• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Republic Day 2022: ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದೇಶ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ-ಗಲ್ಲಿ ಗಲ್ಲಿಯಲ್ಲೂ ಖಾಕಿ ಹದ್ದಿನಕಣ್ಣು!

Republic Day 2022: ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದೇಶ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ-ಗಲ್ಲಿ ಗಲ್ಲಿಯಲ್ಲೂ ಖಾಕಿ ಹದ್ದಿನಕಣ್ಣು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ಭದ್ರತೆಗೆ ಧಕ್ಕೆ ತರಲು ಹವಣಿಸುತ್ತಿರುವ ಉಗ್ರರು, ಗಣರಾಜ್ಯೋತ್ಸವವನ್ನು ಟಾರ್ಗೆಟ್ ಮಾಡುತ್ತಿರುವುದು ಹೊಸದೇನಲ್ಲ. ಈ ಬಾರಿಯೂ ಉಗ್ರ ದಾಳಿಯ ಆತಂಕವಿದ್ದು, ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಖ್ಯವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಖಾಕಿ ಸರ್ಪಗಾವಲು ಹಾಕಲಾಗಿದೆ.

ಮುಂದೆ ಓದಿ ...
  • Share this:

ಜನವರಿ 26 ಸಮೀಪಿಸುತ್ತಿದೆ. 73ನೇ ಗಣರಾಜ್ಯೋತ್ಸವದ (Republic Day) ಸಂಭ್ರಮಕ್ಕೆ ಇಡೀ ದೇಶ ಸಜ್ಜಾಗುತ್ತಿದೆ. ಕೋವಿಡ್ (Covid) ಆತಂಕದ ನಡುವೆಯೂ ಪ್ರಜಾರಾಜ್ಯೋತ್ಸವದ ಆಚರಣೆಗೆ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆಯೆ ಉಗ್ರರ ದಾಳಿ (Terrorist Attack) ಆತಂಕವಂತೂ ಇದ್ದೇ ಇದೆ. ದೇಶದ ಭದ್ರತೆಗೆ ಧಕ್ಕೆ ತರಲು ಹವಣಿಸುತ್ತಿರುವ ಉಗ್ರರು, ಗಣರಾಜ್ಯೋತ್ಸವವನ್ನು ಟಾರ್ಗೆಟ್ ಮಾಡುತ್ತಿರುವುದು ಹೊಸದೇನಲ್ಲ. ಈ ಬಾರಿಯೂ ಉಗ್ರ ದಾಳಿಯ ಆತಂಕವಿದ್ದು, ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಖ್ಯವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಖಾಕಿ ಸರ್ಪಗಾವಲು ಹಾಕಲಾಗಿದೆ. ಕಳೆದ ಬಾರಿ ರೈತರ ಹೋರಾಟದ ಹೆಸರಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆಸಲಾಗಿತ್ತು. ಹೀಗಾಗಿ ಈ ಬಾರಿ ಮತ್ತಷ್ಟು ಎಚ್ಚರಿಕೆ ವಹಿಸಲಾಗಿದ್ದು, ಇಡೀ ದೆಹಲಿಯನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.


20 ಸಾವಿರ ಪೊಲೀಸರಿಂದ ಭದ್ರತೆ


ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಉಗ್ರರ ದಾಳಿ ಆತಂಕ, ವಿವಿಧ ಪ್ರತಿಭಟನೆ ನಡೆಯೋ ಸಂಭವ ಇರುವುದರಿಂದ ಎಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ. ದೆಹಲಿಯಾದ್ಯಂತ ಒಟ್ಟು 20 ಸಾವಿರ ಪೊಲೀಸರು ಹಾಗೂ ವಿವಿಧ ರೀತಿಯ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೆಹಲಿ ವಿಭಾಗದ ಡೆಪ್ಯುಟಿ ಕಮಿಷನರ್‌ಗಳು,ಸಹಾಯಕ ಪೊಲೀಸ್ ಕಮಿಷನರ್‌ಗಳು,ಇನ್‌ಸ್ಪೆಕ್ಟರ್‌ಗಳು ಮತ್ತು ಕಮಾಂಡರ್‌ಗಳು ಸೇರಿದಂತೆ ದೆಹಲಿ ಪೊಲೀಸರು ಪ್ರಸ್ತುತ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 65 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳೂ (CPF) ಸಹ ಭದ್ರತೆಗಾಗಿ ನಿಯೋಜಿಸಲ್ಪಟ್ಟಿವೆ.


ಇದನ್ನು ಓದಿ : ಕರ್ಹಾಲ್ ನಿಂದ ಕಣಕ್ಕೆ ಇಳಿಯಲಿರುವ ಅಖಿಲೇಶ್​ ಯಾದವ್​; ಸಿಎಂ ಅಭ್ಯರ್ಥಿ ನಾನಲ್ಲ ಎಂದ ಪ್ರಿಯಾಂಕಾ


ದೆಹಲಿಯಲ್ಲಿ ಡ್ರೋಣ್’ಗಳ ಮೇಲೆ ಖಾಕಿ ಕಣ್ಣು


ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿ, ದೇಶದ ಭದ್ರತೆಗೆ ಧಕ್ಕೆ ತರಬೇಕು, ಆ ಮೂಲಕ ಜನರಲ್ಲಿ ಆತಂಕ ಮೂಡಿಸಬೇಕು ಅನ್ನುವುದು ಉಗ್ರರ ಪ್ಲಾನ್. ಹೀಗಾಗಿ ಗಣರಾಜ್ಯೋತ್ಸವದಂದು ದಾಳಿ ಮಾಡಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉಗ್ರರು ಯಾವುದೇ ರೀತಿಯಲ್ಲಾದರೂ ತಮ್ಮ ಕಾರ್ಯ ಸಾಧಿಸಬಹುದು. ಹೀಗಾಗಿ ದೆಹಲಿ ಪೊಲೀಸರು ಬಹಳ ಅಲರ್ಟ್ ಆಗಿದ್ದಾರೆ. ದೆಹಲಿಯಾದ್ಯಂತ ಡ್ರೋಣ್ ಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. 26 ಆಂಟಿ ಡ್ರೋಣ್ ಪಡೆಗಳನ್ನು ನೇಮಿಸಲಾಗಿದೆ.


ಉತ್ತರ ಭಾರತದಾದ್ಯಂತ ತೀವ್ರ ಕಟ್ಟೆಚ್ಚರ


ಇನ್ನು ಬರೀ ನವದೆಹಲಿ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮುಖ್ಯವಾಗಿ ಉತ್ತರ ಪ್ರದೇಶ, ಪಂಜಾಬ್, ಬಿಹಾರ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.ಮುಖ್ಯವಾಗಿ ಭಾರತ-ಪಾಕಿಸ್ತಾನ ಗಡಿ, ಭಾರತ-ನೇಪಾಳ ಗಡಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇನ್ನು ಜನವರಿ 26ರಂದು ಬಿಹಾರದಲ್ಲಿ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ರೈಲು ಸೇವೆಯನ್ನೂ ಸಹ ರದ್ದುಗೊಳಿಸಲಾಗಿದೆ.


ಇದನ್ನು ಓದಿ : ಗಣರಾಜ್ಯೋತ್ಸವದ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಚಿತ್ರ


ಗಣರಾಜ್ಯೋತ್ಸವ ಪರೇಡ್​ಗೂ ಭದ್ರತೆ


ಗಣರಾಜ್ಯೋತ್ಸವ ದಿನಾಚರಣೆ ವಿಶೇಷ ಆಕರ್ಷಣೆಯಾದ ಪರೇಡ್ ಗೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ವಿಜಯ್ ಚೌಕ’ನಿಂದ ಆರಂಭವಾಗುವ ಪರೇಡ್ ನೇಷನಲ್ ಸ್ಟೇಡಿಯಂ ಪ್ರವೇಶಿಸಲಿದೆ. ಫುಲ್ ಡ್ರೆಸ್ ರಿಹರ್ಸಲ್ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೈಲು, ಮೆಟ್ರೋ ಹಾಗೂ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ರೈಲ್ವೇ ಮಾಹಿತಿಯಂತೆ ಜನವರಿ 23 ಹಾಗೂ 26 ರಂದು ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅದೇ ರೀತಿ ರಸ್ತೆ ಸಂಚಾರದಲ್ಲಿ ಕೂಡ ನಿರ್ಬಂಧಗಳನ್ನು ಹೇರಲಾಗಿದೆ. ವಿಜಯ್ ಚೌಕ್ನಿಂದ ಇಂಡಿಯಾ ಗೇಟ್ ವರೆಗಿನ ರಾಜ್ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ಮುಗಿಯುವ ವರೆಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.


(ಬರಹ : ಅಣ್ಣಪ್ಪ ಆಚಾರ್ಯ)

Published by:Vasudeva M
First published: