Antibiotics: ಮಕ್ಕಳಿಗೆ ಕೊಡುವ ಆ್ಯಂಟಿಬಯೋಟಿಕ್ ಈ ಸಮಸ್ಯೆಗಳಿಗೆ ಕಾರಣವಾಗಬಹುದು

ಶಿಶುಗಳಿಗೆ ಆ್ಯಂಟಿಬಯೋಟಿಕ್ ಔಷಧಿಗಳನ್ನು ನೀಡಿದರೆ ಮುಂದೆ ಅವು ಬೆಳೆದಂತೆ ಗ್ಯಾಸ್ಟೋಇಂಟಸ್ಟೈನಲ್ ಅಥವಾ ಜೀರ್ಣಕ್ರಿಯೆಗಳಿಗೆ ಸಂಬಂಧಿಸಿದಂತೆ ಗಟ್ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಆದರೆ, ಈ ಸಮಸ್ಯೆ ಎಲ್ಲಿಯವರೆಗೆ ಇರುತ್ತದೆ ಅಥವಾ ಯಾವಾಗ ಕಡಿಮೆಯಾಗಬಹುದು ಎಂಬುದಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವೈದ್ಯಕೀಯ ವಿಜ್ಞಾನದಲ್ಲಿ ಆ್ಯಂಟಿಬಯೋಟಿಕ್ (Antibiotic) ಎಂಬುದು ಬಲು ಪರಿಣಾಮಕಾರಿ ಔಷಧಿ ಎಂದು ಸಹಜವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ, ಈ ಔಷಧಿಗೆ (Medicine) ಸಂಬಂಧಿಸಿದಂತೆ ಅಧ್ಯಯನ ವರದಿಯೊಂದು ಬಂದಿದೆ. ಅದೇನಪ್ಪಾ ಅಂದರೆ ಚಿಕ್ಕ ಮಕ್ಕಳು ಅಥವಾ ಶಿಶುಗಳಿಗೆ ನೀಡಲಾಗುವ ಆ್ಯಂಟಿಬಯೋಟಿಕ್ ಔಷಧಿಗಳು ಮುಂದೆ ಆ ಮಕ್ಕಳು (Children) ಬೆಳೆದಂತೆ ಅವುಗಳಲ್ಲಿ ಗಟ್ ಅಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸಮಸ್ಯೆಗಳುಂಟಾಗಲು ಕಾರಣವಾಗಬಹುದೆಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವೊಂದು ಈ ಬಗ್ಗೆ ಇಲಿಗಳ ಮೇಲೆ ಸಂಶೋಧನೆಯೊಂದನ್ನು (Research) ಮಾಡಿದ್ದು ಆ ಕುರಿತು ವರದಿಯನ್ನು ದಿ ಜರ್ನಲ್ ಆಫ್ ಫಿಸಿಯೋಲಾಜಿಯಲ್ಲಿ ಪ್ರಕಟಿಸಿದೆ.

ಮಕ್ಕಳಿಗೆ ಆ್ಯಂಟಿಬಯೋಟಿಕ್ ನೀಡಿದರೆ ಏನಾಗುತ್ತೆ?
ಸಂಶೋಧಕರ ತಂಡವು ಆಗ ತಾನೆ ಜನಿಸಿದ ಇಲಿಗಳ ಮೇಲೆ ಆ್ಯಂಟಿಬಯೋಟಿಕ್ ಗಳನ್ನು ಬಳಸಿದ್ದು ಮುಂದೆ ಅವುಗಳು ಮೈಕ್ರೋಬಯೋಟಾ, ಎಂಟರಿಕ್ ನರ್ವಸ್ ಸಿಸ್ಟಮ್ ಹಾಗೂ ಗಟ್ ಕಾರ್ಯಪ್ರಣಾಳಿಯಲ್ಲಿ ಸಮಸ್ಯೆಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದನ್ನು ತಂಡವು ದಾಖಲಿಸಿದೆ. ಆ ಮೂಲಕ, ಶಿಶುಗಳಿಗೆ ಆ್ಯಂಟಿಬಯೋಟಿಕ್ ಔಷಧಿಗಳನ್ನು ನೀಡಿದರೆ ಮುಂದೆ ಅವು ಬೆಳೆದಂತೆ ಗ್ಯಾಸ್ಟೋಇಂಟಸ್ಟೈನಲ್ ಅಥವಾ ಜೀರ್ಣಕ್ರಿಯೆಗಳಿಗೆ ಸಂಬಂಧಿಸಿದಂತೆ ಗಟ್ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಆದರೆ, ಈ ಸಮಸ್ಯೆ ಎಲ್ಲಿಯವರೆಗೆ ಇರುತ್ತದೆ ಅಥವಾ ಯಾವಾಗ ಕಡಿಮೆಯಾಗಬಹುದು ಎಂಬುದಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Tumor: ಮಹಿಳೆಯ ಹೊಟ್ಟೆಯಲ್ಲಿತ್ತು 4 ಕೆಜಿ ಫುಟ್‌ಬಾಲ್ ಗಾತ್ರದ ಗೆಡ್ಡೆ! ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

ಈ ಸಂಶೋಧನಾ ತಂಡದ ನೇತೃತ್ವವಹಿಸಿದ್ದ ಡಾ. ಜೈಮಿ ಫೂಂಗ್ ಅವರು ಮಾತನಾಡುತ್ತ, "ನಾವು ನಮ್ಮ ಆವಿಷ್ಕಾರ ಮಾಡಿದ ವಿಷಯಗಳ ಬಗ್ಗೆ ಉತ್ಸುಕರಾಗಿದ್ದು ಇದರಲ್ಲಿ ತಿಳಿದುಬಂದಿರುವ ಅಂಶವೆಂದರೆ ಆಗ ತಾನೇ ಜನಿಸುವ ಮಕ್ಕಳಿಗೆ ಆ್ಯಂಟಿಬಯೋಟಿಕ್ ನೀಡಿದರೆ ಅದು ಅವುಗಳ ಎಂಟರಿಕ್ ನರ್ವಸ್ ವ್ಯವಸ್ಥೆಯ ಮೇಲೆ ದೀರ್ಘಕಾಲಿಕ ಪರಿಣಾಮಗಳನ್ನು ಬೀರಬಹುದು" ಎಂದಿದ್ದಾರೆ.

ಇಲಿಗಳ ಮೇಲೆ ಪ್ರಯೋಗ
ತಂಡವು, ತಮ್ಮ ಈ ಅಧ್ಯಯನಕ್ಕಾಗಿ ಇಲಿಗಳನ್ನು ಬಳಸಿತ್ತು. ಆಗತಾನೇ ಜನಿಸಿದ್ದ ಇಲಿಗಳಿಗೆ ಸುಮಾರು ಹತ್ತು ದಿನಗಳ ಕಾಲ ಆ್ಯಂಟಿಬಯೋಟಿಕ್ ಔಷಧಿಯಾದ ವ್ಯಾಂಕೋಮೈಸಿನ್ ಅನ್ನು ಓರಲ್ ಡೋಸ್ ಆಗಿ ನೀಡಲಾಗಿತ್ತು. ನಂತರ ಅವು ಪ್ರೌಢಾವಸ್ಥೆಗೆ ಬರುವವರೆಗೆ (ಆರು ವಾರಗಳು) ಸಹಜವಾಗಿಯೇ ಬೆಳೆದವು. ತದನಂತರ ಅವುಗಳ ಗಟ್ ಅಂಗಾಂಶದ ರಚನೆ, ನರವ್ಯವಸ್ಥೆ, ಮೈಕ್ರೋಬಯೋಟಾ ಮುಂತಾದವುಗಳನ್ನು ಅಳೆಯಲಾಯಿತು.

ಈ ಸಂದರ್ಭದಲ್ಲಿ ತಿಳಿದುಬಂದ ವಿಷಯವೆಂದರೆ ಜನಿಸಿದಾಗ ನೀಡಿದ್ದ ಆ್ಯಂಟಿಬಯೋಟಿಕ್ ನಿಂದಾಗಿ ಪ್ರೌಢಾವಸ್ಥೆಯಲ್ಲಿದ್ದ ಗಂಡು ಹಾಗೂ ಹೆಣ್ಣು ಇಲಿಗಳಲ್ಲಿ ಗಟ್ ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯತ್ಯಾಸಗಳು ವಿಭಿನ್ನವಾಗಿರುವುದು ಕಂಡುಬಂದಿದೆ. ತಂಡಕ್ಕೆ ಈ ಬಗ್ಗೆ ತಿಳಿದುಬಂದ ವಿಚಾರವೆಂದರೆ ಹೆಣ್ಣು ಇಲಿಗಳಲ್ಲಿ ಆಹಾರವು ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಹೋಗಲು ತೆಗೆದುಕೊಳ್ಳುವ ಸಮಯಕ್ಕನುಗುಣವಾಗಿ ದೀರ್ಘ ಹಾಗೂ ಸ್ಪಷ್ಟವಾದ ಗಟ್ ಪ್ರಸರಣ ಕಂಡುಬಂದರೆ, ಗಂಡು ಇಲಿಗಳು ವಿಸರ್ಜಿಸಿದ ಮಲದ ತೂಕವು ಕಡಿಮೆಯಾಗಿತ್ತು.

ಇದನ್ನೂ ಓದಿ:  Fatty Liver: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ

ಈ ಫಲಿತಾಂಶಗಳನ್ನು ಸೂಕ್ಷ್ಮವಾಗಿ ದಾಖಲಿಸಿದ ಸಂಶೋಧಕರ ತಂಡವು ತದನಂತರ ಅದನ್ನು ವಿಸ್ತಾರವಾಗಿ ವಿಶ್ಲೇಷಣೆ ನಡೆಸಿತು. ಅಂತಿಮವಾಗಿ ತಂಡವು ಆ್ಯಂಟಿಬಯೋಟಿಕ್ ಅನ್ನು ಹುಟ್ಟಿದ ಶಿಶುಗಳಲ್ಲಿ ನೀಡಿದರೆ ಮುಂದೆ ಅವು ಬೆಳೆದಾಗ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ತೀರ್ಮಾನಕ್ಕೆ ಬಂದಿತು.

ಅಧ್ಯಯನದ ಮುಖ್ಯಾಂಶಗಳು

  • ಹುಟ್ಟಿದ ಮಕ್ಕಳಿಗೆ ಆ್ಯಂಟಿಬಯೋಟಿಕ್ ನೀಡಿದರೆ ಮುಂದೆ ಅವು ಬೆಳೆದು ಪ್ರೌಢಾವಸ್ಥೆಗೆ ತಲುಪಿದಾಗ ಗಟ್ ಸಮಸ್ಯೆಗಳನ್ನು ಎದುರಿಸಬಹುದು

  • ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬರ್ನ್ ವಿವಿಯ ಸಂಶೋಧಕರ ತಂಡವು ಈ ಸಂಶೋಧನಾಧ್ಯಯನವನ್ನು ನಡೆಸಿದೆ.

  • ಈ ಸಂಶೋಧನೆಯನ್ನು ಆಗ ತಾನೆ ಹುಟ್ಟಿದ ಇಲಿ ಮರಿಗಳ ಮೇಲೆ ನಡೆಸಲಾಗಿದೆ.

Published by:Ashwini Prabhu
First published: