Kulgam Terror Attack: ಮತ್ತೆ ಕಾಶ್ಮೀರದಲ್ಲಿ ಗುಂಡಿನ ಮೊರೆತ- ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯ

Kulgam Terror Attack.: ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಮಂಜ್ಗಾಮ್​ ಪ್ರದೇಶದಲ್ಲಿ ಉಗ್ರರು ಏಕಾಏಕಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾಶ್ಮೀರದಲ್ಲಿ(Kashmir) ಭಯೋತ್ಪಾದಕರ(Trrorist) ಅಟ್ಟಹಾಸ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ ಉಗ್ರರ ಉಪಟಳ ಜೋರಾಗಿದೆ. ಅದರಲ್ಲೂ ಅಫ್ಘಾನಿಸ್ತಾನವನ್ನ ತಾಲಿಬಾನಿಗಳು(Taliban) ವಶ ಪಡಿಸಿಕೊಳ್ಳುತ್ತಿದ್ದಂತೆ ಕಾಶ್ಮೀರದಲ್ಲಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಒಂದು 5 ದಿನದ ಅಂತರದಲ್ಲಿ 5 ಬಾರಿ ದಾಳಿ ನಡೆಸಿ ತಮ್ಮ ಕ್ರೌರ್ಯ ಮೆರೆದಿದ್ದಾರೆ. ಮೊನ್ನೆ ಶ್ರೀನಗರದ ಬಳಿಯ ಶಾಲೆಯೊಂದಕ್ಕೆ ನುಗ್ಗಿದ್ದ ಉಗ್ರರು ಇಬ್ಬರು ಶಿಕ್ಷಕರನ್ನ ಬಲಿ ಪಡೆದಿದ್ದರು. ಮತ್ತೆ ಈಗ ಉಗ್ರರು ಕುಲ್ಗಾಮ್​ನಲ್ಲಿ(Kulgam) ಅಟ್ಟಹಾಸ ಮೆರೆದಿದ್ದು, ಇಬ್ಬರು ಪೊಲೀಸರಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.

  ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಮಂಜ್ಗಾಮ್​ ಪ್ರದೇಶದಲ್ಲಿ ಉಗ್ರರು ಏಕಾಏಕಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

  ಗಾಯಗೊಂಡ ಅಧಿಕಾರಿಗಳನ್ನ ಜಹೂರ್​ ಅಹ್ಮದ್​ ಹಾಗೂ ಇಮ್ರಾನ್​ ಅಹ್ಮದ್​ ಎಂದು ಗುರುತಿಸಲಾಗಿದೆ. ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದಿನಂತೆ ಇವರಿಬ್ಬರು ತಮ್ಮ ಕೆಲಸಕ್ಕೆ ಹಾಜರಾಗಿದ್ದರು. ​ಈ ವೇಳೆ ಏಕಾಏಕಿ ಎಂಟ್ರಿಯಾದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಮತ್ತಷ್ಟು ಪೊಲೀಸರು ಬಂದಿದ್ದಾರೆ. ಇದನ್ನು ಕಂಡ ಉಗ್ರರು ಗುಡ್ಡಗಾಡು ಪ್ರದೇಶ ಒಳಗೆ ಹೋಗಿ ಎಸ್ಕೇಪ್​ ಆಗಿದ್ದಾರೆ. ಇತ್ತ ಗಾಯಗೊಂಡಿದ್ದ ಇಬ್ಬರು ಪೊಲೀಸ್​ ಅಧಿಕಾರಿಯನ್ನ ಉಳಿದ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಮತ್ತೆ ಘಟನೆ ನಡೆದ ಸ್ಥಳವನ್ನ ಸುತ್ತುವರೆದು ಉಗ್ರರಿಗಾಗಿ ಬಲೆ ಬೀಸಿದ್ದಾರೆ.

  ಇದನ್ನೂ ಓದಿ: ಲಖೀಂಪುರ್​ ಖೇರಿ ಹತ್ಯಾಕಾಂಡ; ಪ್ರಮುಖ ಆರೋಪಿ, ಸಚಿವರ ಪುತ್ರ ಆಶೀಶ್ ಮಿಶ್ರಾ ಬಂಧನ!

  5 ದಿನ , 5 ಅಟ್ಯಾಕ್​, 5 ಸಾವು, ಇಬ್ಬರಿಗೆ ಗಾಯ
  ಅಕ್ಟೋಬರ್ 5ರಿಂದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಶ ಶುರುವಾಗಿದೆ, ಅ. 5ರಂದು ನಡೆದ ಉಗ್ರರ ದಾಳಿಯಲ್ಲಿ ಖ್ಯಾತ ಕಾಶ್ಮೀರಿ ಪಂಡಿತ್​ ಉದ್ಯಮಿ ಮಖನ್​ ಲಾಲ್​ ಬಿಂದ್ರೂ ಬಲಿಯಾಗಿದ್ರು. ಅದೇ ದಿನ ಮತ್ತೆ ಎರಡು ಕಡೆ ಉಗ್ರರು ದಾಳಿ ನಡೆಸಿ, ಇಬ್ಬರು ನಾಗರಿಕರನ್ನ ಕೊಂದು ಹಾಕಿದ್ದರು. ಮತ್ತೆ ಅಕ್ಟೋಬರ್​ 7ರಂದು ಶ್ರೀನಗರದ ಈಡ್ಗಾ ಸಂಗಮ್​ ಪ್ರದೇಶದಲ್ಲಿರುವ ಶಾಲೆಯೊಂದರ ಮೇಲೆ ಉಗ್ರರು ಅಟ್ಯಾಕ್​ ಮಾಡಿ ಮುಖ್ಯೋಪಾಧ್ಯಾಯ ಸತಿದಂರ್​ ಕೌರ್​ ಹಾಗೂ ಶಿಕ್ಷಕ ದೀಪಕ್​ ಎಂಬುವವರನ್ನ ಗುಂಡಿಕ್ಕಿ ಕೊಂದಿದ್ದರು. ಮತ್ತೆ ನಿನ್ನೆ ಕುಲ್ಗಾಮ್​ನಲ್ಲಿ ದಾಳಿ ನಡೆಸಿದ್ದಾರೆ. ಒಟ್ಟಾರೆ 5 ದಿನದಲ್ಲಿ 5 ಕಡೆ ದಾಳಿ ನಡೆಸಿರುವ ಉಗ್ರರು ಐವರನ್ನ ಬಲಿ ಪಡೆದಿದ್ದಾರೆ. ಇನ್ನೂ ಇಬ್ಬರು ಪೊಲೀಸ್​ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

  ದಾಳಿ ಹಿಂದೆ ಪಾಕಿಸ್ತಾನಿಗಳ ಕೈವಾಡ?
  ಇಬ್ಬರು ಶಿಕ್ಷಕರನ್ನ ಕೊಂದ ಬಳಿಕ ಜಮ್ಮು- ಕಾಶ್ಮೀರದ ಡಿಜಿಪಿ ದಿಲ್ಬಾರ್​ ಸಿಂಗ್​ ಪ್ರತಿಕ್ರಿಯೆ ನೀಡಿದ್ದರು. ಭಯೋತ್ಪಾದಕರು ಈ ರೀತಿ ದಾಳಿಗಳನ್ನ ಮಾಡಿ ಇಲ್ಲಿ ಭಯ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ಕಾಶ್ಮೀರಿ ಮುಸ್ಲಿಮರ ಮಾನಹಾನಿ ಮಾಡುವ ಪಿತೂರಿಯಾಗಿದೆ. ಕಾಶ್ಮೀರದಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಈ ರೀತಿಯ ಕೃತ್ಯಗಳನ್ನ ಮಾಡುತ್ತಿದ್ದಾರೆ.

  ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರನ್ನು ಕೊಂದದ್ದು ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ: ರಾಕೇಶ್ ಟಿಕಾಯತ್

  ಪಾಕಿಸ್ತಾನದ ಏಜೆನ್ಸಿಗಳ ಸೂಚನೆ ಮೇರೆಗೆ ಉಗ್ರರು ದಾಳಿ ಮಾಡುತ್ತಿದ್ದಾರೆ ಅಂತ ದಿಲ್ಬಾರ್​ ಸಿಂಗ್ ಶಂಕೆ ವ್ಯಕ್ತಪಡಿಸಿದ್ದರು. ಮತ್ತೆ ಪೊಲೀಸರ ದಾಳಿ ಬಳಿಕ ದಿಲ್ಬಾರ್​ ಸಿಂಗ್ ಮತ್ತೆ ಭಯೋತ್ಪಾದಕರು ದಾಳಿ ನಡೆಸುವ ಮುನ್ನ ಅವರನ್ನ ನಮ್ಮ ಯೋಧರು ಮಟ್ಟಹಾಕುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದರು.

  (ವರದಿ - ವಾಸುದೇವ್ . ಎಂ)
  Published by:Sandhya M
  First published: