• Home
 • »
 • News
 • »
 • national-international
 • »
 • Shocking Murder: ಶ್ರದ್ಧಾ ಕೊಲೆಯಿಂದ ಸ್ಪೂರ್ತಿ ಪಡೆದು ತನ್ನ ಪ್ರೇಯಸಿಯನ್ನೇ ಕೊಂದ ವ್ಯಕ್ತಿ

Shocking Murder: ಶ್ರದ್ಧಾ ಕೊಲೆಯಿಂದ ಸ್ಪೂರ್ತಿ ಪಡೆದು ತನ್ನ ಪ್ರೇಯಸಿಯನ್ನೇ ಕೊಂದ ವ್ಯಕ್ತಿ

ದೆಹಲಿಯಲ್ಲಿ ಮತ್ತೊಂದು ಭೀಕರ ಅಪರಾಧ ಕೃತ್ಯ

ದೆಹಲಿಯಲ್ಲಿ ಮತ್ತೊಂದು ಭೀಕರ ಅಪರಾಧ ಕೃತ್ಯ

ಅಲ್ಲದೇ ಮೃತ ರೇಖಾ ರಾಣಿ ಎಂಬ ಮಹಿಳೆಯ ದವಡೆ, ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿವೆ.  ಆರೋಪಿ ಆಕೆಯ ಬಲಗೈಯ ಉಂಗುರ ಬೆರಳನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ.

 • News18 Kannada
 • 4-MIN READ
 • Last Updated :
 • Delhi, India
 • Share this:

  ದೆಹಲಿ: ಶ್ರದ್ಧಾ ವಾಕರ್ ಹತ್ಯಾಕಾಂಡದ ನಂತರ ಅಂತಹುದೇ ಹಲವು ಹತ್ಯಾಕಾಂಡಗಳು ವರದಿಯಾಗುತ್ತಿವೆ. ಇದೀಗ ಅದೇ ರೀತಿಯ ಇನ್ನೊಂದು ಘಟನೆ ಬೆಳಕಿಗೆ ಬಂದಿದ್ದು ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ (Live In Relationship) ಇದ್ದ ಮಹಿಳೆಯನ್ನು ಭೀಕರವಾಗಿ ಇರಿದು ಕೊಂದ ಪುರುಷನೋರ್ವನನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯ (Delhi Crime) ತಿಲಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತನ್ನ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಸಂಗಾತಿ ರೇಖಾ ರಾಣಿ ಎಂಬ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪಟಿಯಾಲದ ಮನ್‌ಪ್ರೀತ್ ಸಿಂಗ್ (45) ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರ (Delhi Police) ಅಪರಾಧ ವಿಭಾಗ ಶುಕ್ರವಾರ ಬಂಧಿಸಿದೆ. ರೇಖಾ ರಾಣಿ ಅವರ ದೇಹದಲ್ಲಿ ಇರಿತದ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.


  ಅಲ್ಲದೇ ಮೃತ ರೇಖಾ ರಾಣಿ ಎಂಬ ಮಹಿಳೆಯ ದವಡೆ, ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿವೆ. ಆರೋಪಿ ಆಕೆಯ ಬಲಗೈಯ ಉಂಗುರ ಬೆರಳನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ. ಮನ್‌ಪ್ರೀತ್ ಕಾರುಗಳ ಮಾರಾಟ ಮತ್ತು ಖರೀದಿಯಲ್ಲಿ ವ್ಯವಹರಿಸುತ್ತಿದ್ದ. ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಾರುಗಳ ದಾಖಲೆಗಳನ್ನು ನಕಲು ಮಾಡುವಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಆತನ ವಿರುದ್ಧ ಈ ಮುನ್ನವೇ ಸುಲಿಗೆಗಾಗಿ ಅಪಹರಣ ಮತ್ತು ಕೊಲೆ ಯತ್ನ ಸೇರಿದಂತೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.


  ಆರೋಪಿಗೆ ಹೆಂಡತಿಯಿಂದ ಇಬ್ಬರು ಮಕ್ಕಳು
  ಆರೋಪಿಗೆ ಪತ್ನಿಯಿಂದ ಇಬ್ಬರು ಗಂಡು ಮಕ್ಕಳಿದ್ದಾರೆ. 2015 ರಲ್ಲಿ ರೇಖಾಳನ್ನು ಭೇಟಿಯಾಗಿ ಇಬ್ಬರೂ ಗಣೇಶ್ ನಗರದಲ್ಲಿ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


  ಇದನ್ನೂ ಓದಿ: Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು


  ದೆಹಲಿ ಪೊಲೀಸರ ಪ್ರಕಾರ ಡಿಸೆಂಬರ್ 1 ರ ರಾತ್ರಿ ಆರೋಪಿ ತನ್ನ ಫ್ಲಾಟ್‌ಗೆ ತಲುಪಿ ರೇಖಾ ಅವರ 16 ವರ್ಷದ ಮಗಳನ್ನು ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಲಗಿಸಿದ್ದಾನೆ. ಇದಾದ ನಂತರ ರೇಖಾಳನ್ನು ಕೊಲೆ ಮಾಡುವ ಉದ್ದೇಶದಿಂದ ಕೆಲ ಸಮಯದ ಹಿಂದೆ ಖರೀದಿಸಿದ್ದು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ.


  ಶ್ರದ್ಧಾ ವಾಕರ್ ಹತ್ಯೆಯಿಂದ ಪ್ರೇರಣೆ
  ಶ್ರದ್ಧಾ ಹತ್ಯೆ ಪ್ರಕರಣದ ವಿವರ ಸಿಕ್ಕ ಬಳಿಕ ಆರೋಪಿ ಪ್ಲಾನ್ ರೂಪಿಸಿದ್ದು, ಅದಕ್ಕಾಗಿಯೇ ಹರಿತವಾದ ಆಯುಧ ಖರೀದಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರ ಪ್ರಕಾರ, ಮನ್‌ಪ್ರೀತ್ ಇದೇ ರೀತಿಯ ಯೋಜನೆಯನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮನೆಯಲ್ಲಿ ಪ್ರೇಯಸಿಯ ಮಗಳು ಇದಕ್ಕೆ ಅಡ್ಡವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.


  ಶ್ರದ್ಧಾ ವಾಕರ್ ಹತ್ಯಾಕಾಂಡ ಪ್ರಕರಣ ತನಿಖೆ ಏನಾಯ್ತು?
  ದೇಶವನ್ನೇ ಬೆಚ್ಚಿ ಬೀಳಿಸಿದ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾ ವಾಕರ್​ನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟಿದ್ದ. ಆ ನಂತರವೂ ಅಫ್ತಾಬ್ ಡೇಟಿಂಗ್ ಮಾಡಿದ ಮಹಿಳೆಯನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದಾಳೆ. ಕತ್ತರಿಸಿದ ದೇಹದ ಭಾಗಗಳು ಇನ್ನೂ ತನ್ನ ರೆಫ್ರಿಜರೇಟರ್‌ನಲ್ಲಿ ಇರುವಾಗಲೇ ಅಫ್ತಾಬ್ ಹೊಸ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್​ಗೆ ಕರೆತಂದಿದ್ದ . ಅಲ್ಲದೇ ಈ ಮಹಿಳೆಯನ್ನು ಸಂಪರ್ಕಿಸಿ ತನಿಖೆ ನಡೆಸಿರುವುದಾಗಿಯೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ


  ಆಫ್ತಾಬ್ ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕವೇ ಈ ಮಹಿಳೆಯನ್ನು ಸಹ ಪರಿಚಯ ಮಾಡಿಕೊಂಡಿದ್ದ. ಇದೇ ಡೇಟಿಂಗ್ ಆ್ಯಪ್ ಮೂಲಕವೇ ಅಫ್ತಾಬ್ ಶ್ರದ್ಧಾಳನ್ನು ಪರಿಚಯ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು