Assam- Taliban :ತಾಲಿಬಾನ್​​ಗೆ ನನ್ನ ಬೆಂಬಲ ಎಂದ ವ್ಯಕ್ತಿ; ಅಸ್ಸಾಂ ರಾಜ್ಯವೊಂದರಲ್ಲೆ 16ಕ್ಕೆ ಏರಿದ ಬಂಧಿತರ ಸಂಖ್ಯೆ

ಗುವಾಹಟಿಯ (Guwahati) ಜೋರಾಬತ್ ಪ್ರದೇಶದಲ್ಲಿ ಟೈರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಾಲಿಬಾನ್ ಬೆಂಬಲಿಸಿ ಫೇಸ್ಬುಕ್ ಪೋಸ್ಟ್ (Facebook post) ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Assam: ಸಾಮಾಜಿಕ ಜಾಲತಾಣದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರ ಸಂಘಟನೆ (supporting the Taliban) ಸ್ವಾಧೀನ ಪಡಿಸಿಕೊಂಡಿರುವುದನ್ನು ಬೆಂಬಲಿಸಿದ ಆರೋಪದ ಮೇಲೆ ಇನ್ನೊಬ್ಬ ವ್ಯಕ್ತಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.

  ರಾಜ್ಯದಲ್ಲಿ ಇಂತಹ ಒಟ್ಟು ಈ ರೀತಿ ಉಗ್ರ ಸಂಘಟನೆ ತಾಲಿಬಾನ್​ ಬೆಂಬಲಿಸಿ  ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದೊಂದು ಸಾಂಕ್ರಾಮಿಕ ರೊಗದ ತರ ಹರಡುತ್ತಿದ್ದು, ಒಂದಷ್ಟು ಜನ ಜನಪ್ರಿಯತೆಯ ಆಸೆಗೆ ಬಿದ್ದು ಈ ರೀತಿಯ ಕಾಮೆಂಟ್​ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಒಂದಷ್ಟು ಜನ ಪೈಪೋಟಿಗೆ ಬಿದ್ದು ಈ ರೀತಿಯ ದೇಶದ್ರೋಹದ ಕೃತ್ಯ ಎಸಗುತ್ತಿದ್ದಾರೆ ಎಂದು ಹೇಳಲಾಗಿದೆ.

  ಗುವಾಹಟಿಯ (Guwahati) ಜೋರಾಬತ್ ಪ್ರದೇಶದಲ್ಲಿ ಟೈರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಾಲಿಬಾನ್ ಬೆಂಬಲಿಸಿ ಫೇಸ್ಬುಕ್ ಪೋಸ್ಟ್ (Facebook post) ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಅಸ್ಸಾಂ ಪೊಲೀಸ್ ಕಾನ್ಸ್‌ಟೇಬಲ್, ಜಮೀಯತ್ ಉಲೇಮಾ-ಇ-ಹಿಂದ್‌ನ ರಾಜ್ಯ ಘಟಕದ ಹಿರಿಯ ನಾಯಕ, ವೈದ್ಯಕೀಯ ವಿದ್ಯಾರ್ಥಿ ಮತ್ತು ಪತ್ರಕರ್ತ ಸೇರಿದಂತೆ 15 ಜನರನ್ನು ಆಗಸ್ಟ್ 20 ಮತ್ತು 21 ರಂದು ಉಗ್ರಗಾಮಿ ಸಂಘಟನೆಗೆ ಬೆಂಬಲಿಸುವ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿರುವವರನ್ನು ಬಂಧಿಸಲಾಗಿದೆ.

  ವಿವಿಧ ಜಿಲ್ಲೆಗಳಿಂದ ಈ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅಫ್ಘಾನಿಸ್ತಾನದ ಸ್ವಾಧೀನಕ್ಕೆ ಇವರು ಬೆಂಬಲಿಸಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಬಂಧಿತರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಐಟಿ ಕಾಯ್ದೆ ಮತ್ತು ಸಿಆರ್‌ಪಿಸಿಯ ಹಲವು ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಿ ಒಳಗೆ ಹಾಕಲಾಗಿದೆ, ಇದೇ ಹಾದಿಯನ್ನು ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಹಿಡಿಯಲಿದ್ದಾರೆ ಎಂದು ಅಸ್ಸಾಂ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

  ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕರ್ನಾಟಕದ ಯುವಕನೊಬ್ಬ ಐ ಲವ್ ಯು ತಾಲಿಬಾನ್ ಅಂತ ಪೋಸ್ಟ್ ಮಾಡುವ ತಾಲಿಬಾನ್‌ ಪ್ರೇಮ ಮೆರೆದ ಘಟನೆ  ಜಮಖಂಡಿಯಲ್ಲಿ ನಗರದಲ್ಲಿ ನಡೆದಿತ್ತು. ಆಶಿಫ್‌ ಗಲಗಲಿ ಎಂಬ ಯುವಕ ತಾಲಿಬಾನ್‌ ಉಗ್ರರ ಪರ ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು. ಪೋಸ್ಟ್‌ ಮಾಡಿದ ಬಳಿಕ ಆಶಿಫ್‌ ನಾಪತ್ತೆಯಾಗಿದ್ದನು, ನಂತರ ಅವನನ್ನು ಬಂಧಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದರು.

  ಇದನ್ನೂ ಓದಿ: Afghanistan: ಅಫ್ಘನ್​ನಿಂದ ಭಾರತಕ್ಕೆ ಮರಳಿದ ಜಾರ್ಖಂಡ್​ ವ್ಯಕ್ತಿ; ವಿಮಾನದಿಂದ ಇಳಿದ ತಕ್ಷಣ ನೆಲಕ್ಕೆ ಮುತ್ತಿಟ್ಟ ಬಬ್ಲೂ

  ಇಡೀ ದೇಶದಾದ್ಯಂತ ಇದೇ ರೀತಿಯ ಘಟನೆಗಳು ಹೆಚ್ಚುತ್ತಲೇ ಇದ್ದು, ಇದೆ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: