ಕಾಂಗ್ರೆಸ್​ ಬಿಜೆಪಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾದ 'ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​' ಚಿತ್ರಕ್ಕೆ

ದಿ ಆಕ್ಸಿಡೆಂಟಲ್​ ಪ್ರೈ,ಮ್​ ಮಿನಿಸ್ಟರ್​ ಚಿತ್ರದ ದೃಶ್ಯ

ದಿ ಆಕ್ಸಿಡೆಂಟಲ್​ ಪ್ರೈ,ಮ್​ ಮಿನಿಸ್ಟರ್​ ಚಿತ್ರದ ದೃಶ್ಯ

  • News18
  • Last Updated :
  • Share this:
2019ರಲ್ಲಿ  ಎರಡು ಮಹಾನ್​ ರಾಜಕಾರಣಿಗಳ ಜೀವನಾಧರಿತ ಕಥೆಗಳು ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದೆ. ಅವೆಂದರೆ ಒಂದು ಠಾಕ್ರೆ ಹಾಗೂ ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​.

ಈಗಾಲೇ ಈ ಎರಡು ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಾಕಾಷ್ಟು ಕುತೂಹಲದ ಜೊತೆಗೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಗುರುವಾರ ಬಿಡುಗಡೆಯಾದ ಕಾಂಗ್ರೆಸ್​ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಜೀವನ್ನಾಧರಿತ 'ದಿ ಆಕ್ಸಿಡೆಂಟಲ್​  ಪ್ರೈಮ್​ ಮಿನಿಸ್ಟರ್'​ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

ಟ್ರೈಲರ್​ ಬಿಡುಗಡೆಯಾದ ಬಳಿಕ ಚಿತ್ರದ ವಿರುದ್ಧ ಕಾಂಗ್ರೆಸ್​ ನಾಯಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿತ್ರ ಸತ್ಯಗಳನ್ನು ಮರೆಮಾಚಿದೆ ಎಂದು ಆರೋಪಿಸಿದ್ದಾರೆ. ಇನ್ನು ಚಿತ್ರವನ್ನು ಯಾವುದೇ ಕಾರಣಕ್ಕೂ ಮಧ್ಯಪ್ರದೇಶದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಕಾಂಗ್ರೆಸ್​ ವಕ್ತಾರ, ಈ ಚಿತ್ರದ ಕುರಿತು ಮಾತನಾಡುವ ಮೂಲಕ ಅವರಿಗೆ ಪುಕ್ಕಟೆ ಪ್ರಚಾರ ನೀಡುವುದಿಲ್ಲ. ಚಿತ್ರವನ್ನು ನಾವು ನಿಷೇಧಿಸುವುದಿಲ್ಲ ಹಾಗೂ ಪ್ರತಿಭಟನೆ ಮಾಡುವುದಿಲ್ಲ ಎಂದಿದ್ಧಾರೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್​ ರಾಜಕೀಯದಲ್ಲಿ ಮನಮೋಹನ್​ ಸಿಂಗ್​ ಹೇಗೆ ಬಲಿಯಾದರು. ಹೇಗೆ ಪ್ರಧಾನಿಯಾದರೂ ಅವರ ಧ್ವನಿಯನ್ನು ಕುಗ್ಗಿಸಲಾಯಿತು ಎಂಬ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎಂದು ಟ್ರೈಲರ್​ ತಿಳಿಸುತ್ತಿದೆ.ಇನ್ನು ಟ್ರೇಲರ್​ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​ ಇದರಲ್ಲಿ ತಪ್ಪು ಮಾಹಿತಿಗಳನ್ನು ಬಿಂಬಿಸಲಾಗಿದೆ ಎಂದು ವಾದಿಸಿದೆ. ಇತ್ತ ಬಿಜೆಪಿ 10 ವರ್ಷಗಳ ಕಾಲ ಕುಟುಂಬವೊಂದು ದೇಶದ ಆಡಳಿತವನ್ನು ಹೇಗೆ ಹಿಡಿದಿಟ್ಟು ಕೊಂಡರು ಎಂಬುದು ಪ್ರದರ್ಶಿಸಲಾಗಿದೆ ಎಂದು ಚಿತ್ರದ ಕುರಿತು ಪ್ರಶಂಸೆ ವ್ಯಕ್ತಪಡಿಸಿದೆ.

ಇನ್ಜ ತಮ್ಮ ಜೀವನದ ಕುರಿತು ಚಿತ್ರ ಬಿಡುಗಡೆಯಾಗಿದ್ದರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಮನಮೋಹನ್​ ಸಿಂಗ್​ ಮುಂದಾಗಿಲ್ಲ.ಇನ್ನು ರಂದೀಪ್​ ಸುರ್ಜೇವಾಲ ಅವರ ಪುಸ್ತಕದ ಮೇಲೆ ಈ ಚಿತ್ರ ತೆಗೆಯಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, 2019ರ ಚುನಾವಣೆಗೆ ಬಿಜೆಪಿ ಈ ಚಿತ್ರದ ಮೂಲಕ ತಪ್ಪು ಪ್ರಚಾರಕ್ಕೆ ಮುಂದಾಗುತ್ತಿದೆ ಎಂದಿದ್ದಾರೆ.

ಇನ್ನು ಚಿತ್ರವನ್ನು ಬಿಡುಗಡೆಗೆ ಮುನ್ನ ನಮಗೆ ಮುಂಚಿತವಾಗಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಯುವ ಕಾಂಗ್ರೆಸ್​ ಬೇಡಿಕೆ ಇಟ್ಟಿದೆ.

ಇದನ್ನು ಓದಿ: Video: 'ಗೋಲ್ಡನ್​ ಸ್ಟೋರೀಸ್​ ಆಫ್​ ಕೆ.ಜಿ.ಎಫ್​': ಯಶ್​ ಗಡ್ಡ-ಹೇರ್​ಸ್ಟೈಲ್​ನಿಂದ ಆದ ರೀಟೇಕ್​ಗಳು ಎಷ್ಟು ಗೊತ್ತಾ..?

ಅನುಪಮ್​ ಖೇರ್​ ಪ್ರಧಾನ ಪಾತ್ರದಲ್ಲಿ ಮನಮೋಹನ್​ ಸಿಂಗ್​ ಆಗಿ ಕಾಣಿಸಿಕೊಂಡಿದ್ದಾರೆ. ಮೂರು ನಿಮಿಷದ ಟ್ರೈಲರ್​ ಸೋನಿಯಾ ಗಾಂಧಿಯ ನಿರ್ಧಾರಗಳು, ಹೇಗೆ ಸರ್ಕಾರದ ಮೇಲೆ ಪ್ರಭಾವ ಹೊಂದಿದ್ದವು. ಕಾಂಗ್ರೆಸ್​ ಯುವರಾಜನನ್ನು ರಾಜಕೀಯದಲ್ಲಿ ಬೆಳೆಸಲು ಕಾಂಗ್ರೆಸ್​ ತಯಾರಿ ನಡೆಸಿತು ಎಂಬ ಕಥಾ ಹಂದರ ಹೊಂದಿದೆ.

First published: