ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮತ್ತೊಬ್ಬ ನಟಿಯಿಂದ #MeToo ಆರೋಪ

HR Ramesh | news18
Updated:October 21, 2018, 3:03 PM IST
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮತ್ತೊಬ್ಬ ನಟಿಯಿಂದ #MeToo ಆರೋಪ
  • News18
  • Last Updated: October 21, 2018, 3:03 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಅ.21): ದಿನದ ಹಿಂದೆಯಷ್ಟೇ ಬಹುಭಾಷಾ ನಟಿ, ಕನ್ನಡತಿ ಶ್ರುತಿ ಹರಿಹರನ್​ ಅವರಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸಿದ್ದ ಆ್ಯಕ್ಷನ್ ಕಿಂಗ್ ಅರ್ಜುನ್​ ಸರ್ಜಾ ವಿರುದ್ಧ ಮತ್ತೊಬ್ಬ ನಟಿ #MeToo ಆರೋಪ ಮಾಡಿದ್ದಾರೆ.

ಅರ್ಜುನ್​ ಸರ್ಜಾ ವಿರುದ್ಧ ಆರೋಪ ಮಾಡಿರುವ ನಟಿ, ತನ್ನ ಹೆಸರನ್ನು ಗೌಪ್ಯವಾಗಿಟ್ಟಿದ್ದಾರೆ. ಸರ್ಜಾ ಅವರೊಂದಿಗೆ ನಾನು ಒಂದು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನ್ನ ನಂಬರ್​ಗೆ ಅರ್ಜುನ್ ಸರ್ಜಾ ಕಾಲ್ ಮಾಡುತ್ತಿದ್ದರು. ಅದನ್ನು ನಾನು ಅವೈಡ್ ‌ಮಾಡ್ತಿದ್ದೆ. ಅವರ ಮಗಳಿಗಿಂತಲೂ ಚಿಕ್ಕ ವಯಸ್ಸು ನಂದು. ಅವರು ಸಿಕ್ಕಾಗಲೆಲ್ಲ ಇರಿಸು ಮುರಿಸಾಗುತ್ತಿತ್ತು. ಶ್ರುತಿ ಹರಿಹರನ್ ಮಾಡಿರುವ ಆರೋಪವನ್ನು ನಾನು ಒಪ್ಪುತ್ತೇನೆ ಎಂದು ಅನಾಮಧೇಯ ನಟಿ ಆರೋಪ ಮಾಡಿದ್ದಾರೆ.

“ವೈಯಕ್ತಿಕ ಕಾರಣಗಳಿಂದಾಗಿ ನಾನು ನನ್ನ ಹೆಸರನ್ನು ಗೌಪ್ಯವಾಗಿಟ್ಟಿದ್ದೇನೆ. ನಾನು ಒಂದು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಜೊತೆಗೆ ಕೆಲಸ ಮಾಡಿದ್ದೇನೆ. ಸಹಾಯಕ ನಿರ್ದೇಶಕನಿಂದ ನನ್ನ ಮೊಬೈಲ್ ನಂಬರ್ ಪಡೆದ ಸರ್ಜಾ ನನ್ನನ್ನು ಸಂಪರ್ಕಿಸಿ, ಮುಂದಿನ ತಮ್ಮ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವಂತೆ ಹಾಗೂ ಆ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದರು. ಅವರು ಮೆಸೇಜ್ ಮತ್ತು ಕಾಲ್​ ಮಾಡಿ, ಯಾವ್ಯಾವುದೋ ಸಮಯದಲ್ಲಿ ಬಂದು ಭೇಟಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಅವರೊಂದಿಗೆ ಇರುವ ಸಮಯದಲ್ಲಿ ನನಗೆ ಇರಿಸು ಮುರಿಸು ಉಂಟಾಗುತ್ತಿತ್ತು. ನಾನು ಒಮ್ಮೆ ಅವರಿಗೆ ನಿಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನವಳು ನಾನು ಎಂದು ಹೇಳಿ, ಅವರ ಮೆಸೇಜ್ ಮತ್ತು ಕಾಲ್​ಗಳನ್ನು ಆದಷ್ಟು ನಿಯಂತ್ರಿಸಲು ನಿರ್ಧರಿಸಿದ್ದೆ. ಏಕೆಂದರೆ, ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತಿರಲಿಲ್ಲ. ಶ್ರುತಿ ಹರಿಹರನ್ ಮಾಡಿರುವ ಆರೋಪವನ್ನು ನಾನು ನಂಬುತ್ತೇನೆ. ಜೆಂಟಲ್​ಮ್ಯಾನ್ ಎಂದು ಕರೆಸಿಕೊಳ್ಳುವ ಅರ್ಜುನ್ ಸರ್ಜಾ ಈಗಾಲಾದರೂ ಇಂತಹ ಚಾಳಿಗಳನ್ನು ನಿಲ್ಲಿಸಬೇಕು,” ಎಂದು ನಟಿ ಆರೋಪ ಮಾಡಿರುವುದಾಗಿ ಇಂಗ್ಲಿಷ್ ವೆಬ್​ಸೈಟ್​ ವರದಿ ಮಾಡಿದೆ.

ಇದನ್ನು ಓದಿ: #MeToo: ಕೊನೆಗೂ ಮೌನ ಮುರಿದ 'ವಿಸ್ಮಯ' ಚಿತ್ರ ನಿರ್ದೇಶಕ, ಅರ್ಜುನ್ ಸರ್ಜಾ ಬಗ್ಗೆ ಹೇಳಿದ್ದೇನು?

"ವಿಸ್ಮಯ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ನನ್ನೊಂದಿಗೆ ಅಸಭ್ಯ ವರ್ತನೆ ತೋರಿದ್ದರು,'' ಎಂದು ನಟಿ ಶ್ರುತಿ ಹರಿಹರನ್ ದಿನದ ಹಿಂದೆಯಷ್ಟೇ ಆರೋಪ ಮಾಡಿದ್ದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ.

First published: October 21, 2018, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading