Cheetah Death: ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! ಒಂದೇ ತಿಂಗಳಲ್ಲಿ 2 ನಿಧನ; ಕಾರಣ ಏನು?

ಚೀತಾ ಸಾವು

ಚೀತಾ ಸಾವು

ಚೀತಾ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ವೈದ್ಯರು ದೃಢಪಡಿಸಿ ಚೀತಾದ ಅಸ್ವಸ್ಥತೆ ಬಗ್ಗೆ ಪಶು ವೈದ್ಯಕೀಯ ತಂಡಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದಕ್ಕೆ ಚಿಕಿತ್ಸೆ ನೀಡಲು ಕೂಡಲೇ ಅದನ್ನು ಶಾಂತಗೊಳಿಸುವ ಅಗತ್ಯ ಇದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದರು.

  • Share this:

ಕುನೋ: ದಕ್ಷಿಣ ಆಫ್ರಿಕಾದಿಂದ (South Africa) ಭಾರತಕ್ಕೆ ಕರೆತಂದಿದ್ದ ಚೀತಾಗಳ (Cheetah) ಪೈಕಿ ಇತ್ತೀಚೆಗಷ್ಟೇ ಒಂದು ಚೀತಾ ಅನಾರೋಗ್ಯದಿಂದ ಮೃತಪಟ್ಟಿತ್ತು. ಇದೀಗ ಆ ಚೀತಾ ಸಾವನ್ನಪ್ಪಿದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಚೀತಾ ಮೃತಪಟ್ಟಿದೆ. ಈ ವರ್ಷವಷ್ಟೇ ಭಾರತಕ್ಕೆ ತರಲಾಗಿದ್ದ ಉದಯ್ (Cheetah Uday) ಎಂಬ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಭಾನುವಾರ ಸಂಜೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಮೃತಪಟ್ಟಿದೆ.


ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ 12 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿಗಾವಣೆಯಲ್ಲಿ ಇಡಲಾಗಿದ್ದು, ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೃಹತ್ ಆವರಣದಲ್ಲಿ ದೈನಂದಿನ ತಪಾಸಣೆ ನಡೆಸುವಾಗ ಎರಡನೇ ಸಂಖ್ಯೆಯ ಆವರಣದಲ್ಲಿ ಚೀತಾ ಉದಯ್ ತಲೆಯನ್ನು ಕೆಳಕ್ಕೆ ಬಗ್ಗಿಸಿಕೊಂಡು ಕುಳಿತಿತ್ತು. ಅದು ನಡೆದಾಡುವಾಗಲೂ ಪರದಾಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದರು. ಹೀಗಾಗಿ ಆ ಚೀತಾದ ಆರೋಗ್ಯ ತಪಾಸಣೆ ಮಾಡಿದಾಗ ಆರೋಗ್ಯವಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದರು. ಆದರೆ 24 ಗಂಟೆಯ ಒಳಗೆ ಚೀತಾದ ಆರೋಗ್ಯ ಹದಗೆಟ್ಟು ಮೃತಪಟ್ಟಿರುವುದು ಅಚ್ಚರಿ ಮೂಡಿಸಿದೆ.


ಇದನ್ನೂ ಓದಿ: Project Cheetah: ಫೆಬ್ರವರಿಯಲ್ಲಿ ಮತ್ತೊಮ್ಮೆ ಭಾರತಕ್ಕೆ ಬರಲಿವೆ 12 ಚಿರತೆಗಳು! ಏನಿದು ಹೊಸ ಯೋಜನೆ?


ಹೊಸ ಯೋಜನೆಗೆ ಹಿನ್ನಡೆ


ಆರು ವರ್ಷದ ಈ ಚೀತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅದಕ್ಕೆ ಉಂಟಾಗಿದ್ದ ಅನಾರೋಗ್ಯ ಸಮಸ್ಯೆ ಏನು ಎಂದು ತಿಳಿಯಲು ಮರಣೋತ್ತರ ಪರೀಕ್ಷೆ ವರದಿಗಾಗಿ ಅರಣ್ಯ ಅಧಿಕಾರಿಗಳು ಕಾಯುತ್ತಿದ್ದಾರೆ. ಆ ಮೂಲಕ ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಮಹತ್ವಾಕಾಂಕ್ಷಿ ಚೀತಾ ಮರು ಪರಿಚಯ ಯೋಜನೆಗೆ ಮತ್ತೊಂದು ಹಿನ್ನಡೆಯಾಗಿದೆ. 


ಚೀತಾ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ವೈದ್ಯರು ದೃಢಪಡಿಸಿ ಚೀತಾದ ಅಸ್ವಸ್ಥತೆ ಬಗ್ಗೆ ಪಶು ವೈದ್ಯಕೀಯ ತಂಡಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದಕ್ಕೆ ಚಿಕಿತ್ಸೆ ನೀಡಲು ಕೂಡಲೇ ಅದನ್ನು ಶಾಂತಗೊಳಿಸುವ ಅಗತ್ಯ ಇದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದರು. ಅದಕ್ಕೆ ಅರವಳಿಕೆ ಮದ್ದು ನೀಡಲು ಅನುಮತಿ ಕೊಡುವಂತೆ ವನ್ಯಜೀವಿ ಪಿಸಿಸಿಎಪ್‌ಗೆ ಕೋರಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಉದಯ್‌ಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಅದರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ನಿರಂತರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಸಂಜೆ 4ರ ಸುಮಾರಿಗೆ ಅದು ಮೃತಪಟ್ಟಿದೆ.


ಇದನ್ನೂ ಓದಿ: Namibian Cheetah: ಭಾರತದಲ್ಲಿ ಜನಿಸಿರುವ ನಮೀಬಿಯಾ ಚೀತಾ ಮರಿಗಳಿಗೆ ನೀವೂ ಹೆಸರಿಡಬಹುದು! ಸರ್ಕಾರದಿಂದಲೇ ಅದ್ಭುತ ಅವಕಾಶ


2 ವಾರದ ಹಿಂದೆ ಚೀತಾ ಸಾವನ್ನಪ್ಪಿತ್ತು!


ನಮೀಬಿಯಾದಿಂದ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎಂಟು ಚೀತಾಗಳನ್ನು ತರಿಸಲಾಗಿತ್ತು. ಜೊತೆಗೆ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿದ್ದವು. ಆ ಪೈಕಿ ಕಳೆದ ಮಾರ್ಚ್‌ 27ರಂದು ಮೊದಲ ಬಾರಿಗೆ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳ ಪೈಕಿ ಸಾಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು.




ಸಾಶಾ ಚೀತಾದ ಸಾವಿನ ಬೆನ್ನಲ್ಲೇ ಮತ್ತೊಂದು ಹೆಣ್ಣು ಚೀತಾ ಸಿಯಾಯಾ ನಾಲ್ಕು ಮರಿಗಳಿಗೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜನ್ಮ ನೀಡಿತ್ತು. ಸದ್ಯ ಒಟ್ಟು 20 ಚೀತಾಗಳ ಪೈಕಿ 18 ಚೀತಾಗಳು ಉಳಿದಿವೆ. ಇನ್ನು ಈ ಚೀತಾಗಳಿಗೆ ಭಾರತದ ನೆಲದಲ್ಲಿ ಅಥವಾ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವುದಕ್ಕೆ ಕಷ್ಟ ಸಾಧ್ಯ. ಇಲ್ಲಿನ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ ಎಂಬ ವಾದವನ್ನೂ ಪರಿಸರವಾದಿಗಳು ಚರ್ಚೆ ಮಾಡಿದ್ದರು.

top videos
    First published: