HOME » NEWS » National-international » ANOTHER CONTROVERSIAL TWEET BY BOLLYWOOD ACTRESS KANGANA SHE WAS A LIAR SAYS KUNAL KAMRA MAK

ನಟಿ ಕಂಗನಾ ಮತ್ತೊಂದು ವಿವಾದಾತ್ಮಕ ಟ್ವೀಟ್​; ಆಕೆ ಓರ್ವ ಸುಳ್ಳುಗಾರ್ತಿ ಎಂದ ಕುನಾಲ್ ಕಮ್ರಾ

ಕಂಗನಾ ಟ್ವೀಟ್​ಗೆ ಅನೇಕರು ಪ್ರತಿಕ್ರಿಯಿಸಿ, ನೀವು ಹೇಳುವಂತೆ ಅಮೆರಿಕ ಚೀನಾದ ವಸಾಹತು ರಾಷ್ಟ್ರವಲ್ಲ. ಆದರೆ, ಭಾರತದ ಅರುಣಾಚಲ ಪ್ರದೇಶದ ಹಳ್ಳಿಯೊಂದನ್ನು ಆಕ್ರಮಿಸಿರುವ ಚೀನಾ ಅಲ್ಲಿ ಹೊಸದೊಂದು ಹಳ್ಳಿಯನ್ನೆ ನಿರ್ಮಾಣ ಮಾಡಿದೆ ಎಂದು ನಟಿಗೆ ಟಾಂಗ್ ನೀಡಿದ್ದಾರೆ.

news18-kannada
Updated:February 3, 2021, 6:45 PM IST
ನಟಿ ಕಂಗನಾ ಮತ್ತೊಂದು ವಿವಾದಾತ್ಮಕ ಟ್ವೀಟ್​; ಆಕೆ ಓರ್ವ ಸುಳ್ಳುಗಾರ್ತಿ ಎಂದ ಕುನಾಲ್ ಕಮ್ರಾ
ಕಂಗನಾ ರಣಾವತ್​-ಕುನಾಲ್ ಕಮ್ರಾ.
  • Share this:
ಮುಂಬೈ (ಫೆಬ್ರವರಿ 03); ವಿವಾದಾತ್ಮಕ ಟ್ವೀಟ್​ ಮತ್ತು ಹೇಳಿಕೆಗಳ ಮೂಲಕವೇ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ, ಪೇಚಿಗೆ ಸಿಲುಕುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ಮತ್ತೊಮ್ಮೆ ಭಯೋತ್ಪಾದಕರು ಎಂದು ಕರೆಯುವ ಮೂಲಕ ನಟಿ ಕಂಗನಾ ಅನೇಕರ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಕಂಗನಾ ರಣಾವತ್​ ಅವರನ್ನು ಯಾವಾಗಲೂ ಟೀಕೆಗೆ ಒಳಪಡಿಸುವ ಹಾಸ್ಯ ನಟ ಕುನಾಲ್ ಕಮ್ರಾ ನಟಿಯ ಟ್ವೀಟ್​ಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸುವ ಮೂಲಕ, ಇವರಿಬ್ಬರ ಟ್ವೀಟ್ ಸಮರ ಮತ್ತೊಮ್ಮೆ ಮುಂದುವರೆದಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಮತ್ತು ಪಂಜಾಬ್​ ರಾಜ್ಯದ ರೈತರು ಕಳೆದ ಎರಡು ತಿಂಗಳುಗಳಿಂದ ಸತತವಾಗಿ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ದೇಶದ ಇತರೆ ರಾಜ್ಯಗಳಲ್ಲೂ  ಆದರೂ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈ ನಡುವೆ ಭಾರತದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಇಂದು ಟ್ವೀಟ್​ ಮಾಡಿದ್ದ ಖ್ಯಾತ ಪಾಪ್​ ಗಾಯಕಿ ರಿಹಾನ್ನಾ ಸಿಎನ್​ಎನ್​ ವರದಿಯನ್ನು ಉಲ್ಲೇಖಿಸಿ "ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ" ಎಂದು ಪ್ರಶ್ನಿಸಿದ್ದರು. ಈ ಟ್ವೀಟ್​ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಭಾರತದಲ್ಲೂ ಪರ ವಿರೋಧ ಚರ್ಚೆಯಾಗುತ್ತಿದೆ. ಅಲ್ಲದೆ, ಭಾರತದಲ್ಲಿ ಅನೇಕರು ಅದರಲ್ಲೂ ಮುಖ್ಯವಾಗಿ ಬಿಜೆಪಿ ಬೆಂಬಲಿಗರು ರಿಹಾನ್ನಾ ಅವರ ಟ್ವೀಟ್​ ಅನ್ನುತರಾಟೆಗೆ ತೆಗೆದುಕೊಂಡಿದ್ದಾರೆ.


ಆದರೆ, ಒಂದು ಹೆಜ್ಜೆ ಮುಂದೆ ಇಟ್ಟು ರಿಹಾನ್ನಾ ಮತ್ತು ಭಾರತದ ರೈತ ಹೋರಾಟಗಾರರನ್ನು ಟ್ವೀಟ್ ಮೂಲಕ ನಿಂದಿಸಿರುವ ಕಂಗನಾ ರಣಾವತ್​, "ದೆಹಲಿ ಹೋರಾಟದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅಲ್ಲಿ ಹೋರಾಟ ಮಾಡುತ್ತಿರುವವರು ಯಾರೂ ರೈತರಲ್ಲ. ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು.

ಇಂತಹ ಹೋರಾಟಗಳ ಮೂಲಕ ಚೀನಾ ದೇಶವು ಅಮೆರಿಕಾವನ್ನು ತನ್ನ ವಸಾಹತು ಮಾಡಿದಂತೆ ಭಾರತವನ್ನು ಸಹ ದುರ್ಬಲಗೊಳಿಸಿ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಬಹುದು. ಮೂರ್ಖರೇ, ಕುಳಿತುಕೊಳ್ಳಿ, ನಿಮ್ಮಂತೆಯೇ ನಾವು ನಮ್ಮ ರಾಷ್ಟ್ರವನ್ನು ಮಾರಾಟ ಮಾಡುತ್ತಿಲ್ಲ" ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದರು.ಆದರೆ, ನಟಿ ಕಂಗನಾ ರಣಾವತ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಹಾಸ್ಯ ನಟ ಕುನಾಲ್​ ಕಮ್ರಾ, "ಎಲ್ಲವೂ ಸರಿಯೇ ಆದರೆ, ನೀವು ಸುಳ್ಳು ಹೇಳಲು ಬಳಸುವ ದಾರಿ ನನಗೆ ಇಷ್ಟ" ಎಂದು ಹೇಳುವ ಮೂಲಕ ನಟಿಯನ್ನು ಅಪಹಾಸ್ಯಕ್ಕೆ ಈಡುಮಾಡಿದ್ದಾರೆ.

ಇದನ್ನೂ ಓದಿ: ಕಡೆಗೂ ಗೆಲ್ಲುವವರು ರೈತರೇ, ಕೇಂದ್ರ ಸರ್ಕಾರ ಈಗಲೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲಿ: ರಾಹುಲ್ ಗಾಂಧಿ

ಅಲ್ಲದೆ, ಕಂಗನಾ ಟ್ವೀಟ್​ಗೆ ಅನೇಕರು ಪ್ರತಿಕ್ರಿಯಿಸಿ, "ನೀವು ಹೇಳುವಂತೆ ಅಮೆರಿಕ ಚೀನಾದ ವಸಾಹತು ರಾಷ್ಟ್ರವಲ್ಲ. ಆದರೆ, ಭಾರತದ ಅರುಣಾಚಲ ಪ್ರದೇಶದ ಹಳ್ಳಿಯೊಂದನ್ನು ಆಕ್ರಮಿಸಿರುವ ಚೀನಾ ಅಲ್ಲಿ ಹೊಸದೊಂದು ಹಳ್ಳಿಯನ್ನೆ ನಿರ್ಮಾಣ ಮಾಡಿದೆ" ಎಂದು ನಟಿಗೆ ಟಾಂಗ್ ನೀಡಿದ್ದಾರೆ.
Published by: MAshok Kumar
First published: February 3, 2021, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories