Adoptionನಿಂದ ಬೇರೆಯವರ ಮಡಿಲು ಸೇರಿದ್ದ ಮಗು, ಈಗ ಹೆತ್ತ ತಂದೆ-ತಾಯಿಯ ಮದುವೆ ಮಾಡಿಸಿದೆ!
Anupama And Ajith: ವಿಶೇಷ ಅಂದ್ರೆ ತಮ್ಮ ಮಗು ಸಿಕ್ಕ ಸಂದರ್ಭದಲ್ಲಿ ಅವಿವಾಹಿತರಾಗಿದ್ದ ಜೋಡಿ ಈಗ ಕೇರಳದ ಸ್ಥಳೀಯ ರಿಜಿಸ್ಟರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇನ್ನು ದತ್ತು ವಿಷಯಕ್ಕೆ ಸಂಬಂಧಿಸಿದಂತೆ ಅನುಪಮಾ ಅವರು ಧರಣಿ ಕುಳಿತ ಹಿನ್ನೆಲೆಯಲ್ಲಿ ಈ ಸುದ್ದಿ ಕೇರಳಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು.
ಕಳೆದ ವರ್ಷ ಕೇರಳ(Kerala) ಮಾತ್ರವಲ್ಲದೇ ದೇಶಾದ್ಯಂತ(Country) ಸಾಕಷ್ಟು ಸುದ್ದಿ ಮಾಡಿದ್ದ ಪ್ರಕರಣದಲ್ಲಿ ಕೇರಳದ ದತ್ತು(Adoption) ವಿವಾದವೂ ಕೂಡ ಒಂದು.. ಸದ್ಯ ಈ ಪ್ರಕರಣದಲ್ಲಿ ನ್ಯಾಯಾಲಯ(Court) ಒಂದು ಪ್ರದೇಶಕ್ಕೆ ದತ್ತು ನೀಡಲಾಗಿದ್ದ ಮಗುವನ್ನು ಮರಳಿ ಅದರ ಸ್ವಂತ ಪೋಷಕರಿಗೆ ನೀಡುವಂತೆ ಆದೇಶ ನೀಡಿದೆ. ಹೀಗಾಗಿ ಆಂಧ್ರಪ್ರದೇಶಕ್ಕೆ(Andhra Pradesh) ದತ್ತು ಹೋಗಿದ್ದವರು ಮರಳಿ ಹೆತ್ತವರ ಪಾಲಿಗೆ ಸೇರ್ಪಡೆಯಾಗಿದೆ.. ವಿಶೇಷ ಅಂದ್ರೆ ಈ ಮಗು ಹುಟ್ಟುವಾಗ ಅದರ ಪೋಷಕರು ಇನ್ನೂ ಮದುವೆಯಾಗಿರಲಿಲ್ಲ(Marriage).. ಆದರೆ ಈಗ ಮಗು ಕೈ ಸೇರಿದ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಪುತ್ರನ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ
ಮಗು ಹುಟ್ಟುವ ಮೊದಲೇ ಅನುಪಮಾ ಹಾಗೂ ಅಜಿತ್ ಲಿವಿಂಗ್ ರೆಲೇಶನ್ಶಿಪ್ ನಲ್ಲಿ ಇದ್ದಿದ್ದರಿಂದ, ಇವರ ಮದುವೆ ಆಗಿರಲಿಲ್ಲ.. ಆದರೆ ಕಾರಣಾಂತರಗಳಿಂದ ಇವರ ಮಗುವನ್ನು ಅನುಪಮಾ ಪೋಷಕರು ಆಂಧ್ರಪ್ರದೇಶಕ್ಕೆ ದತ್ತು ನೀಡಿದ್ದರು. ಆದರೆ ನ್ಯಾಯಾಲಯದ ಮೂಲಕ ನಡೆದ ಹೋರಾಟದಲ್ಲಿ ಅನುಪಮ ಹಾಗೂ ಅಜಿತ್ ಮರಳಿ ತಮ್ಮ ಮಗುವನ್ನು ಪಡೆಯಲು ಯಶಸ್ವಿಯಾದರು. ಈಗ ವಿಶೇಷ ಅಂದ್ರೆ ತಮ್ಮ ಮಗು ಸಿಕ್ಕ ಸಂದರ್ಭದಲ್ಲಿ ಅವಿವಾಹಿತರಾಗಿದ್ದ ಜೋಡಿ ಈಗ ಕೇರಳದ ಸ್ಥಳೀಯ ರಿಜಿಸ್ಟರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇನ್ನು ದತ್ತು ವಿಷಯಕ್ಕೆ ಸಂಬಂಧಿಸಿದಂತೆ ಅನುಪಮಾ ಅವರು ಧರಣಿ ಕುಳಿತ ಹಿನ್ನೆಲೆಯಲ್ಲಿ ಈ ಸುದ್ದಿ ಕೇರಳಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಕೊನೆಗೂ ಅಮ್ಮನ ಮಡಿಸಲು ಸೇರಿದ ಕಂದಮ್ಮ ಇದೀಗ ಅವರ ಮದುವೆಯನ್ನೂ ಮಾಡಿಸಿದ್ದಾನೆ.ಇನ್ನು ಅನುಪಮಾ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಮಾಜಿ ಕಾರ್ಯಕರ್ತೆಯಾಗಿದ್ದು, ಅಜಿತ್ ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್ಐನ ಸ್ಥಳೀಯ ನಾಯಕರಾಗಿದ್ದರು
ಕಳೆದ ವರ್ಷದ ಅಕ್ಟೋಬರ್ 19ರಂದು ಅನುಪಮ ಹಾಗೂ ಅಜಿತ್ ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡಿದ್ರು. ಆದ್ರೆ ಅನುಪಮ ಮಗುವಿಗೆ ಜನ್ಮ ನೀಡಿದ ವೇಳೆ ಆಕೆಗೆ ಇನ್ನೂ ಮದುವೆ ಆಗಿರಲಿಲ್ಲ.. ಅಜಿತ್ ಎಂಬುವವರ ಜೊತೆಗೆ ಅನುಪಮಾ ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಇದ್ದರೂ.. ಹೀಗಾಗಿ ಅನುಪಮಾ ಮಗುವಿಗೆ ಜನ್ಮ ನೀಡಿರುವುದು ಗೊತ್ತಾದರೆ ಆಕೆಯ ತಂಗಿಯ ಮದುವೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅನುಪಮಾ ಪೋಷಕರು ಆಕೆಯ ಅನುಮತಿ ಇಲ್ಲದೆ ಗಂಡು ಮಗುವನ್ನು ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಮೂಲಕ ಆಂಧ್ರಪ್ರದೇಶಕ್ಕೆ ದತ್ತು ನೀಡಲಾಗಿತ್ತು.. ಅಲ್ಲದೇ ಅನುಪಮಾಗೆ ಮಗುವನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ನಂಬಿಸಲು ಯತ್ನಿಸಿದ್ರು.
ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಮುಂದೆ ಅಜಿತ್ ಹಾಗೂ ಅನುಪಮಾ ಧರಣಿ
ಅನುಪಮಾ ತಂದೆಗ ಸ್ಥಳೀಯ ಸಿಪಿಐಎಂ ನಾಯಕನಾಗಿರುವುದರಿಂದ ಪ್ರಭಾವಬೀರಿ ಮಗುವನ್ನ ಬೇರೆಕಡೆಗೆ ನೀಡಿರುವ ಅನುಮಾನಗೊಂಡ ಅನುಪಮ ಹಾಗೂ ಅಜಿತ್, ವಿಷಯ ತಿಳಿದು ಕೆಎಸ್ಸಿಸಿಡಬ್ಲ್ಯೂ ಕಚೇರಿಯ ಎದುರು ಹಲವಾರು ದಿನಗಳಿಂದ ಧರಣಿ ನಡೆಸಿದ್ದರು. ಹೀಗಾಗಿ ಕೇರಳ ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18ರಂದು ಆಂಧ್ರಪ್ರದೇಶಕ್ಕೆ ದತ್ತು ನೀಡಿದ್ದ ಮಗುವನ್ನು ವಾಪಸ್ ಕೇರಳಕ್ಕೆ ಮರಳಿ ತರುವಂತೆ ಕೆಎಸ್ಸಿಸಿಡಬ್ಲ್ಯೂ ಸೂಚನೆ ನೀಡಿತ್ತು.. ಅದರಂತೆ ಆಂಧ್ರಪ್ರದೇಶದಿಂದ ಕೇರಳಕ್ಕೆ ಬಂದ ಮಗುವನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಆರೈಕೆ ಸಂಸ್ಥೆಯೊಂದು ವಶಕ್ಕೆ ಪಡೆದುಕೊಂಡಿದ್ದು..
ಆಂಧ್ರಪ್ರದೇಶದಿಂದ ತಿರುವನಂತಪುರಕ್ಕೆ ಬಂದ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದ ಮಕ್ಕಳ ಕಲ್ಯಾಣ ಸಮಿತಿ, ಅನುಪಮ ಹಾಗೂ ಮಗುವಿನ ಡಿಎನ್ಎ ಪರೀಕ್ಷೆಗೆ ಆದೇಶ ನೀಡಿತ್ತು.. ಅದ್ರಂತೆ ತಿರುವನಂತಪುರಂನ ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯಲ್ಲಿ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು . ಡಿಎನ್ಎa ಪರೀಕ್ಷೆಯಲ್ಲಿ ಮಗು ಅನುಪಮಾಳದ್ದು ಎಂದು ಮಕ್ಕಳ ಕಲ್ಯಾಣ ಸಮಿತಿ ವರದಿ ಸಲ್ಲಿಸಿತ್ತು.. ಹೀಗಾಗಿ
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿಜು ಮೆನನ್ ಅನುಪಮಾ ಹಾಗೂ ಅಜಿತ್ ಗೆ ತಮ್ಮ ಒಂದು ವರ್ಷದ ಮಗುವನ್ನು ಒಪ್ಪಿಸಲು ಸೂಚಿಸಿದ್ದಾ
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