Annapurna Idol: 100 ವರ್ಷದ ಹಿಂದೆ ಕಾಶಿ ತೊರೆದಿದ್ದ ಅನ್ನಪೂರ್ಣೆ ಮರಳಿ ವಾರಾಣಸಿಗೆ

18ನೇ ಶತಮಾನದ ಈ ಮೂರ್ತಿಯ ಒಂದು ಕೈಯಲ್ಲಿ ಖೀರ್ (ಅಕ್ಕಿ ಕಡುಬು) ಮತ್ತು ಇನ್ನೊಂದು ಕೈಯಲ್ಲಿ ಒಂದು ಚಮಚವನ್ನು ಹಿಡಿದಿದೆ

ಅನ್ನಪೂರ್ಣೆ ವಿಗ್ರಹ

ಅನ್ನಪೂರ್ಣೆ ವಿಗ್ರಹ

 • Share this:
  ಲಕ್ನೋ (ನ. 3) : ಕಾಶಿ (Kashi ) ವಿಶ್ವನಾಥನ ಸನ್ನಿಧಿಯಲ್ಲಿದ್ದ ಅನ್ನಪೂರ್ಣೆಯ ವಿಗ್ರಹ ಕಡೆಗೂ ವಾರಾಣಸಿ (Varanasi) ತಲುಪಿದೆ. ಅನ್ನಪೂರ್ಣೆ ವಿಗ್ರಹ ಮತ್ತೆ ರಾಜ್ಯಕ್ಕೆ ಮರಳಿರುವುದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ​ (UP CM Yogi Adityanath) ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದಿ ಮಾತನಾಡಿದ ಅವರು 100 ವರ್ಷಗಳ ಹಿಂದೆ ಕಾಶಿಯಿಂದ ಕಳವಾಗಿದ್ದ ಅನ್ನಪೂರ್ಣ (Annapurna idol) ದೇವಿಯ ವಿಗ್ರಹವನ್ನು ಅಂತಿಮವಾಗಿ ಅದರ ತವರು ವಾರಣಾಸಿಗೆ ಹಿಂತಿರುಗಿಸಲಾಗುತ್ತಿದೆ. ಸುಮಾರು ಒಂದು ಶತಮಾನದ ಹಿಂದೆ ಭಾರತದಿಂದ ಕಳವು ಮಾಡಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ಮರಳಿ ತರಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಅದರಂತೆ ಇಂದು ವಿಗ್ರಹ ನಮ್ಮ ರಾಜ್ಯಕ್ಕೆ ತಲುಪಿದೆ ಎಂದು ಹರ್ಷ ವ್ಯಕ್ತಪಡಿಸಿದರು.

  ಕೇಂದ್ರ ಸರ್ಕಾರದ ಫಲವಾಗಿ ಮರಳಿದ ಅನ್ನಪೂರ್ಣೆ
  ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​, ಭಾರತದಿಂದ ಕಳುವಾಗಿದ್ದ ವಿಗ್ರಹವನ್ನು ಕೆನಾಡದಿಂದ ಕೇಂದ್ರ ಸರ್ಕಾರವು ಸ್ವೀಕರಿಸಿದೆ. ಅದನ್ನು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡುತ್ತಿದೆ ಎಂದು ತಿಳಿಸಿದರು.

  ಶತನಮಾನದ ಇತಿಹಾಸ
  100 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವ ಭಾರತ ಸರ್ಕಾರದ ಮನವಿಗೆ ಮನ್ನಣೆ ಸಿಕ್ಕದೆ. ಈಗ ಮತ್ತೆ ಅನ್ನಪೂರ್ಣೆ ತನ್ನ ಸ್ಥಾನ ಸೇರುತ್ತಿದ್ದಾಳೆ ಎಂದರು.

  55 ವಿಗ್ರಹಗಳು ಮರಳಿ ಭಾರತಕ್ಕೆ

  ಭಾರತದಿಂದ ಕಳುವಾಗಿದ್ದ ಹಾಗೂ ಇತರೆ ಕಾರಣದಿಂದಾಗಿ ದೇಶದಲ್ಲಿನ ಅನೇಕ ಶಿಲ್ಪಕಲೆಗಳು ವಿದೇಶಗಳಲ್ಲಿ ಇವೆ. ಭಾರತೀಯ ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಈ ಶಿಲ್ಪ ಕಲೆಗಳು ವಿಗ್ರಹ, ವರ್ಣ ಚಿತ್ರಗಳನ್ನು ವಿವಿಧ ದೇಶದಿಂದ ತರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ದೇಶ್ಕೆಕ ಸುಮಾರು 55 ವಿಗ್ರಹಗಳು ತರುವ ವ್ಯವಸ್ಥೆಯಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದರು.

  ಇದನ್ನು ಓದಿ: ಕೇರಳ ಪ್ರವಾಸ ನಡೆಸಿದರೆ, ಈ 3 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

  ನಾಡಿನ ಜನತೆಗೆ ಶುಭಾಶಯ

  ಸುಮಾರು 100 ವರ್ಷಗಳ ಹಿಂದೆ ಕದ್ದು ಕೆನಡಾಕ್ಕೆ ಕೊಂಡೊಯ್ದುದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಭಾರತಕ್ಕೆ ತರಲಾಗುತ್ತಿದ್ದು, ನವೆಂಬರ್ 14 ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹವನ್ನು ಇರಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯತ್ನ ಫಲವಾಗಿ ಇಂದು ವಿಗ್ರಹ ಮತ್ತೆ ತನ್ನ ಸ್ಥಾನ ಸೇರುತ್ತಿದೆ. ಈ ಮೂಲಕ ದೀಪಾವಳಿ ಸಂಭ್ರಮ ಹೆಚ್ಚಿಸಿದ್ದು, ನಾಡ ಜನತೆಗೆ ದೀಪಾವಳಿ ಶುಭಾಶಯ ಎಂದು ಅವರು ತಿಳಿಸಿದರು.

  ಇದನ್ನು ಓದಿ: 720ಕ್ಕೆ 720 ಅಂಕ ಪಡೆದ ಮೃಣಾಲ್ ಪ್ರತಿದಿನ ಅಭ್ಯಸಿಸಿದ್ದು ಕೇವಲ 4 ಗಂಟೆ..!

  ಒಂದು ಕೈಯಲ್ಲಿ ಖೀರ್​, ಮತ್ತೊಂದರಲ್ಲಿ ಚಮಚ 
  ಈ ಪ್ರತಿಮೆಯನ್ನು ಪೀಬಾಡಿ ಎಸೆಕ್ಸ್ ಮ್ಯೂಸಿಯಂನಲ್ಲಿ ಭಾರತೀಯ ಮತ್ತು ದಕ್ಷಿಣ ಏಷ್ಯಾದ ಕಲೆಯ ಡಾ.ಸಿದ್ಧಾರ್ಥ ವಿ. ಶಾ ಪತ್ತೆ ಹಚ್ಚಿದ್ದರು. ಈ ಮೂರ್ತಿಯೂ ಸ್ತ್ರೀ ದೈಹಿಕ ಗುಣಲಕ್ಷಣಗಳಿದ್ದು ಇದು ಅನ್ನಪೂರ್ಣೆ ಎಂದು ತಿಳಿಸಿದ್ದರು. 18ನೇ ಶತಮಾನದ ಈ ಮೂರ್ತಿಯ ಒಂದು ಕೈಯಲ್ಲಿ ಖೀರ್ (ಅಕ್ಕಿ ಕಡುಬು) ಮತ್ತು ಇನ್ನೊಂದು ಕೈಯಲ್ಲಿ ಒಂದು ಚಮಚವನ್ನು ಹಿಡಿದಿದ್ದಾಳೆ ಎಂದು ವಿಶ್ಲೇಷಣೆ ನಡೆಸಿದ್ದರು.
  Published by:Seema R
  First published: