Anna Hazare: ಅಧಿಕಾರದ ಮದ ನಿಮ್ಮ ತಲೆಗೇರಿದೆ; ಕೇಜ್ರಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಟೀಕೆ!

ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆಯವರು ಪಕ್ಷದ ಮಾಜಿ ಮಾರ್ಗದರ್ಶಕ, ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಏರಿದೆ ಎಂದು ತೋರುತ್ತಿದೆ ಎಂಬಂತಹ ಕಟುಸಾಲುಗಳಲ್ಲಿ ಹಜಾರೆಯವರು ಕೇಜ್ರಿವಾಲ್ ಸರಕಾರವನ್ನು ಟೀಕಿಸಿದ್ದಾರೆ. 

ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್

ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್

  • Share this:
ಭ್ರಷ್ಟಾಚಾರದ ಪ್ರಕರಣದ ನಂತರ ಜುಲೈನಲ್ಲಿ ಹಿಂತೆಗೆದುಕೊಳ್ಳಲಾದ ಕೇಜ್ರಿವಾಲ್  ಸರಕಾರದ ಮದ್ಯ ಪರವಾನಗಿ (Government Liquor License) ನೀತಿಯ ಕುರಿತು ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆಯವರು (Anna Hazare) ಪಕ್ಷದ ಮಾಜಿ ಮಾರ್ಗದರ್ಶಕ, ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಪತ್ರ ಬರೆದಿದ್ದು, ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಏರಿದೆ ಎಂದು ತೋರುತ್ತಿದೆ ಎಂಬಂತಹ ಕಟುಸಾಲುಗಳಲ್ಲಿ ಹಜಾರೆಯವರು ಕೇಜ್ರಿವಾಲ್ ಸರಕಾರವನ್ನು (Government) ಟೀಕಿಸಿದ್ದಾರೆ. ನೀವು ಮುಖ್ಯಮಂತ್ರಿಗಳಾದ ನಂತರ ನಾನು ನಿಮಗೆ ಇದೇ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ. ಇದಕ್ಕೆ ಕಾರಣವೇನೆಂದರೆ ನಿಮ್ಮದೇ ಸರಕಾರದ ಮದ್ಯ ನೀತಿಯ ಕುರಿತು ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವುಂಟಾಗಿದೆ ಎಂದು ಹಿಂದಿ ಭಾಷೆಯಲ್ಲಿರುವ ಪತ್ರವು ತಿಳಿಸಿದೆ.

ಅಣ್ಣಾ ಹಜಾರೆಯವರು ಪತ್ರದಲ್ಲಿ ಏನು ಉಲ್ಲೇಖಿಸಿದ್ದಾರೆ
ನನ್ನ ಬಳಿಗೆ ಮುನ್ನುಡಿ ಬರೆಯುವಂತೆ ತಂದಿದ್ದ ನಿಮ್ಮ ಪುಸ್ತಕ ಸ್ವರಾಜ್‌ನಲ್ಲಿ ಮದ್ಯ ನೀತಿಗಳ ಕುರಿತು ನೀವು ಆದರ್ಶಪ್ರಾಯವಾದ ವಿಚಾರಗಳನ್ನು ಬರೆದಿದ್ದೀರಿ ಎಂದು ಪತ್ರದಲ್ಲಿ ತಿಳಿಸಿರುವ ಹಜಾರೆಯವರು, ಪುಸ್ತಕದಲ್ಲಿರುವ ಸಾಲುಗಳನ್ನು ಉಲ್ಲೇಖಿಸುತ್ತಾ ಪ್ರದೇಶದಲ್ಲಿರುವ ನಿವಾಸಿಗಳ ಒಪ್ಪಿಗೆಯಿಲ್ಲದೇ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬೇಡಿ ಎಂದಿದ್ದಿರಿ ಆದರೆ ಮುಖ್ಯಮಂತ್ರಿಗಳಾದ ಬಳಿಕ ನೀವು ಆ ಆದರ್ಶಗಳನ್ನು ಮರೆತಿದ್ದೀರಿ ಎಂದು ಪತ್ರದ ಮೂಲಕ ನೇರವಾದ ವಾಗ್ದಾಳಿ ನಡೆಸಿದ್ದಾರೆ

