ಹೃದಯಾಘಾತದಿಂದ ಮೃತಪಟ್ಟ ಮತ್ತೊಬ್ಬ ಪಿಎಂಸಿ ಬ್ಯಾಂಕ್ ಠೇವಣಿದಾರ; 24 ಗಂಟೆಯಲ್ಲಿ ಇಬ್ಬರ ಸಾವು

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.

HR Ramesh | news18-kannada
Updated:October 15, 2019, 5:19 PM IST
ಹೃದಯಾಘಾತದಿಂದ ಮೃತಪಟ್ಟ ಮತ್ತೊಬ್ಬ ಪಿಎಂಸಿ ಬ್ಯಾಂಕ್ ಠೇವಣಿದಾರ; 24 ಗಂಟೆಯಲ್ಲಿ ಇಬ್ಬರ ಸಾವು
ಫಟೋಮಲ್ ಪಂಜಾಬಿ (ಸಂಗ್ರಹ ಚಿತ್ರ)
  • Share this:
ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಠೇವಣಿದಾರರೊಬ್ಬರು ಇಂದು ಬೆಳಗ್ಗೆ  ಹೃದಯಾಘಾತದಿಂದ ನಿಧನರಾದ 24 ಗಂಟೆಯಲ್ಲಿ ಮತ್ತೊಬ್ಬ ಠೇವಣಿದಾರ ಹೃದಯಾಘಾತದಿಂದ ಮೃತಪಟ್ಟ ವಿದ್ರಾವಕ ಘಟನೆ ನಡೆದಿದೆ.

ಫಟೋಮಲ್ ಪಂಜಾಬಿ ಎಂಬುವವರೇ ಹೃದಯಾಘಾತಕ್ಕೆ ಒಳಗಾದ ಪಿಎಂಸಿ ಬ್ಯಾಂಕ್ ಠೇವಣಿದಾರರು. ಪಿಎಂಸಿ ಬ್ಯಾಂಕಿನ ಮುಲುಂದ ಶಾಖೆಯಲ್ಲಿ ಇವರ ಖಾತೆ ಇತ್ತು. ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಠೇವಣಿದಾರರು ಹಣ ಹಿಂದಿರುಗಿಸುವಂತೆ ನಡೆಸಿದ ಪ್ರತಿಭಟನೆಯಲ್ಲೂ ಪಂಜಾಬಿ ಕೆಲ ದಿನಗಳಿಂದ ಭಾಗಿಯಾಗಿದ್ದರು. ಬ್ಯಾಂಕಿನಿಂದ ಹಣ ಹಿಂಪಡೆಯುವಿಕೆಗೆ ಆರ್​ಬಿಐ ಕಡಿವಾಣ ಹಾಕಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಪಂಜಾಬಿ ಅವರು ತಮ್ಮ ಸ್ನೇಹಿತರ ಬಳಿ ಅಲವತ್ತುಗೊಂಡಿದ್ದರು.
ಇಂದು ಬೆಳಗ್ಗೆ ಜೆಟ್ ಏರ್​ವೇಸ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿರುವ 51 ವರ್ಷದ ಸಂಜಯ್ ಗುಲಾಟಿ ಎಂಬುವವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಕುಟುಂಬದವರು ಪಿಎಂಸಿ ಬ್ಯಾಂಕಲ್ಲಿ 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಹಣ ಕೈ ತಪ್ಪಿಹೋಗುವ ಭಯದಲ್ಲಿ ಗುಲಾಟಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ. ನಿನ್ನೆ ಬೆಳಗ್ಗೆ ಸಂಜಯ್ ಗುಲಾಟಿ ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬದವರು ತಿಳಿಸಿದ್ದಾರೆ.

Loading...


First published:October 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...