಾಷ್ ಘೈ, ಸಾಜಿದ್ ಖಾನ್, ಅನು ಮಲಿಕ್ ಮತ್ತು ಅರ್ಜುನ್ ಸರ್ಜಾ ಅವರನ್ನೂ ಸಹ #METOO ಅಭಿಯಾನ ಬಿಸಿ ಮುಟ್ಟಿಸಿತ್ತು.

 • Share this:

  ಮುಂಬೈ (ಸೆಪ್ಟೆಂಬರ್​ 21); ಕಳೆದ ಎರಡು ವರ್ಷಗಳಿಂದ ಭಾರತದ ಎಲ್ಲಾ ಚಿತ್ರರಂಗಗಳಲ್ಲೂ #METOO ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಬಾಲಿವುಡ್ನಿಂದ ಮಾಲಿವುಡ್ ವರೆಗೆ ಅನೇಕ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಈ ಖೆಡ್ಡಕ್ಕೆ ಬಿದ್ದಿದ್ದಾರೆ. ಸ್ಯಾಂಡಲ್​ವುಡ್​ನಲ್ಲೂ ಸಹ ಅನೇಕರ ಹೆಸರುಗಳು ಕೇಳಿ ಬಂದಿದ್ದವು. ಆದರೆ, ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಈವಿವಾದ ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮತ್ತು ಇದಕ್ಕೆ ಕಾರಣ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ಪಾಯಲ್ ಘೋಷ್. ಹೌದು…ಇತ್ತೀಚೆಗೆ ಮತ್ತೊಮ್ಮೆ #METOO ಅಭಿಯಾನದ ಅಡಿಯಲ್ಲಿ ಮಾತನಾಡಿದ್ದ ನಟಿ ಪಾಯಲ್ ಘೋಷ್ “ತನ್ನ ಜೊತೆ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅಸಭ್ಯವಾಗಿ ನಡೆದುಕೊಂಡರು” ಎಂದು ಆರೋಪಿಸಿದ್ದು, ಈ ಆರೋಪ ಬಾಲಿವುಡ್ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ, ಭಾರತದ ಎಲ್ಲಾ ಚಿತ್ರೋದ್ಯಮದಲ್ಲೂ ಎರಡನೇ ಸುತ್ತಿನ #METOO ಅಭಿಯಾನಕ್ಕೂ ನಾಂದಿ ಹಾಡುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿದೆ.


  ಆದರೆ, ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಟ ನಿರ್ದೇಶಕ ಅನುರಾಗ್ ಕಶ್ಯಪ್, “ನಟಿ ಪಾಯಲ್ ಘೋಷ್ ತಮ್ಮ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ಆರೋಪವು ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ” ಎಂದು ದೂರಿದ್ದಾರೆ. ಈ ಕುರಿತು ತಮ್ಮ ವಕೀಲೆ ಪ್ರಿಯಾಂಕಾ ಖಿಮಾನಿ ಮೂಲಕ ತನ್ನ ಹೇಳಿಕೆಯನ್ನು ಸಹ ಅವರು ಬಿಡುಗಡೆ ಮಾಡಿದ್ದಾರೆ.  ವಕೀಲೆ ಪ್ರಿಯಾಂಕಾ ಖಿಮಾನಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ “ನನ್ನ ಕಕ್ಷಿದಾರ ಅನುರಾಗ್ ಕಶ್ಯಪ್ ವಿರುದ್ಧ ಇತ್ತಿಚೆಗೆ ಮಾಡಲಾಗಿರುವ ಸುಳ್ಳು ಲೈಂಗಿಕ ಕಿರುಕುಳ ಆರೋಪದಿಂದ ತೀವ್ರವಾಗಿ ನೋವು ಅನುಭವಿಸಿದ್ದಾರೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕವಾದದ್ದು” ಎಂದು ಸ್ಪಷ್ಟಪಡಿಸಿದ್ದಾರೆ.

  ಆರೋಪದ ಕುರಿತು ಭಾನುವಾರ ಸರಣಿ ಟ್ಟ್ವೀಟ್​ಗಳ ಮೂಲಕ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, "ನನ್ನನ್ನು ಮೌನವಾಗಿಸುವ ಕೆಲಸ ನಡೆಯುತ್ತಿದೆ. ನನ್ನ ವಿರುದ್ಧದ ಆರೋಪಗಳು ಆಧಾರರಹಿತ. ನಾನು ಯಾವ ನಟಿಯರ ಜೊತೆಗೂ ಆ ರೀತಿ ವರ್ತಿಸಿದ ಉದಾಹರಣೆಗಳೇ ಇಲ್ಲ" ಎಂದು ಕಿಡಿಕಾರಿದ್ದರು.


  ಬಾಲಿವುಡ್​ ನಟಿ ಪಾಯಲ್ ಘೋಷ್ ಇತ್ತಿಚೆಗೆ ಎಬಿಎನ್ ತೆಲುಗು ಚಾನೆಲ್​ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಜೊತೆಗೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ತನಗೆ ನ್ಯಾಯ ದೊರಕಿಸಿ ಕೊಡಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಕೋರಿ ಅವರು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸದ್ದು ಮಾಡಿದ್ದರು.  ಇದೇ ವೇಳೆ ನಟಿ ಪಾಯಲ್ ಘೋಷ್​ ಅವರಿಗೆ ಬೆಂಬಲ ನೀಡಿ ನಟಿ ಕಂಗನಾ ರಣಾವತ್ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದರು. ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಕಂಗನಾ ರಾಣಾವತ್ ಸರಣಿ ಟ್ವೀಟ್​ಗಳನ್ನು ಮಾಡುವ ಮೂಲಕ ಕಶ್ಯಪ್ ವಿರುದ್ಧ ಕಿಡಿಕಾರಿದ್ದಾರೆ.

  ಇದನ್ನೂ ಓದಿ : ಸಮಾಜದಲ್ಲಿ ವಿಷಪೂರಿತ ದ್ವೇಷವನ್ನು ಹರಡುತ್ತಿರುವ ಡಿಜಿಟಲ್ ಮಾಧ್ಯಮಗಳಿಗೆ ಕಡಿವಾಣ ಹಾಕಿ; ಕೇಂದ್ರಕ್ಕೆ ಸುಪ್ರೀಂ ಸೂಚನೆ


  "ಬಾಲಿವುಡ್​ನಲ್ಲಿ ದೊಡ್ಡ ದೊಡ್ಡ ನಾಯಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ಹೊರಗಿನಿಂದ ಬಂದವರನ್ನು ಸೆಕ್ಸ್ ವರ್ಕರ್​ಗಳಂತೆ ನೋಡುತ್ತಾರೆ" ಎಂದು ಕಂಗನಾ ರಣಾವತ್​ ನೇರಾ ನೇರ ಆರೋಪಿಸಿದ್ದರು. ಈಗಾಗಲೇ ಅವರು ಮಹಾರಾಷ್ಟ್ರ ಸರ್ಕಾರದ ಜೊತೆಗೆ ದೊಡ್ಡದೊಂದು ವಿವಾದಲ್ಲೂ ಸಿಲುಕಿದ್ದಾರೆ ಎಂಬುದು ಉಲ್ಲೇಖಾರ್ಹ.


  ಕಳೆದ ಕೆಲವು ವರ್ಷ #MeToo ಚಳವಳಿಯಲ್ಲಿ ಚಲನಚಿತ್ರೋದ್ಯಮದ ಹಲವಾರು ಖ್ಯಾತನಾಮರ ಹೆಸರುಗಳು ಸಿಲುಕಿಕೊಂಡಿತ್ತು. ಖ್ಯಾತ ನಟ ನಾನಾ ಪಟೇಕರ್, ಅಲೋಕ್ ನಾಥ್, ಸುಭಾಷ್ ಘೈ, ಸಾಜಿದ್ ಖಾನ್, ಅನು ಮಲಿಕ್ ಮತ್ತು ಅರ್ಜುನ್ ಸರ್ಜಾ ಅವರನ್ನೂ ಸಹ #METOO ಅಭಿಯಾನ ಬಿಸಿ ಮುಟ್ಟಿಸಿತ್ತು. ಈ ಬಿಸಿ ಇದೀಗ ಅನುರಾಗ್ ಕಶ್ಯಪ್​ ಅವರಿಗೆ ತಗುಲಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

  Published by:MAshok Kumar
  First published: