Bhagavad Gita: ಹಿಂದೂ ಪವಿತ್ರ ಗ್ರಂಥಕ್ಕೆ ಮತ್ತೊಂದು ಮನ್ನಣೆ; ವಿದೇಶದಲ್ಲೂ ಭಗವದ್ಗೀತೆ ಸ್ಥಾಪನೆ

ಕೆನಡಾದ ಸಂಸತ್ತಿನ ಕ್ವೀನ್ಸ್ ಪಾರ್ಕ್‌ನಲ್ಲಿ ಗೀತಾ ಗ್ರಂಥವನ್ನು ಸ್ಥಾಪಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. ಗೀತಾ ಪಾರ್ಕ್ ಭೂಮಿ ಪೂಜೆಯು ಒಂಟಾರಿಯೊದ ಬ್ರಾಂಪ್ಟನ್ ನಗರದಲ್ಲಿ ನಡೆಯಲಿದೆ. ಭಗವದ್ಗೀತೆಯನ್ನು ವಿದೇಶಿ ನೆಲದಲ್ಲಿ ಸ್ಥಾಪಿಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಯುಕೆಯ ಲಂಡನ್ ‌ ಸಂಸತ್ತಿನಲ್ಲಿ ಮತ್ತು ಮಾರಿಷಸ್ ಅಧ್ಯಕ್ಷರ ಮನೆಯಲ್ಲಿ ಕೂಡ ಹಿಂದುಗಳ ಪವಿತ್ರ ಗ್ರಂಥವಾದ ಗೀತಾವನ್ನು ಸ್ಥಾಪಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದ (India) ಹಿಂದೂಗಳ ಪವಿತ್ರ ಗ್ರಂಥಕ್ಕೆ ವಿದೇಶದಲ್ಲಿ ಮತ್ತೊಂದು ಮನ್ನಣೆ ಲಭಿಸಿದೆ. ಮಾರಿಷಸ್ ಮತ್ತು ಲಂಡನ್ ಬಳಿಕ ಕೆನಡಾದ (Canada) ಸಂಸತ್ತಿನಲ್ಲಿ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಸ್ಥಾಪಿಸಲು ಇಲ್ಲಿನ ಸರ್ಕಾರ ಯೋಜನೆ ರೂಪಿಸಿದೆ. ಕೆನಡಾದ ಸಂಸತ್ತಿನ ಕ್ವೀನ್ಸ್ ಪಾರ್ಕ್‌ನಲ್ಲಿ (Queen's Park) ಗೀತಾ ಗ್ರಂಥವನ್ನು ಸ್ಥಾಪಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. ಗೀತಾ ಪಾರ್ಕ್ (Geeta Park) ಭೂಮಿ ಪೂಜೆಯು ಒಂಟಾರಿಯೊದ ಬ್ರಾಂಪ್ಟನ್ ನಗರದಲ್ಲಿ ನಡೆಯಲಿದೆ. ಭಗವದ್ಗೀತೆಯನ್ನು ವಿದೇಶಿ ನೆಲದಲ್ಲಿ ಸ್ಥಾಪಿಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಯುಕೆಯ ಲಂಡನ್ ‌(London) ಸಂಸತ್ತಿನಲ್ಲಿ ಮತ್ತು ಮಾರಿಷಸ್ ಅಧ್ಯಕ್ಷರ ಮನೆಯಲ್ಲಿ ಕೂಡ ಹಿಂದುಗಳ ಪವಿತ್ರ ಗ್ರಂಥವಾದ ಗೀತಾವನ್ನು ಸ್ಥಾಪಿಸಲಾಗಿದೆ.

ಬ್ರಾಂಪ್ಟನ್ ಕೌನ್ಸಿಲ್ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಪಾರ್ಕ್‌ ನಲ್ಲಿ ಕೃಷ್ಣ-ಅರ್ಜುನ ರಥವನ್ನು ಸಹ ಸ್ಥಾಪಿಸಲಾಗುವುದು ಎಂದು ಹೇಳಿದೆ.

ಗೀತಾ ಪಾರ್ಕ್ ಎಂದು ಹೆಸರಿಸುವ ಬಗ್ಗೆ ಚರ್ಚೆ
ಮಾಧ್ಯಮಗಳೊಂದಿಗೆ ಮಾತನಾಡಿದ ಛಾಬ್ರಾ, ಸ್ವಾಮಿ ಜ್ಞಾನಾನಂದರು ಸುಮಾರು ಎರಡು ತಿಂಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು ಮತ್ತು ಪಾರ್ಕ್‌ಗೆ ಗೀತಾ ಪಾರ್ಕ್ ಎಂದು ಹೆಸರಿಸಲು ಬ್ರಾಂಪ್ಟನ್‌ನ ಮೇಯರ್ ಮತ್ತು ಕೌನ್ಸಿಲರ್‌ಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಕೆನಡದಲ್ಲಿಯೇ ನೆರವೇರಲಿದೆ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ
ಇನ್ನೂ ಈ ಬಾರಿಯ ಹರಿಯಾಣದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಕೂಡ ಕೆನಡಾದಲ್ಲಿ ಆಯೋಜನೆಯಾಗುತ್ತಿದ್ದು, ಉತ್ಸವವು ಸೆಪ್ಟೆಂಬರ್ 16 ರಿಂದ 19 ರವರೆಗೆ ನಡೆಯಲಿದೆ. ಕಳೆದ ಆರು ವರ್ಷಗಳಿಂದಲೂ ವಿದೇಶದಲ್ಲಿ ನಡೆಯುತ್ತಿದ್ದ ಉತ್ಸವ ಈ ವರ್ಷ ಕೆನಡಾದ ಮಿಸಿಸೌಗಾದಲ್ಲಿರುವ ಲಿವಿಂಗ್ ಆರ್ಟ್ ಸೆಂಟರ್ ನಲ್ಲಿ ನಡೆಯಲಿದೆ.

ಇದನ್ನೂ ಓದಿ: US Supports Pak: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅಮೆರಿಕಾ; ಭಾರತಕ್ಕೆ ದ್ರೋಹ?

ಮಿಸ್ಸಿಸೌಗಾ ಲಿವಿಂಗ್ ಆರ್ಟ್ ಸೆಂಟರ್‌ನಲ್ಲಿ ಬೆಳಗ್ಗೆ ಶ್ರೀಮದ್ ಭಗವದ್ಗೀತೆ ಕುರಿತು ವಿಚಾರ ಸಂಕಿರಣ ಮತ್ತು ಸಂಜೆ ಶ್ರೀಕೃಷ್ಣ ಕಥಾ ಕಾರ್ಯಕ್ರಮ ನಡೆಯಲಿದೆ ಎಂದು ಹರಿಯಾಣ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 18 ರಂದು ಟೊರೊಂಟೊದ ದುಡಾಸ್ ಸ್ಕ್ವೇರ್‌ನಲ್ಲಿ ಮೆರವಣಿಗೆ ನಡೆಯಲಿದೆ ಮತ್ತು ಸೆಪ್ಟೆಂಬರ್ 19 ರಂದು ಒಂಟಾರಿಯೊ ಸಂಸತ್ತಿನಲ್ಲಿ ಗೀತಾ ಬೋಧನೆಗಳನ್ನು ಚರ್ಚಿಸಲಾಗುವುದು.

ಸುದ್ದಿಗಾರರೊಂದಿಗೆ ಮಾತನಾಡಿದ ಕುರುಕ್ಷೇತ್ರ ಅಭಿವೃದ್ಧಿ ಮಂಡಳಿಯ ಗೌರವ ಕಾರ್ಯದರ್ಶಿ ಮದನ್ ಮೋಹನ್ ಛಾಬ್ರಾ, ಕೆನಡಾದಲ್ಲಿ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಭಗವದ್ಗೀತೆ ಕುರಿತು ವಿಚಾರ ಮಂಥನ
ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾರತ ಮತ್ತು ವಿದೇಶಗಳ 104 ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಭಗವದ್ಗೀತೆಯ ಬೋಧನೆಗಳ ಕುರಿತು ವಿಚಾರ ಮಂಥನ ನಡೆಸಲಿವೆ. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ನಲ್ಲಿ ಕುರುಕ್ಷೇತ್ರದಲ್ಲಿ ಗೀತಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ.

ಅನೇಕ ದೇಶಗಳಲ್ಲಿ ಆಯೋಜನೆ
ಕುರುಕ್ಷೇತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪವಿತ್ರ ಗ್ರಂಥ ಗೀತೆಯ ಉಪದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕುರುಕ್ಷೇತ್ರ, ಹರಿಯಾಣ ಮಾತ್ರವಲ್ಲದೆ ಮಾರಿಷಸ್, ಲಂಡನ್, ಕೆನಡಾ ಮುಂತಾದ ದೇಶಗಳಲ್ಲಿ ಅಂತರಾಷ್ಟ್ರೀಯ ಗೀತಾ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪ್ರಪಂಚದಾದ್ಯಂತ ಪವಿತ್ರ ಗ್ರಂಥ, ಭಗವದ್ಗೀತೆಯ ಅನುಕರಣೆ ಹೆಚ್ಚುತ್ತಿದ್ದು ಅದರ ಮೌಲ್ಯ ಕೂಡ ಹೆಚ್ಚುತ್ತಿದೆ. ಮಹಾಭಾರತ ಯುದ್ಧದಲ್ಲಿ ಅರ್ಜುನನು ತನ್ನ ಬಂಧುಗಳನ್ನು ಎದುರಿಗೆ ನೋಡಿ ಹತಾಶನಾಗುತ್ತಿದ್ದಾಗ, ಶ್ರೀಕೃಷ್ಣನು ಆ ಸಮಯದಲ್ಲಿ ಅವನಿಗೆ ಉಪದೇಶ ಮಾಡಿದ್ದನು. ಈ ಬೋಧನೆಯನ್ನೇ ಭಗವದ್ಗೀತೆ ಎಂದು ಕರೆಯಲಾಗುತ್ತದೆ. ಮಹಾಭಾರತ ಯುದ್ದವು ಹರಿಯಾಣದ ಕುರುಕ್ಷೇತ್ರದ ನೆಲದಲ್ಲಿ 18 ದಿನಗಳ ಕಾಲ ನಡೆಯಿತು.

ಇದನ್ನೂ ಓದಿ: Global Award: ಭಾರತೀಯ ವಿಜ್ಞಾನಿಗೆ ಜಾಗತಿಕ ಪ್ರಶಸ್ತಿ; ಇವರು ಮಾಡಿರುವ ಸಂಶೋಧನೆ ಏನು ಗೊತ್ತೇ?

ಪ್ರಪಂಚದಾದ್ಯಂತ ಭಗವದ್ಗೀತೆಗೆ ಮನ್ನಣೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಕೆನಡಾದ ಸಂಸತ್ತಿನ ಕ್ವೀನ್ಸ್ ಪಾರ್ಕ್‌ನಲ್ಲಿ ಗೀತಾವನ್ನು ಸ್ಥಾಪಿಸಲಾಗುತ್ತಿದೆ. ಕುರುಕ್ಷೇತ್ರ ಅಭಿವೃದ್ಧಿ ಮಂಡಳಿಯ ಗೌರವ ಕಾರ್ಯದರ್ಶಿ ಮದನ್ ಮೋಹನ್ ಛಾಬ್ರಾ, ಮುಖ್ಯಮಂತ್ರಿ ಮನೋಹರ್ ಲಾಲ್ ಮತ್ತು ಗೀತಾ ಋಷಿ ಸ್ವಾಮಿ ಜ್ಞಾನಾನಂದರ ಪ್ರಯತ್ನದಿಂದ ಈ ಹಿಂದೆ ಮಾರಿಷಸ್ ಮತ್ತು ಲಂಡನ್‌ನಲ್ಲೂ ಭಗವದ್ಗೀತೆ ಸ್ಥಾಪಿತವಾಗಿದೆ.
Published by:Ashwini Prabhu
First published: