HOME » NEWS » National-international » ANOTHER KERALA NUN ACCUSES BISHOP FRANCO MULAKKAL OF SEXUAL ABUSE MAK

ಸೆಕ್ಸ್ ಬಗ್ಗೆ ಮಾತಾಡಿ ನನ್ನನ್ನು ಚುಂಬಿಸಿದರು: ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ವಿರುದ್ಧ ಮತ್ತೋರ್ವ ಕ್ರೈಸ್ತ ಸನ್ಯಾಸಿನಿ ಆರೋಪ

ಏಪ್ರಿಲ್ 30, 2017 ರಂದು ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿರುವ ಸನ್ಯಾಸಿನಿ, “ಬಿಷಪ್ ಮುಲಕ್ಕಲ್ ಕಾಂನ್ವೆಂಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಕೋಣೆಗೆ ಪ್ರವೇಶಿಸಿದ್ದರು. ಅಲ್ಲದೆ, ನನ್ನನ್ನು ತಬ್ಬಿಕೊಂಡು ಚುಂಬಿಸಲು ಯತ್ನಿಸಿದ್ದರು ಎಂದು ಗಂಭೀರ ಆರೋಪಿಸಿದ್ದಾರೆ.

MAshok Kumar | news18-kannada
Updated:February 21, 2020, 9:51 PM IST
ಸೆಕ್ಸ್ ಬಗ್ಗೆ ಮಾತಾಡಿ ನನ್ನನ್ನು ಚುಂಬಿಸಿದರು: ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ವಿರುದ್ಧ ಮತ್ತೋರ್ವ ಕ್ರೈಸ್ತ ಸನ್ಯಾಸಿನಿ ಆರೋಪ
ಆರೋಪಿ ಬಿಷಪ್ ಫ್ರಾಂಕೋ ಮುಲ್ಲಕ್ಕಲ್.
  • Share this:
ಕೊಚ್ಚಿ: ಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್​ನ ಮಾಜಿ ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ವಿರುದ್ಧ ಮತ್ತೋರ್ವ ಕೇರಳದ ಸನ್ಯಾಸಿನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 2014 ಮತ್ತು 2016 ರ ನಡುವೆ ಸನ್ಯಾಸಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮುಲಕ್ಕಲ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇದೀಗ ಆರೋಪ ಮಾಡಿರುವ ಸನ್ಯಾಸಿನಿ 14 ನೇ ಸಾಕ್ಷಿಯಾಗಿದ್ದಾರೆ.

ಸನ್ಯಾನಿಸಿ ಪೊಲೀಸರಿಗೆ ನೀಡಿರುವ ಸಾಕ್ಷಿ ಹೇಳಿಕೆಯಲ್ಲಿ, “2015 ಮತ್ತು 2017 ರ ನಡುವೆ ಬಿಷಪ್ ಮುಲ್ಲಕ್ಕಲ್ ಹಲವಾರು ಬಾರಿ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ, ಈ ವೇಳೆ ಅವರು ಲೈಂಗಿಕತೆ ಕುರಿತು ಅಸಭ್ಯ ಭಾಷೆ ಬಳಸಿ ಮಾತನಾಡಿದ್ದರು. ಅಲ್ಲದೆ, ಕೆಲವೊಮ್ಮೆ ವಿಡಿಯೋ ಕಾಲ್ ಮಾಡಿ ಲೈಂಗಿಕತೆಗೆ ಪ್ರಚೋದನೆ ನೀಡುತ್ತಿದ್ದರು. ಆದರೆ, ಅವರ ಮೇಲೆ ಭಯವಿದ್ದ ಕಾರಣ ಈವರೆಗೆ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ” ಎಂದು ತಿಳಿಸಿದ್ದಾರೆ..

ಏಪ್ರಿಲ್ 30, 2017 ರಂದು ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿರುವ ಸನ್ಯಾಸಿನಿ, “ಬಿಷಪ್ ಮುಲಕ್ಕಲ್ ಕಾಂನ್ವೆಂಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಕೋಣೆಗೆ ಪ್ರವೇಶಿಸಿದ್ದರು. ಅಲ್ಲದೆ, ನನ್ನನ್ನು ತಬ್ಬಿಕೊಂಡು ಚುಂಬಿಸಲು ಯತ್ನಿಸಿದ್ದರು" ಎಂದು ಗಂಭೀರ ಆರೋಪಿಸಿದ್ದಾರೆ.

14ನೇ ಸಾಕ್ಷಿಯಾಗಿರುವ ಈ ಸನ್ಯಾಸಿನಿ ಸಾಕ್ಷಿ ಹೇಳಿಕೆ ನೀಡಿದ್ದಾರೆಯೇ ವಿನಃ ಈ ಸಂಬಂಧ ಬಿಷಪ್ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧರಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರದ ಆರೋಪದ ಮೇಲೆ ಫ್ರಾಂಕೋ ಕಳೆದ ವರ್ಷ ಸೆಪ್ಟೆಂಬರ್ 21ರಂದು ಬಂಧನಕ್ಕೆ ಒಳಗಾಗಿದ್ದರು. ಬಳಿಕ 2019 ಅಕ್ಟೋಬರ್ 16ರಂದು ಜಾಮೀನು ಪಡೆದಿದ್ದರು.

ಫ್ರಾಂಕೋ ವಿರುದ್ಧ ಕೇರಳ ಪೊಲೀಸರು 1400 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2020 ಜನವರಿ 6ರಿಂದ ವಿಚಾರಣೆ ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈರೋಮಲಾಬಾರ್ ಕ್ಯಾಥೋಲಿಕ್ ಚರ್ಚ್​ನ ಪ್ರಮುಖ ಮೂವರು ಬಿಷಪ್​ಗಳು, 11 ಪಾದ್ರಿಗಳು ಹಾಗೂ ಹಲವು ಸನ್ಯಾಸಿನಿಯರು ಸೇರಿದಂತೆ ಒಟ್ಟು 83 ಸಾಕ್ಷಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಫ್ರಾಂಕೊ ಅವರನ್ನು ಬಿಷಪ್ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.

ಇದನ್ನೂ ಓದಿ : ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣ; ಬಿಷಪ್ ಜಾಮೀನು ಅವಧಿ ಜನವರಿ 6ರವರೆಗೆ ವಿಸ್ತರಿಸಿದ ನ್ಯಾಯಾಲಯ
First published: February 21, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories