Nupur Supporter Murder: ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ; ಕನ್ಹಯ್ಯಗಿಂತ ಮೊದಲೇ ನಡೆದಿತ್ತು ಮಹಾರಾಷ್ಟ್ರದಲ್ಲಿ ಕೊಲೆ!

ಉಮೇಶ್ ಕೋಲ್ಹೆ ಅವರು ಜೂ. 21 ರಂದು ರಾತ್ರಿ ತಮ್ಮ ಮೆಡಿಕಲ್ ಶಾಪ್‌ನಿಂದ ಕೆಲಸ ಮುಗಿಸಿ, ಶಾಪ್ ಬಾಗಿಲು ಹಾಕಿಕೊಂಡು ತಮ್ಮ  ಸ್ಕೂಟರ್‌ನಲ್ಲಿ ಮನೆಗೆ ವಾಪಸಾಗುತ್ತಿದ್ರು. ಆ ವೇಳೆ ನಡು ರಸ್ತೆ ಮೇಲೆ ಅವರ ಮೇಲೆ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾರಾಷ್ಟ್ರ: ಪ್ರವಾದಿ ಮಹಮ್ಮದ್ (Prophet Muhammad) ಬಗ್ಗೆ ವಿವಾದಾತ್ಮಕ ಹೇಳಿಕೆ (Controversial Statement) ನೀಡಿದ್ದ ಬಿಜೆಪಿ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಗೊತ್ತೇ ಇದೆ. ಇದಾದ ಬಳಿಕ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ ಅಂತ ಆರೋಪಿಸಿ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಟೈಲರ್ (Tailor) ಆಗಿದ್ದ ಕನ್ಹಯ್ಯ ಲಾಲ್‌ (Kanhaiya Lal) ಎಂಬುವರನ್ನು ಮುಸ್ಲಿಂ (Muslim) ಮೂಲಭೂತವಾದಿಗಳಿಬ್ಬರು ಬರ್ಬರವಾಗಿ ಹತ್ಯೆ (Murder) ಮಾಡಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದು, ಎನ್ಐಎ ತಂಡ (NIA Team) ಕೊಲೆ ಕೇಸ್‌ನ ತನಿಖೆ (Investigation) ನಡೆಸುತ್ತಿದೆ. ಇದೀಗ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕನ್ಹಯ್ಯ ಲಾಲ್ ಹತ್ಯೆಗೂು ಮುನ್ನವೇ ಇದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದಲ್ಲಿ ವ್ಯಕ್ತಿಯೋರ್ವರ ಕೊಲೆ

ನೂಪುರ್ ಶರ್ಮಾ ಬೆಂಬರಲಿಸಿ ಪೋಸ್ಟ್ ಹಾಕಿದ್ದ ವ್ಯಕ್ತಿಯೊಬ್ಬರನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 21ರಂದು ಈ ಘಟನೆ ನಡೆದಿದ್ದು, ಮೆಡಿಕಲ್ ಶಾಪ್ ಮಾಲೀಕ, 54 ವರ್ಷದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಎಂಬುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಹಂಚಿಕೊಂಡಿದ್ದೇ ಉಮೇಶ್‌ ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ರಾತ್ರಿ ಮೂವರು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಉಮೇಶ್ ಕೋಲ್ಹೆ ಅವರು ಜೂ. 21 ರಂದು ರಾತ್ರಿ ತಮ್ಮ ಮೆಡಿಕಲ್ ಶಾಪ್‌ನಿಂದ ಕೆಲಸ ಮುಗಿಸಿ, ಶಾಪ್ ಬಾಗಿಲು ಹಾಕಿಕೊಂಡು ತಮ್ಮ  ಸ್ಕೂಟರ್‌ನಲ್ಲಿ ಮನೆಗೆ ವಾಪಸಾಗುತ್ತಿದ್ರು. ಆ ವೇಳೆ ನಡು ರಸ್ತೆ ಮೇಲೆ ಅವರ ಮೇಲೆ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ: Eknath Shinde: ಸಿಎಂ ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಶಾಕ್, ಶಿವಸೇನೆ ನಾಯಕನ ಸ್ಥಾನದಿಂದ ಔಟ್!

ಹರಿತ ಆಯುಧಗಳಿಂದ ಹಲ್ಲೆ, ಚಿಕಿತ್ಸೆ ಫಲಿಸದೇ ಸಾವು

ಉಮೇಶ್ ಮೇಲೆ ಮುಗಿ ಬಿದ್ದ ದುಷ್ಕರ್ಮಿಗಳು, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಉಮೇಶ್ ಅವರ  ಅವರ ಪತ್ನಿ ಹಾಗೂ ಪುತ್ರ ಅವರ ಹಿಂದೆಯೇ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದರು. ಅವರ ಸಮ್ಮುಖದಲ್ಲಿಯೇ ಈ ದಾಳಿ ನಡೆದಿದೆ. ಅವರು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಐವರನ್ನು ಬಂಧಿಸಿದ ಪೊಲೀಸರು


ಉಮೇಶ್ ಕೋಲ್ಹೆ ಅವರ ಪುತ್ರ ನೀಡಿದ ದೂರಿನ ಆಧಾರದ ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22)  ಎಂಬುವವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಶಾಮೀಲಾಗಿದ್ದ ಹಮೀಮ್ ಅಹ್ಮದ್ ಫಿರೋಜ್ ಅಹ್ಮದ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದ ಉಮೇಶ್

ಕೊಲೆಯಾದ ಉಮೇಶ್ ನೂಪುರ್ ಶರ್ಮಾ  ಅವರ  ಹೇಳಿಕೆಗೆ ಬೆಂಬಲವಾಗಿ ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ತಮ್ಮ ಗ್ರಾಹಕರು ಸೇರಿದಂತೆ ಕೆಲವು ಮುಸ್ಲಿಮರು ಸಹ ಸದಸ್ಯರಾಗಿರುವ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ‘ಹಂಚಿಕೊಂಡಿದ್ದರು ಎಂದು ಸಿಟಿ ಕೊತ್ವಾಲಿ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಮೇಶ್ ಕೊಲೆಗೆ ಸಂಚು ರೂಪಿಸಿದ್ದ ದುಷ್ಕರ್ಮಿಗಳು

ಆರೋಪಿಗಳು ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಯವರ ಹತ್ಯೆಗೆ ಸಂಚು ರೂಪಿಸಿದರು ಮತ್ತು ಅದಕ್ಕಾಗಿ ಇರ್ಫಾನ್‌ ಖಾನ್‌ ಐದು ಜನ ಹಂತಕರ ತಂಡ ರಚಿಸಿದ್ದ. ಅವರಿಗೆ 10 ಸಾವಿರ ರೂಪಾಯಿ ನೀಡಿ ಕೆಲಸ ಮುಗಿದ ನಂತರ ಸುರಕ್ಷಿತವಾಗಿ ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ಪ್ರಮುಖ ಆರೋಪಿ ಭರವಸೆ ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: Eknath Shinde: ಜುಲೈ 4ರಂದು ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ! 12ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಪ್ರಕರಣದ ತನಿಖೆಗೆ 4 ತಂಡಗಳ ರಚನೆ

ಪ್ರಕರಣದ ತನಿಖೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ತನಿಖೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಈ ಹತ್ಯೆಯಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಈ ಕೊಲೆಯ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿದ್ದಾನೆ.
Published by:Annappa Achari
First published: