• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • McAfee ಆ್ಯಂಟಿ-ವೈರಸ್​ ಸಂಸ್ಥಾಪಕ ಜೈಲಿನಲ್ಲಿ ಆತ್ಮಹತ್ಯೆ; ಅದೊಂದು ಆರೋಪಕ್ಕೆ ಜಾನ್​​ ಮೆಕ್​ಅಫೀ ನೇಣು ಹಾಕಿಕೊಂಡರೇ?

McAfee ಆ್ಯಂಟಿ-ವೈರಸ್​ ಸಂಸ್ಥಾಪಕ ಜೈಲಿನಲ್ಲಿ ಆತ್ಮಹತ್ಯೆ; ಅದೊಂದು ಆರೋಪಕ್ಕೆ ಜಾನ್​​ ಮೆಕ್​ಅಫೀ ನೇಣು ಹಾಕಿಕೊಂಡರೇ?

John McAfee

John McAfee

John McAfee dies: ಜಾನ್​ ಮೆಕ್​ಅಫೀ ಅವರು McAfee ಆ್ಯಂಟಿವೈರಸ್​  ಅನ್ನು ಕಂಡುಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. McAfee ಎಂಬ ವಿಶ್ವದ ಮೊದಲ ವಾಣಿಜ್ಯ  ಆ್ಯಂಟಿವೈರಸ್​ ಅನ್ನು ರಚಿಸಿದ್ದರು. ಆ ಮೂಲಕ ಖ್ಯಾತಿ ಗಳಿಸಿದರು.

  • Share this:

ಯುಎಸ್​ ಟೆಕ್ನಾಲಜಿ  ಮತ್ತು McAfee ಆ್ಯಂಟಿವೈರಸ್ ಸಂಸ್ಥಾಪಕ ಜಾನ್​ ಮೆಕ್​ಅಫೀ ಜೈಲಿನಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿದ್ದಾರೆ. ಕಳೆದ 9 ತಿಂಗಳಿನಿಂದ ಮೆಕ್​ ಅಫೀ ಜೈಲಿನಲ್ಲಿದ್ದರು. ಖಿನ್ನತೆಯಿಂದಾಗಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ವಕೀಲ ಜೇವಿಯರ್​ ವಿಲ್ಲಾಬ್ಲಾ ಹೇಳಿದ್ದಾರೆ


ಜಾನ್​ ಮೆಕ್​ಅಫೀ ಅವರು McAfee ಆ್ಯಂಟಿವೈರಸ್​  ಅನ್ನು ಕಂಡುಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. McAfee ಎಂಬ ವಿಶ್ವದ ಮೊದಲ ವಾಣಿಜ್ಯ  ಆ್ಯಂಟಿವೈರಸ್​ ಅನ್ನು ರಚಿಸಿದ್ದರು. ಆ ಮೂಲಕ ಖ್ಯಾತಿ ಗಳಿಸಿದರು.


ತೆರಿಗೆ ವಂಚನೆ ಆರೋಪದ ಮೇರೆಗೆ​  ಜಾನ್​ ಮೆಕ್​ಅಫೀ ಜೈಲು ಸೇರಿದ್ದರು. ಅದರ ಜತೆಗೆ ನ್ಯೂಯಾರ್ಕ್​​​ನಲ್ಲಿ ಟೆನ್ನೀಸ್​ ಮತ್ತು ಕ್ರಿಪ್ಟೊಕರೆನ್ಸಿ ಆರೋಪ ಹೊರಿಸಲಾಗಿತ್ತು. ಹಾಗಾಗಿ ಕಳೆದ ವರ್ಷ ಅಕ್ಟೋಬರ್​ 3 ರಂದು ಬಾರ್ಸಿಲೋನಾದ ಏರ್​ಪೋರ್ಟ್​ನಲ್ಲಿ ಬಂಧಿಸಲಾಯಿತು.


ತೆರಿಗೆ ವಂಚನೆ ವಿಚಾರವಾಗಿ ಜಾನ್​ ಮೆಕ್​ಅಫೀ ಕಣ್ಣಿಗೆ ಕಾಣದಂತೆ ಓಡಾಡುತ್ತಿದ್ದರು. ಅವರು ಎಲ್ಲಿ ವಾಸಿಸುತ್ತಿದ್ದರು ಎಂಬುದನ್ನು ತಿಳಿಯಲು ಸಾಧ್ಯವಾಗಿರಲಿಲ್ಲ. ಆದರೀಗ ಬಂಧನದಿಂದಾಗಿ ಜೈಲು ವಾಸ ಅನುಭವಿಸುತ್ತಿದ್ದ ಅವರು ಖಿನ್ನತೆಯಿಂದಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


1987ರಲ್ಲಿ ಜಾನ್ ​ಮೆಕ್​ಅಫೀ ವೀಶ್ವದ ಮೊದಲ ವಾಣಿಜ್ಯ ಆ್ಯಂಟಿ ವೈರಸ್​​ ಅನ್ನು ಕಂಡುಹಿಡಿದರು. 2011ರಲ್ಲಿ ಜಾನ್​ ಮೆಕ್​ಅಫೀ ತನ್ನ ಕಂಪನಿಯನ್ನು ಇಂಟೆಲ್​ಗೆ ಮಾರಿದರು. ಆದಾಗ್ಯೂ ಸಾಫ್ಟ್​​ವೇರ್​​ ಪ್ರೋಗ್ರಾಂ ಅವರ ಹೆಸರಿನಲ್ಲಿ ನಡೆಯುತ್ತಿದೆ. ಪ್ರಸ್ತುತ ಈ ಆ್ಯಂಟಿ ವೈರಸ್​ ಅನ್ನು 500 ದಶಲಕ್ಷ ಜನರು ತಮ್ಮ ಕಂಪ್ಯೂಟರ್​ ಮೂಲಕ ಬಳಸುತ್ತಿದ್ದಾರೆ.

First published: