Crypto Scam: ಕೇರಳದಲ್ಲಿ ಮತ್ತೊಂದು ದೊಡ್ಡ ಕ್ರಿಪ್ಟೋ ಸ್ಕ್ಯಾಮ್: ಹೂಡಿಕೆದಾರರಿಗೆ 50 ಕೋಟಿ ರೂ. ಪಂಗನಾಮ

ಕೇರಳದಲ್ಲಿ ಮತ್ತೊಂದು ದೊಡ್ಡದಾದ ಕ್ರಿಪ್ಟೋ ಸ್ಕ್ಯಾಮ್ ನಡೆದಿದ್ದು ಹೂಡಿಕೆದಾರರಿಗೆ ಸುಮಾರು 50 ಕೋಟಿಯಷ್ಟು ಹಣ ವಂಚನೆಯಾಗಿದೆ. ಶಂಕಿತರು ಕೊಚ್ಚಿ ಮೂಲದ ಕಂಪನಿಗಳಾದ 'ರಿಚ್ ಫೆರ್ರಿಮ್ಯಾನ್ ಹಾಗೂ ಡೀಲ್ ಫೆಕ್ಸ್' ಖಾತೆಗಳ ಮೂಲಕ ಹಣಸಂಗ್ರಹಿಸಿದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೇರಳ ಮತ್ತೊಂದು ಬಹು ಕೋಟಿ ಕ್ರಿಪ್ಟೋ ಕರೆನ್ಸಿ (Crypto Currency) ಹಗರಣದ ಮೇಲೆ ಕಣ್ಣಿಟ್ಟಿದೆ. ಕ್ರಿಪ್ಟೋ ಕರೆನ್ಸಿ ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಭರವಸೆ ನೀಡಿ ಜನರಿಗೆ ಕೊಟ್ಯಾಂತರರೂಪಾಯಿ ವಂಚಿಸಿದ ಕೆಲವರು ಶಂಕಿತರ ವಿವರಗಳನ್ನು ಪೊಲೀಸರು (Police) ಮತ್ತು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. ಶಂಕಿತರು ಕೊಚ್ಚಿ (Kochi) ಮೂಲದ ಕಂಪನಿಗಳಾದ 'ರಿಚ್ಫೆರ್ರಿ ಮ್ಯಾನ್' ಮತ್ತು 'ಡೀಲ್ ಫೆಕ್ಸ್' ಖಾತೆಗಳ ಮೂಲಕ ಸಂಗ್ರಹಿಸಿದ ಹಣವನ್ನು ಕಸಿದು ಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 25 ಲಕ್ಷ ರೂಪಾಯಿ ಕಳೆದುಕೊಂಡ ಹೂಡಿಕೆದಾರರು (Investor) ಪೆರಂಬೂರು ಪೊಲೀಸರಿಗೆ ದೂರು ನೀಡಿದಾಗ ವಂಚನೆ ಮಾಡಿರುವುದು  ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮೂವಾಟುಪುರದ ಮುದವೂರು ನಿವಾಸಿ ಕೆ.ಕೆ ವಿನೋದ್ (53) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿಗಳು ಮತ್ತು ಆತನ ಸಹಚರರು ರಾಜ್ಯದಾದ್ಯಂತ ವಿವಿದೆಡೆ ಸಭೆ ನಡೆಸಿ ಹೂಡಿಕೆದಾರರನ್ನು ಆಕರ್ಷಿಸಿರುವುದು ಮತ್ತು ಅವರಿಗೆ ಭಾರಿ ಆದಾಯದ ಆಸೆ ಒಡ್ಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಹಲವಾರು ಜನರನ್ನು ವಂಚಿಸಿದ ಆರೋಪಿಗಳು
ತುಂಬಾ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಹಾಗೂ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿದ್ದಾರೆ. ಆರೋಪಿಗಳು ಕೊಟ್ಟಾಯಾಮ್ ಮತ್ತು ಪಥನಾಂತಿಟ್ಟ ಜಿಲ್ಲೆಗಳಲ್ಲಿ ಹಲವಾರು ಜನರನ್ನು ವಂಚಿಸಿದ್ದಾರೆ ಎಂದು ಪ್ರಾಥಮಿಕ ವಿವರಗಳು ಹೇಳಿವೆ. ನಾವು ಆರೋಪಿಗಳು ಸಂಗ್ರಹಿಸಿರುವ ಮೊತ್ತವನ್ನು ಪರಿಶೀಲಿಸುತ್ತಿದ್ದೀವಿ ಇದು ಸರಿ ಸುಮಾರು 50 ಕೋಟಿಗಳಷ್ಟು ಇರಬಹುದು ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳಿಗೆ ಅನೇಕ ಜನರು ಚಿನ್ನಾಭರಣಗಳನ್ನು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಹಣ ಕಳೆದುಕೊಂಡ ಸೆಂಥಿಲ್ ಕುಮಾರ್ ಅವರು ಹೇಳಿದ್ದೇನು 
"ನಾನು ವಿದೇಶದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ, ನನ್ನ ಸ್ನೇಹಿತನ ಮೂಲಕ ನಾನು ವಿನೋದ್ ಅನ್ನು ಭೇಟಿ ಮಾಡಿದೆ. ವಿನೋದ್ ಅವರು ತಮ್ಮ ಕಂಪನಿಯು ಕ್ರಿಪ್ಟೋಕರೆನ್ಸಿಗಳನ್ನು ವ್ಯಾಪಾರ ಮಾಡುತ್ತಿದೆ ಎಂದು ನನಗೆ ತಿಳಿಸಿದರು ಹಾಗೂ ನಾನು ಅವರ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಪಾಯದ ಸಾಧ್ಯತೆ ಕಡಿಮೆ ಎಂದು ಹೇಳಿದರು. ಅವರು ಮೊದಲ ಕೆಲವು ತಿಂಗಳುಗಳಲ್ಲಿ ದೊಡ್ಡ ಮೊತ್ತದ ಆದಾಯದ ಭರವಸೆಯನ್ನು ನೀಡಿದರು. ಆದರೆ ಏನು ಆಗಲಿಲ್ಲ ಎಂದು 25 ಲಕ್ಷ ಕಳೆದುಕೊಂಡ ಸಂತ್ರಸ್ತ ಸೆಂಥಿಲ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Father Rapes Daughter: ಹೆಂಡತಿ ಸಾವಿನ ನಂತರ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ

ನಾವು ಕಂಪನಿಯ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿಗಳು ಸೆಪ್ಟೆಂಬರ್ 2021ರಂದು ರಿಚ್ಚಿಫೆರ್ರಿ ಮ್ಯಾನ್ ಕಂಪನಿಯನ್ನು ನೊಂದಾಯಿಸಿದ್ದಾರೆ. ಪ್ರಸ್ತುತ ಕೆ.ಕೆ ವಿನೋದ್ ಮತ್ತು ರೆಜಿ ವಿನೋದ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಬೇಕಂತ ಸಿಲುಕಿಸಿದ್ದಾರೆ ಎಂದು ವಿನೋದ್ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸಿದರು, ಸೆಕ್ಷನ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನಿಖೆಯ ವರದಿಯ ಪ್ರಕಾರ ವಿನೋದ್ ಅವರು ದೂರುದಾರರಿಂದ 5.29 ಲಕ್ಷ ಹಣ ತೆಗೆದುಕೊಂಡಿದ್ದಲ್ಲದೆ. ನವೆಂಬರ್ 4 ಮತ್ತು 9, 2021 ರಲ್ಲಿ 404 ಗ್ರಾಮ್ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೋರಿಸ್ ಕಾಯಿನ್ ಹಗರಣ
2020ರಲ್ಲಿ ಮಲಪ್ಪುರಂ ಮೂಲದ ನಿಶಾದ್.ಕೆ morriscoin .com ಎಂಬ ವೆಬಸೈಟ್ ಅನ್ನು ಸ್ಥಾಪಿಸುವ ಮೂಲಕ ಕ್ರಿಪ್ಟೋಕರೆನ್ಸಿ ವಂಚನೆ ಮಾಡಿದರು. ಮೋರಿಸ್ ಕಾಯಿನ್ ಎಂಬ ಅಸ್ತಿತ್ವದಲ್ಲಿದ್ದ ಕ್ರಿಪ್ಟೋಕರೆನ್ಸಿ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ನೀಡುವುದಾಗಿ ಭರವಸೆ ನೀಡಿ, ಅನಿವಾಸಿ ಕೇರಳೀಯರು ಸೇರಿದಂತೆ ಸಾವಿರಾರು ಜನರಿಂದ ಸುಮಾರು 1200 ಕೋಟಿ ವಂಚಿಸಿದ್ದಾರೆ.

ಇದನ್ನೂ ಓದಿ: Property: ಗಂಡನ ಶವ ಮನೆಯಲ್ಲೇ ಬಿಟ್ರು, ಆಫೀಸ್‌ಗೆ ಓಡೋಡಿ ಹೋದ್ರು; ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ವಂಚನೆ ಬಗ್ಗೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯವು ನಿಶಾದ್ ಮತ್ತು ಆತನ ಆಸ್ತಿಗಳನ್ನು ಜಪ್ತಿ ಮಾಡಿತು, ಈ ಹಣವನ್ನು ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಪ್ರಾಜೆಕ್ಟ್ಗಳಲ್ಲಿ ಹೂಡಿಕೆ ಮಾಡಿರುವುದನ್ನು ಪತ್ತೆ ಮಾಡಿತು. ನವೆಂಬರ್ 2021ರಲ್ಲಿ , ಡೆಪಾಸಿಟ್ ಸಂಗ್ರಹಿಸುವ ಕೆಲಸಕ್ಕೆ ಮಾರ್ಗಗಳಾಗಿ ಇದ್ದ ಇವನ ಏಳು ಜನ ಸಹಚರರನ್ನು ಪೊಲೀಸರು ಬಂಧಿಸಿದರು.
Published by:Ashwini Prabhu
First published: