ಆಂಧ್ರದಲ್ಲಿಯೂ ಶುರುವಾಯಿತು ಕ್ಯಾಂಟೀನ್​ ರಾಜಕೀಯ; ಅಣ್ಣಾ ಕ್ಯಾಂಟೀನ್​ನಲ್ಲಿ ಸಿಗಲಿದೆ 5ರೂಗೆ ಊಟ

news18
Updated:July 11, 2018, 7:39 PM IST
ಆಂಧ್ರದಲ್ಲಿಯೂ ಶುರುವಾಯಿತು ಕ್ಯಾಂಟೀನ್​ ರಾಜಕೀಯ; ಅಣ್ಣಾ ಕ್ಯಾಂಟೀನ್​ನಲ್ಲಿ ಸಿಗಲಿದೆ 5ರೂಗೆ ಊಟ
news18
Updated: July 11, 2018, 7:39 PM IST
- ಸೀಮಾ ಆರ್​, ನ್ಯೂಸ್​ 18 ಕನ್ನಡ

ಹೈದ್ರಾಬಾದ್​ (ಜು.11): 2019ರ ವಿಧಾನಸಭೆಗೆ ಸಜ್ಜಾಗಿರುವ ಆಂಧ್ರಪ್ರದೇಶದಲ್ಲಿ ಈಗ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಇನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರುವ ಪ್ರಯತ್ನ ನಡೆಸುತ್ತಿದೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಿನ್ನಲೆ ಎನ್​ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ನಮ್ಮ ಜನರ ಕಾಳಜಿಗೆ ನಾವು ಸದಾ ಬದ್ದ ಎಂದು ಕೇಂದ್ರದ ವಿರುದ್ಧ ಗುಡುಗಿದರು. ಅಲ್ಲದೇ ರಾಜ್ಯ ವಿಭಜನೆ ನಂತರ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಆದರೆ ಎನ್ ಡಿಎ ಸರ್ಕಾರ ಆಂಧ್ರ ಪ್ರದೇಶಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ.  ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ನಾನು ದೀಕ್ಷೆ ಕೈಗೊಳ್ಳುತ್ತೇನೆ ಎಂದು ತಮ್ಮ ಹುಟ್ಟುಹಬ್ಬದಂದು ಉಪವಾಸ ಕೈಗೊಂಡು ಜನರನ್ನು ಸೆಳೆದರು.

ಬಳಿಕ ಸಮರ್ಥವಾಗಿ ಕಾರ್ಯನಿರ್ವಹಿಸದ ತಮ್ಮ ಪಕ್ಷದ ನಾಯಕರ ವಿರುದ್ಧವೇ ಚಾಟಿ ಬೀಸಿ ಆಡಳಿತದಲ್ಲಿ ನಿರ್ಲಕ್ಷ್ಯ ತೋರಿದರೆ, ಜನ ನಮಗೆ ಚುನಾವಣೆಯಲ್ಲಿ ಉತ್ತರಿಸುತ್ತಾರೆ. ಈ ವರ್ತನೆಯನ್ನು ತಾನು ಸಹಿಸುವುದಿಲ್ಲ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡುವ ಮೂಲಕ ತಾವು ಜನಪರ ಎಂದು ಬಿಂಬಿಸಿಕೊಂಡರು

2019ರಲ್ಲಿ ಆಂಧ್ರ ಪ್ರದೇಶದಲ್ಲಿ  ಲೋಕಸಭಾ, ವಿಧಾನಸಭಾ ಚುನಾವಣೆಗಳು ಎದುರಾಗುತ್ತಿದ್ದು ರಾಷ್ಟ್ರೀಯ ಪಕ್ಷಗಳನ್ನು ಹೊರತು ಪಡಿಸಿ ಪ್ರಾದೇಶಿಕ ಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಜಗನ್​ ನೇತೃತ್ವದ ವೈಎಸ್​ಆರ್ ಕಾಂಗ್ರೆಸ್​, ಕೆಸಿ.. ರಾವ್​ ನೇತೃತ್ವದ ಟಿಆರ್​ಎಸ್​​ ಹಾಗೂ ಪವನ್​ ಕಲ್ಯಾಣ್​ ಅವರ ಜನಸೇನೆ ತೀವ್ರ ಹಣಾಹಣಿ ನಡೆಸುತ್ತಿದೆ.

ಈ ಹಿನ್ನಲೆಯಲ್ಲಿ ತಮ್ಮ ಸರ್ಕಾರವನ್ನು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮನ ಗೆಲ್ಲಲು ನಿರ್ಧರಿಸಿರುವ ಚಂದ್ರಬಾಬು ನಾಯ್ದು ನೆರೆಯ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಬಡ ಜನರಿಗೆ ಕಡಿಮೆ ದುಡ್ಡಿನಲ್ಲಿ ಹೊಟ್ಟೆತುಂಬಿಸುವ ಕ್ಯಾಂಟೀನ್​ ರಾಜಕೀಯಕ್ಕೆ ಮುಂದಾಗಿದೆ.

ಈಗಾಗಲೇ ತಮಿಳುನಾಡು, ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಯೋಜನೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಉದ್ದೇಶದಿಂದ ರಾಜ್ಯಾದ್ಯಾಂತ ಅಣ್ಣಾ ಕ್ಯಾಂಟೀನ್​ ಮಾಡಲು ನಾಯ್ಡು ಮುಂದಾಗಿದ್ದು, ಇಂದಿನಿಂದ ಇಂದಿನಿಂದ ರಾಜ್ಯಾದ್ಯಂತ 60 ಕ್ಯಾಟೀನ್​ಗಳು ಕಾರ್ಯಾಚರಣೆ ನಡೆಸಲಿದೆ.
Loading...

ಕೇವಲ 5 ರೂಗೆ ಊಟ ನೀಡಲಾಗುವುದು ಆ ಮೂಲಕ ಹಸಿದ ಹೊಟ್ಟೆ ತುಂಬುವ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ಇದು ಮೊದಲ ಹಂತದ ಯೋಜನೆಯಾಗಿದ್ದು, ಮುಂದಿನ 204 ಕ್ಯಾಟೀನ್​ ಸ್ಥಾಪನೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದಿದ್ದಾರೆ.

2013ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ಆರಂಭಿಸಿದ ಅಮ್ಮ ಕ್ಯಾಂಟೀನ್​ ದೇಶದಾದ್ಯಂತ ಸದ್ದು ಮಾಡಿತು. ಬಳಿಕ 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಸರ್ಕಾರ ಕೂಡ ಈ ತಂತ್ರ ಅಳವಡಿಸಿಕೊಂಡು ಇಂದಿರಾ ಕ್ಯಾಂಟೀನ್​ಗೆ ಚಾಲನೆ ನೀಡಿದರು. ಈಗ ಆಂಧ್ರ ಪ್ರದೇಶದಲ್ಲಿಯೂ ಇದೇ ತಂತ್ರಕ್ಕೆ ಟಿಡಿಪಿ ಮುಂದಾಗಿದ್ದು, ಈ ಯೋಜನೆ ಯಾವ ರೀತಿ ಯಶಸ್ವಿಯಾಗಲಿದೆ ಎನ್ನುವುದು ಕಾದು ನೋಡಬೇಕಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...