ನೀವು ಹಾಗೂ ಮನೀಶ್ ಸಿಸೋಡಿಯಾ ಕಟ್ಟಿದ ಆಮ್ ಆದ್ಮಿ ಪಾರ್ಟಿಯು ಇತರ ಯಾವುದೇ ಪಕ್ಷಕ್ಕಿಂತ ಈಗ ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ. ದೆಹಲಿ ಸರಕಾರದ ಅಬಕಾರಿ ಖಾತೆಯನ್ನು ನಿರ್ವಹಿಸುತ್ತಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.

ಹಿಂತೆಗೆದುಕೊಳ್ಳಲಾದ ಮದ್ಯ ನೀತಿ
ಅಬಕಾರಿ ನೀತಿಯಿಂದ ಮದ್ಯ ವ್ಯಾಪಾರಕ್ಕೆ ಇಳಿದ ಖಾಸಗಿ ಮದ್ಯ ವ್ಯಾಪಾರಿಗಳಿಂದ ಮದ್ಯ ಲಭ್ಯತೆಯಲ್ಲಿ ಸುಧಾರಣೆಗೆ ಕಂಡುಬಂದಿತು ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮದ್ಯ ದೊರೆಯಲಾರಂಭಿಸಿತು. ಆದಾಯ ಹೆಚ್ಚಳಕ್ಕೆ ಕಾರಣವಾಗಿದ್ದ ಮದ್ಯ ಮಾಫಿಯಾ ಹಾಗೂ ಗ್ರೇ ಮಾರ್ಕೆಟ್ ಅನ್ನು ಅಂತ್ಯಗೊಳಿಸುವುದಾಗಿ ಆಮ್ ಆದ್ಮಿ ಪಕ್ಷ ವಾದಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಲಾದ ನೀತಿಯನ್ನು ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ ಸಿಬಿಐ ಪರಿಶೀಲಿಸಲು ಪ್ರಾರಂಭಿಸಿದಾಗ ಮದ್ಯ ನೀತಿಯನ್ನು ಹಿಂತೆಗೆದುಕೊಳ್ಳಲಾಯಿತು.

ಇದನ್ನೂ ಓದಿ: Babri Masjid: ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲ ಕೇಸ್ ರದ್ದು; ಸುಪ್ರೀಂ ಆದೇಶ

ನಾನು ತಿಳಿಸಿದಂತೆ ಜಾಗೃತಿ ಅಭಿಯಾನವನ್ನು ನಡೆಸಿದ್ದರೆ ಹಾಗೂ ಒತ್ತಡ ಹೇರಿದ್ದರೆ ಇಂತಹ ತಪ್ಪಾದ ಮದ್ಯ ನೀತಿ ಭಾರತದಲ್ಲಿ ಎಲ್ಲಿಯೂ ರೂಪುಗೊಳ್ಳುತ್ತಿರಲಿಲ್ಲ ಎಂದು ಹಜಾರೆಯವರು ಪತ್ರದಲ್ಲಿ ಬರೆದಿದ್ದಾರೆ. ಬಲವಾದ ಲೋಕ್‌ಪಾಲ್ ಹಾಗೂ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ತರುವ ಬದಲು ನೀವು ಜನ ವಿರೋಧಿ ಅದರಲ್ಲೂ ವಿಶೇಷವಾಗಿ ಮಹಿಳಾ ವಿರೋಧಿಯಾದ ಮದ್ಯ ನೀತಿಯನ್ನು ಜಾರಿಗೆ ತಂದಿದ್ದೀರಿ ಎಂಬುದನ್ನು ಉಲ್ಲೇಖಿಸಿರುವ ಹಜಾರೆಯವರು, ಮದ್ಯ ನೀತಿಯಲ್ಲಿ ತಮ್ಮ ಹಳ್ಳಿ ರಾಳೇಗಣ ಸಿದ್ಧಿ ಮತ್ತು ಮಹಾರಾಷ್ಟ್ರ ರಾಜ್ಯವನ್ನು ಆದರ್ಶಪ್ರಾಯವಾದವುಗಳೆಂದು ತಿಳಿಸುತ್ತಾರೆ.ದೆಹಲಿಯ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ ಜನರು ಹಣ ಹಾಗೂ ಅಧಿಕಾರದ ವಿಷ ವರ್ತುಲಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಮುಖ ಚಳುವಳಿಯಿಂದ ಉಗಮವಾದ ಒಂದು ಪಕ್ಷಕ್ಕೆ ಇಂತಹ ನಡವಳಿಕೆ ಸರಿಯಾದುದಲ್ಲ ಎಂದು ಹಜಾರೆ ಪತ್ರದಲ್ಲಿ ತಿಳಿಸಿದ್ದಾರೆ.

ಮನೀಶ್ ಸಿಸೋಡಿಯಾ ನಿವಾಸ ಹಾಗೂ ಬ್ಯಾಂಕ್ ಲಾಕರ್ ಮೇಲೆ ದಾಳಿ
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಲಾಗಿದೆ. ಈ ಹಿಂದೆ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ತನ್ನ ನಿವಾಸ ಹಾಗೂ ಲಾಕರ್‌ನಲ್ಲಿ ಕೇಂದ್ರ ಸರಕಾರದ ತನಿಖಾ ಸಂಸ್ಥೆಗೆ ಏನೂ ದೊರೆಯದೇ ಇದ್ದ ಕಾರಣ ನನಗೆ ಪ್ರಧಾನಿ ಮೋದಿಯವರಿಂದ ದೋಷಮುಕ್ತತೆಯ ಪ್ರಮಾಣಪತ್ರ (ಕ್ಲೀನ್ ಚಿಟ್) ದೊರಕಿದೆ ಎಂದು ಪ್ರತಿಪಾದಿಸಿದ್ದರು. ಸಿಬಿಐ ಈ ಕುರಿತು ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ.

ಸಿಬಿಐ ಆರೋಪ
ಲೆಫ್ಟಿನೆಂಟ್ ಗವರ್ನರ್‌ನ ಪರವಾನಗಿ ಇಲ್ಲದೆ ನೀತಿಯನ್ನು ಪರಿಚಯಿಸಿರುವುದು ಮಾತ್ರವಲ್ಲದೆ ಅನೇಕ ಅನರ್ಹ ಮಾರಾಟಗಾರರಿಗೆ ಲಂಚಕ್ಕೆ ಪ್ರತಿಯಾಗಿ ಪರವಾನಗಿಗಳನ್ನು ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ತನಿಖೆಯು ಕೊಳಕು ರಾಜಕೀಯದಿಂದ ಪ್ರೇರಿವಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Shocking Report: ಆ ರಾಜ್ಯದಲ್ಲಿ ಮಹಿಳೆಯರ ಮೇಲಿನ ಕ್ರೈಂ ಹೆಚ್ಚಂತೆ, ಇಲ್ಲಿ ಸೂಸೈಡ್ ಮಾಡಿಕೊಳ್ಳುವವರು ಜಾಸ್ತಿಯಂತೆ!

ಕೇಂದ್ರದಲ್ಲಿ ಬಿಜೆಪಿ ಅಧಿಕಾರವನ್ನು ಹೊಂದಿದ್ದರೂ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತರೆಂದು ಕೆರಳಿದೆ ಎಂದು ಎಎಪಿ ಹೇಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರವ್ಯಾಪಿಯಾಗಿ ಖ್ಯಾತಿಗೊಳ್ಳುತ್ತಿರುವುದು ಬಿಜೆಪಿಯನ್ನು ಬೆದರಿಸಿದೆ ಎಂದು ಪಕ್ಷವು ಹೇಳಿಕೊಂಡಿದೆ.
Published by:Ashwini Prabhu
First published: