ಉತ್ತರ ಪ್ರದೇಶದಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಹಲ್ಲೆ; ಮೂತ್ರಪಾನ ಮಾಡಿ ಅಮಾನವೀಯತೆ ಮೆರೆದ ಪೊಲೀಸರು!

ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರ ಬಂಧನವನ್ನು ಸುಪ್ರೀಂ ಕೋರ್ಟ್​ ಮಂಗಳವಾರ ಪ್ರಶ್ನಿಸಿತ್ತು. ಅಲ್ಲದೆ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಉತ್ತರಪ್ರದೇಶ ಸರ್ಕಾರವನ್ನು ತಾಕೀತು ಮಾಡಿತ್ತು. ಈ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡಿದ ಮರು ದಿನವೇ ಉತ್ತರಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಮೇಲಿನ ಅಮಾನವೀಯ ಹಲ್ಲೆ ಪ್ರಕರಣ ಬೆಳಕಿಗೆ ಬಂದಿರುವ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

MAshok Kumar | news18
Updated:June 12, 2019, 3:50 PM IST
ಉತ್ತರ ಪ್ರದೇಶದಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಹಲ್ಲೆ; ಮೂತ್ರಪಾನ ಮಾಡಿ ಅಮಾನವೀಯತೆ ಮೆರೆದ ಪೊಲೀಸರು!
ಪತ್ರಕರ್ತನ ಮೇಲೆ ಹಲ್ಲೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ.
  • News18
  • Last Updated: June 12, 2019, 3:50 PM IST
  • Share this:
ಲಕ್ನೋ (ಜೂನ್.12); ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ನಿರಂತರವಾಗಿ ನಡೆಯುತ್ತಲೇ ಇದೆ. ಫೇಸ್​ಬುಕ್​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕುರಿತ ಬರವಣಿಗೆಗೆ ಜೈಲು ಪಾಲಾಗಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮರುದಿನವೇ, ಮತ್ತೋರ್ವ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರೆ ಅಮಾನವೀಯವಾಗಿ ಹಲ್ಲೆ ನಡೆಸಿ ಮೂತ್ರಪಾನ ಮಾಡಿಸಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಸ್ಥಳೀಯ ಪತ್ರಕರ್ತ ಅಮಿತ್​ ಶರ್ಮಾ ಎಂದು ಗುರುತಿಸಲಾಗಿದೆ. ದಿಮ್ನಾಪುರ್ ಬಳಿಯ ರೈಲ್ವೆ ನಿಲ್ದಾಣದಲ್ಲಿ ಘಟನೆ ಜರುಗಿದೆ.

ಈ ಕುರಿತು ಮಾಹಿತಿ ನೀಡಿರುವ ಪತ್ರಕರ್ತ, “ರೈಲ್ವೆ ಪೊಲೀಸರು ಸಾಮಾನ್ಯ ಉಡುಪು ಧರಿಸಿದ್ದರು. ಮೊದಲು ನನ್ನ ಕ್ಯಾಮೆರಾವನ್ನು ಕಸಿದುಕೊಂಡರು, ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಅಲ್ಲದೆ ನನ್ನನ್ನು ಕೆಳಗೆ ತಳ್ಳಿ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ನಡೆಸಿಕೊಂಡರು” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : 'ಇದು ಕೊಲೆ ಪ್ರಕರಣವೇನಲ್ಲ'; ಬಂಧಿಸಿರುವ ಉತ್ತರಪ್ರದೇಶ ಪತ್ರಕರ್ತನ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ

"ದಿಮ್ನಾಪುರ್ ರೈಲ್ವೆ ಠಾಣೆಯಲ್ಲಿ ಗೂಡ್ಸ್​ ರೈಲಿನಿಂದ ಪದಾರ್ಧಗಳನ್ನು ಕದ್ದು ಮಾರಲಾಗುತ್ತಿದೆ. ಗೂಡ್ಸ್​ ರೈಲ್ವೆ ಪೊಲೀಸರೆ ಈ ಕಾನೂನು ಬಾಹೀರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಕುರಿತು ನಾನು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದಂದಿನಿಂದ ರೈಲ್ವೆ ಪೊಲೀಸರಿಗೆ ನನ್ನ ಮೇಲೆ ದ್ವೇಷವಿದೆ. ಕಳೆದ ರಾತ್ರಿಯೂ ನಾನು ಇದೇ ಕೆಲಸಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದೆ. ಆದರೆ, ನನ್ನ ಮೇಲೆ ಯಾವುದೇ ತಪ್ಪು ಅಥವಾ ಅಪರಾಧ ಇಲ್ಲದಿದ್ದರೂ ನನ್ನ ಮೇಲೆ ಹಲ್ಲೆ ನಡೆಸಲಾಯಿತು. ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತ ವಿಡಿಯೋ ಇದೀಗ ಬಿಡುಗಡೆಯಾಗಿದ್ದು, ವಿಡಿಯೋದಲ್ಲಿ ಪೊಲೀಸ್​ ಅಧಿಕಾರಿಗಳು ಪತ್ರಕರ್ತನನ್ನು ಥಳಿಸುತ್ತಿರುವ ಸ್ಪಷ್ಟವಾಗಿ ದಾಖಲಾಗಿದೆ.

ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶದ ಡಿಜಿಪಿ ಓಂ ಪ್ರಕಾಶ್​ ಸಿಂಗ್​ ಗೂಡ್ಸ್​ ರೈಲ್ವೆ ಪೊಲೀಸ್​ ಠಾಣೆಯ ಮುಖ್ಯ ಅಧಿಕಾರಿ ಶಾಮ್ಲಿ ರಾಕೇಶ್ ಹಾಗೂ ಪೇದೆ ಸಂಜಯ್​ ಪವಾರ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಲ್ಲದೆ, ನಾಗರೀಕರ ಜೊತೆಗೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯ ಆಧಾರದಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.ಇದನ್ನೂ ಓದಿ : ತಮಿಳುನಾಡು ಶಾಲಾ ಪುಸ್ತಕದಲ್ಲಿ ಸೂಪರ್​ ಸ್ಟಾರ್ ರಜನೀಕಾಂತ್ ಜೀವನ ಸಾಧನೆ ಕುರಿತ ಪಠ್ಯ

ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರ ಬಂಧನವನ್ನು ಸುಪ್ರೀಂ ಕೋರ್ಟ್​ ಮಂಗಳವಾರ ಪ್ರಶ್ನಿಸಿತ್ತು. ಅಲ್ಲದೆ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಉತ್ತರಪ್ರದೇಶ ಸರ್ಕಾರವನ್ನು ತಾಕೀತು ಮಾಡಿತ್ತು. ಈ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡಿದ ಮರು ದಿನವೇ ಉತ್ತರಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಮೇಲಿನ ಅಮಾನವೀಯ ಹಲ್ಲೆ ಪ್ರಕರಣ ಬೆಳಕಿಗೆ ಬಂದಿರುವ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading