Anupama Pathak Suicide: ಫೇಸ್​ಬುಕ್ ಲೈವ್​ ನಂತರ ಭೋಜ್​ಪುರಿ ನಟಿ ಆತ್ಮಹತ್ಯೆ; ಮುಂಬೈನಲ್ಲಿ ಅನುಪಮಾ ಪಾಠಕ್ ಸಾವು

40 ವರ್ಷದ ಭೋಜ್​ಪುರಿ ನಟಿ ಅನುಪಮಾ ಪಾಠಕ್ ದಹಿಸರ್​ನಲ್ಲಿರುವ ತಮ್ಮ ನಿವಾಸದಲ್ಲಿ ಆ. 2ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸಾವನ್ನಪ್ಪುವ ಹಿಂದಿನ ದಿನ ಅವರು ಫೇಸ್​ಬುಕ್ ಲೈವ್​ ಬಂದಿದ್ದರು.

Sushma Chakre | news18-kannada
Updated:August 7, 2020, 10:19 AM IST
Anupama Pathak Suicide: ಫೇಸ್​ಬುಕ್ ಲೈವ್​ ನಂತರ ಭೋಜ್​ಪುರಿ ನಟಿ ಆತ್ಮಹತ್ಯೆ; ಮುಂಬೈನಲ್ಲಿ ಅನುಪಮಾ ಪಾಠಕ್ ಸಾವು
ಅನುಪಮಾ ಪಾಠಕ್
  • Share this:
ಮುಂಬೈ (ಆ. 7): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು. ಆದರೆ, ಆ ಘಟನೆಯ ಬಳಿಕ ಒಬ್ಬರ ನಂತರ ಒಬ್ಬರು ನಟರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೀಡುಮಾಡಿದೆ. ನಿನ್ನೆಯಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಭೋಜ್​ಪುರಿ ನಟಿ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

40 ವರ್ಷದ ಭೋಜ್​ಪುರಿ ನಟಿ ಅನುಪಮಾ ಪಾಠಕ್ ದಹಿಸರ್​ನಲ್ಲಿರುವ ತಮ್ಮ ನಿವಾಸದಲ್ಲಿ ಆ. 2ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸಾವನ್ನಪ್ಪುವ ಹಿಂದಿನ ದಿನ ಅವರು ಫೇಸ್​ಬುಕ್ ಲೈವ್​ ಬಂದಿದ್ದರು. ತಮಗೆ ಮೋಸವಾಗಿದೆ, ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಲೈವ್​ನಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ನಿಮಗೇನಾದರೂ ಸಾಯಬೇಕೆನಿಸಿದರೆ ನಿಮ್ಮ ಸ್ನೇಹಿತರು, ಆಪ್ತರನ್ನೆಲ್ಲ ದೂರು ಮಾಡಿಕೊಳ್ಳಿ. ಆಗ ನೀವ ಸತ್ತ ನಂತರ ಅವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಜನರು ಸದಾ ಬೇರೆಯವರ ಎದುರು ನಿಮ್ಮನ್ನು ಗೇಲಿ ಮಾಡಿ, ಅವಮಾನ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ, ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದರಿಂದ ನಿಮ್ಮ ನೋವು ಇನ್ನಷ್ಟು ಹೆಚ್ಚಾಗುತ್ತದೆ. ಆಪ್ತ ಸ್ನೇಹಿತರನ್ನೂ ಈ ವಿಷಯದಲ್ಲಿ ನಂಬುವಂತಿಲ್ಲ ಎಂದು ಅವರು ಫೇಸ್​ಬುಕ್ ಲೈವ್​ನಲ್ಲಿ ಆ. 1ರಂದು ಹೇಳಿದ್ದರು.

ಇದನ್ನೂ ಓದಿ: ಸುಶಾಂತ್‌ ಸಿಂಗ್ ಆತ್ಮಹತ್ಯೆ ಪ್ರಕರಣ; ನಟಿ ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

ಅದರ ಮಾರನೇ ದಿನವೇ ಅನುಪಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಲವು ಭೋಜ್​ಪುರಿ ಸಿನಿಮಾ ಮತ್ತು ಟಿವಿಗಳಲ್ಲಿ ನಟಿಸಿರುವ ಅನುಪಮಾ ಪಾಠಕ್ ಬಿಹಾರದ ಪುರ್ನಿಯಾ ಜಿಲ್ಲೆಯವರು. ನಟಿಯಾಗಿದ್ದರಿಂದ ಅವರು ಮುಂಬೈನಲ್ಲಿ ವಾಸವಾಗಿದ್ದರು.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ತಾನು ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದ್ದು, ಆ ಹಣ ವಾಪಾಸ್ ಬಂದಿರಲಿಲ್ಲ. ಮಚ್ಯುರಿಟಿ ಡೇಟ್ ಮುಗಿದಿದ್ದರೂ ಹಣವನ್ನು ವಾಪಾಸ್ ನೀಡಿರಲಿಲ್ಲ ಎಂದು ಆಕೆ ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಮುಂಬೈನಲ್ಲಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಅವರ ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. 2 ದಿನಗಳ ಹಿಂದೆಯೇ ಅವರು ಸಾವನ್ನಪ್ಪಿರಬಹುದು ಎಂದು ಪೊಲೀಷರು ಅನುಮಾನ ವ್ಯಕ್ತಪಡಿಸಿದ್ದರು.
Published by: Sushma Chakre
First published: August 7, 2020, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading