Ant Attack: ಇರುವೆ ದಾಳಿಗೆ ಊರು ಬಿಟ್ಟ ಜನರು! ಹಿಂದೆಂದೂ ಆಗಿರದ ವಿಚಿತ್ರ ಸಮಸ್ಯೆಯಿಂದ ಕಂಗಾಲು

ಹಳ್ಳಿಯ ಎಲ್ಲೆಂದರಲ್ಲಿ ಇರುವೆಗಳ ಹಿಂಡುಗಳು ಕಾಣಸಿಗುತ್ತವೆ.  ಮರಗಳು, ಬೇರುಗಳು, ಮರಳು, ಮರದ ರಾಶಿಗಳು, ಮನೆಯ ಗೋಡೆಗಳು, ವಿದ್ಯುತ್ ಫಲಕಗಳು ಸೇರಿದಂತೆ ಗ್ರಾಮದ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಇರುವೆಗಳು ಗೂಡು ಕಟ್ಟಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಪುರಿ: ಪ್ರವಾಹ ಬಂದ ಊರುಗಳಲ್ಲಿ ನೆರೆ ಇಳಿದ ನಂತರವೂ ಆಗುವ ಸಮಸ್ಯೆಗಳು ಒಂದೆರಡಲ್ಲ. ಹೀಗೆ ವಿಚಿತ್ರ ಸಮಸ್ಯೆಯೊಂದರಲ್ಲಿ ಸಿಲುಕಿದೆ ಪುರಿ ಜಿಲ್ಲೆಯ ಈ ಗ್ರಾಮ. ಇಡೀ ಗ್ರಾಮಕ್ಕೆ ಗ್ರಾಮವೇ ವಿಲಕ್ಷಣ ಸಮಸ್ಯೆಯ ವಿರುದ್ಧ ಹೋರಾಡುತ್ತಿದೆ.  ಇಡೀ ಊರಿನ ಮೇಲೆ ಇರುವೆಗಳು ಬೃಹತ್ ಆಕ್ರಮಣ (Ant Attack) ನಡೆಸಿವೆ.  ಬೆಂಕಿ ಇರುವೆಗಳೆಂದು ಶಂಕಿಸಲಾದ ಕೀಟಗಳ ದಂಡು ಒಡಿಶಾ ರಾಜ್ಯದ (Odisha)  ಪುರಿ ಸಮೀಪದ ಚಂದ್ರದೈಪುರ ಪಂಚಾಯತ್ ವ್ಯಾಪ್ತಿಯ ಬ್ರಾಹ್ಮಣಸಾಹಿ ಗ್ರಾಮವನ್ನು ವಶಪಡಿಸಿಕೊಂಡಿದೆ! ಇದರಿಂದ ಊರಿನ 100 ಕ್ಕೂ ಹೆಚ್ಚು ಕುಟುಂಬಗಳ ಜೀವನ ಶೋಚನೀಯವಾಗಿದೆ. ಮಾತ್ರವಲ್ಲದೆ ಕೆಲವರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆ ವಸತಿ ಮಾಡುವಂತೆಯೂ ಸಮಸ್ಯೆ ತಂದೊಡ್ಡಿದೆ.  

  ಹಳ್ಳಿಯ ಎಲ್ಲೆಂದರಲ್ಲಿ ಇರುವೆಗಳ ಹಿಂಡುಗಳು ಕಾಣಸಿಗುತ್ತವೆ.  ಮರಗಳು, ಬೇರುಗಳು, ಮರಳು, ಮರದ ರಾಶಿಗಳು, ಮನೆಯ ಗೋಡೆಗಳು, ವಿದ್ಯುತ್ ಫಲಕಗಳು ಸೇರಿದಂತೆ ಗ್ರಾಮದ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಇರುವೆಗಳು ಗೂಡು ಕಟ್ಟಿವೆ.

  ಬೆಂಕಿ ಇರುವೆಗಳ ರೂಪಾಂತರಿಗಳೇ?
  ಈ ಇರುವೆಯ ಹಾವಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಇತ್ತೀಚಿನ ವಾರಗಳಲ್ಲಿ ಮೂರು ಕುಟುಂಬಗಳು ಈಗಾಗಲೇ ಗ್ರಾಮವನ್ನು ತೊರೆದಿವೆ. ತಿಳಿ ಕೆಂಪು ಛಾಯೆಯ ಇರುವೆಗಳು ಸಾಮಾನ್ಯ ಇರುವೆಗಿಂತ ಸ್ವಲ್ಪ ದೊಡ್ಡದಾಗಿವೆ. ಪಶುವೈದ್ಯರು ಈ ಅಪಾಯಕಾರಿ ಇರುವೆಗಳು ಬೆಂಕಿ ಇರುವೆಗಳ ರೂಪಾಂತರ ತಳಿ ಆಗಿರಬಹುದು ಎಂದು ಶಂಕಿಸಿದ್ದಾರೆ.

  ಕೀಟಶಾಸ್ತ್ರಜ್ಞರ ಭೇಟಿ
  ಆದರೂ ಜಿಲ್ಲಾ ಕೀಟ ನಿಯಂತ್ರಣ ತಂಡದ ಸದಸ್ಯರು ಮತ್ತು ವಿಷಯವನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (OUAT) ತಜ್ಞರು, ಮಾದರಿಗಳನ್ನು ಕೀಟಶಾಸ್ತ್ರಜ್ಞರು ಪರೀಕ್ಷಿಸಿದ ನಂತರ ನಿಖರವಾಗಿ ಊಹಿಸಬಹುದು ಎಂದು ತಿಳಿಸಿದ್ದಾರೆ.

  ಇರುವೆ ಕಚ್ಚಿದ್ದರಿಂದ ಆರೋಗ್ಯ ಸಮಸ್ಯೆ
  ಇರುವೆಗಳು ಕಚ್ಚಿದ್ದರಿಂದ ಮಕ್ಕಳು, ವೃದ್ಧ ಮಹಿಳೆಯರು ಸೇರಿದಂತೆ ಹಲವರಿಗೆ ಸೋಂಕು, ಚರ್ಮ ದದ್ದು, ತುರಿಕೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿಷಪೂರಿತ ಇರುವೆಗಳು ಇಲಿಗಳು, ಹಾವುಗಳು, ಹಲ್ಲಿಗಳು, ಕಪ್ಪೆಗಳು ಮತ್ತು ಇತರ ತೆವಳುವ ಕೀಟಗಳು ಸೇರಿದಂತೆ ಪ್ರತಿಯೊಂದು ಜೀವಿಗಳ ಮೇಲೆ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥ ದೇಬಿ ಪ್ರಸಾದ್ ದಾಶ್ ಹೇಳಿದ್ದಾರೆ. ಜನರು ತಮ್ಮ ಮನೆಗಳಲ್ಲಿ ಊಟ ಮಾಡುವಾಗ ನೆಲದ ಮೇಲೆ ಕ್ರಿಮಿನಾಶಕ ಚಾಕ್‌ಗಳನ್ನು ಬಳಸಿ ಸುತ್ತುವರಿಯುವ ಪರಿಸ್ಥಿತಿ ಬಂದಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

  ಇದನ್ನೂ ಓದಿ: UK PM Election Result: ರಿಷಿ ಸುನಕ್​ಗೆ ಸೋಲು, ಲಿಜ್ ಟ್ರಸ್ ಬ್ರಿಟನ್ ಹೊಸ ಪ್ರಧಾನಿಯಾಗಿ ಆಯ್ಕೆ

  ಹಿಂದೆಂದೂ ಇಂತಹ ಸಮಸ್ಯೆ ಬಂದಿರಲಿಲ್ಲ
  "ಈ ಹಿಂದೆ ನಾವು ಇಂತಹ ಸಮಸ್ಯೆಯನ್ನು ಎದುರಿಸಿರಲಿಲ್ಲ. ಕುಮುದಾ ಡ್ಯಾಶ್, ರೇಣುಬಾಲಾ ಡ್ಯಾಶ್ ಮತ್ತು ನಬಕಿಶೋರ್ ಡ್ಯಾಶ್ ಅವರ ಕುಟುಂಬಗಳು ಈಗಾಗಲೇ ಗ್ರಾಮವನ್ನು ತೊರೆದಿದ್ದು, ಇನ್ನೂ ಅನೇಕರು ಪರಿಸ್ಥಿತಿ ಹದಗೆಟ್ಟರೆ ಶೀಘ್ರದಲ್ಲೇ ಗ್ರಾಮವನ್ನು ತೊರೆಯಲಿದ್ದಾರೆ ಎಂದು ಮತ್ತೋರ್ವ ಗ್ರಾಮಸ್ಥರಾದ ಪ್ರಕಾಶ್ ದಾಶ್ ಹೇಳಿದರು.

  ಕೀಟನಾಶಕ ಸಿಂಪಡಿಸಲು ಮನವಿ
  ಸ್ಥಳೀಯ ವಾರ್ಡ್ ಸದಸ್ಯ ರಾಜ್ ಪ್ರಸಾದ್ ದಾಶ್ ಮಾತನಾಡಿ, ಪ್ರವಾಹದ ನಂತರ ಸಮೀಪದ ಕಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚಾದ ನಂತರ ಅಪಾಯ ಪ್ರಾರಂಭವಾಗಿದೆ. ಇಡೀ ಗ್ರಾಮದಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಕೀಟನಾಶಕ ಸಿಂಪಡಿಸುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ ಎಂದರು.

  ಇದನ್ನೂ ಓದಿ: Arshdeep Singh: ಅರ್ಶದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದನ್ನೇ ಬಳಸಿ ಭಾರತವನ್ನು ಒಡೆಯಲು ಯತ್ನಿಸಿದ ಪಾಕ್

  ಆದಷ್ಟು ಬೇಗ ಸಮಸ್ಯೆ ಪರಿಹರಿಸಿ
  ಇರುವೆಗಳಿಂದ ಬಿಡುಗಡೆಯಾಗುವ ಫಾರ್ಮಿಕ್ ಆಮ್ಲದ ಕಾರಣದಿಂದಾಗಿ ಕೆಲವು ಹಳ್ಳಿಗರಲ್ಲಿ ಚರ್ಮದ ಉರಿ ಉಂಟಾಗಬಹುದು ಎಂದು ಅವರು ಹೇಳಿದರು. ನಾವು ಇರುವೆಗಳ ಗೂಡನ್ನು ನಾಶಪಡಿಸಲು ವೈಜ್ಞಾನಿಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು. ಇರುವುಗಳ ಗೂಡು ಇರುವ ಪೊದೆ ಸ್ವಚ್ಛಗೊಳಿಸುವ ಮತ್ತು ಕೀಟನಾಶಕ ಸಿಂಪಡಣೆ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಬಿಡಿಒ ಹೇಳಿದ್ದಾರೆ. ಇರುವೆಗಳಿಂದ ಆರೋಗ್ಯ ಸಮಸ್ಯೆ ಉಂಟಾದ ಜನರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳು ಗ್ರಾಮಕ್ಕೆ ಭೇಟಿ ನೀಡುತ್ತಿವೆ ಎಂದು ಅವರು ಹೇಳಿದರು.
  Published by:guruganesh bhat
  First published: