• Home
  • »
  • News
  • »
  • national-international
  • »
  • Ankita Bhandari Murder: ನಾಪತ್ತೆಯಾಗಿದ್ದ ಅಂಕಿತಾ ಕೊಲೆ: BJP ನಾಯಕನ ಪುತ್ರ ಅರೆಸ್ಟ್,​ ರಾತ್ರೋ ರಾತ್ರಿ ರೆಸಾರ್ಟ್​ಗೆ ನುಗ್ಗಿದ ಬುಲ್ಡೋಜರ್!

Ankita Bhandari Murder: ನಾಪತ್ತೆಯಾಗಿದ್ದ ಅಂಕಿತಾ ಕೊಲೆ: BJP ನಾಯಕನ ಪುತ್ರ ಅರೆಸ್ಟ್,​ ರಾತ್ರೋ ರಾತ್ರಿ ರೆಸಾರ್ಟ್​ಗೆ ನುಗ್ಗಿದ ಬುಲ್ಡೋಜರ್!

ಕೊಲೆಗೀಡಾದ ಅಂಕಿತಾ ಭಂಡಾರಿ

ಕೊಲೆಗೀಡಾದ ಅಂಕಿತಾ ಭಂಡಾರಿ

Ankita Bhandari Murder: ಉತ್ತರಾಖಂಡ್​ನ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇಲ್ಲಿನ ರೆಸಾರ್ಟ್​ನಲ್ಲಿ ರಿಸೆಪ್ಶನಿಸ್ಟ್​ ಆಗಿದ್ದ ಅಂಕಿತಾ ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 22 ರಂದು ಆಕೆಯ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊಲೆಯಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಲಾಗಿದೆ.

ಮುಂದೆ ಓದಿ ...
  • Share this:

ರಿಷಿಕೇಶ್(se.24): ಶುಕ್ರವಾರ ತಡರಾತ್ರಿ ಅಂಕಿತಾ ಭಂಡಾರಿ (Ankita Bhandari) ಅವರನ್ನು ಕೊಂದ ಪುಲ್ಕಿತ್ ಆರ್ಯ ಒಡೆತನದ ರಿಷಿಕೇಶದಲ್ಲಿರುವ (Rishikesh) ವಂತರಾ ರೆಸಾರ್ಟ್‌ನ ಮೇಲೆ ಆಡಳಿತಾಧಿಕಾರಿಗಳು ಬುಲ್ಡೋಜರ್ ಏರಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಆರೋಪಿಗಳ ಆಸ್ತಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಅಂಕಿತಾ ಈ ರೆಸಾರ್ಟ್‌ನಲ್ಲಿ ರಿಸೆಪ್ಶನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಉಲ್ಲೇಖಾರ್ಹ. ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದ ಆಕೆಯ ಹುಡುಕಾಟಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಸೆಪ್ಟೆಂಬರ್ 22ರಂದು ಆಕೆ ಕೊಲೆಯಾಗಿರುವುದು ಪತ್ತೆಯಾಗಿತ್ತು. ಈ ಕೊಲೆಯಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಲಾಗಿದೆ. ಬಿಜೆಪಿ ಮುಖಂಡ ಹಾಗೂ ಮಾಜಿ ರಾಜ್ಯ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ.


ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಅಂಕಿತಾ


ಶುಕ್ರವಾರ ಎಎಸ್ಪಿ ಕೋಟ್‌ದ್ವಾರ್ ಶೇಖರ್ ಸುಯಲ್ ಅಂಕಿತಾ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದರು. ವಂತರಾ ರೆಸಾರ್ಟ್‌ನಲ್ಲಿ ರಿಸೆಪ್ಶನಿಸ್ಟ್ಕೆಲಸ ಮಾಡುತ್ತಿದ್ದ ಪೌರಿ ಗರ್ವಾಲ್‌ನ ನಂದಲ್‌ಸುನ್ ಪಟ್ಟಿಯ ಶ್ರೀಕೋಟ್ ಗ್ರಾಮದ ನಿವಾಸಿ ಅಂಕಿತಾ ಭಂಡಾರಿ ಸೆಪ್ಟೆಂಬರ್ 18 ರಂದು ಅನುಮಾನಾಸ್ಪದ ರೀತಿಯಾಗಿ ನಾಪತ್ತೆಯಾಗಿದ್ದರು ಎಂದು ಎಎಸ್‌ಪಿ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮೂವರು ಆರೋಪಿಗಳು ವಿವಾದದ ನಂತರ ಅಂಕಿತಾಳನ್ನು ಚಿಲ ಶಕ್ತಿ ನಾಲೆಗೆ ತಳ್ಳಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪೊಲೀಸರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಆರೋಪಿಯು ರೆಸಾರ್ಟ್‌ನಿಂದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.


ಇದನ್ನೂ ಓದಿ:  Crime News: ಪಾಪದ ಕಥೆಗಳನ್ನ ನೋಡಿ ಪತಿ ಕಥೆ ಮುಗಿಸಿದ್ಳು; ಪಲ್ಲಂಗದಾಟಕ್ಕೆ ಅಡ್ಡಿಯಾದ ಗಂಡನಿಗೆ ಚಟ್ಟ


ನೌಕರರ ಹೇಳಿಕೆಯಿಂದ ಹುಟ್ಟಿದ ಅನುಮಾನ


ಸೆ.22ರಂದು ಪ್ರಕರಣವನ್ನು ಕಂದಾಯ ಪೊಲೀಸರಿಂದ ಲಕ್ಷ್ಮಣಝುಳ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ. ಅಂಕಿತಾ ತನ್ನ ಕೊಠಡಿಯಿಂದ ನಾಪತ್ತೆಯಾಗಿದ್ದಾಳೆ ಎಂದು ವಂತರಾ ರೆಸಾರ್ಟ್‌ನ ನಿರ್ವಾಹಕರು ಮತ್ತು ಇಬ್ಬರೂ ವ್ಯವಸ್ಥಾಪಕರು ಹೇಳಿದ್ದಾರೆ. ನಾಪತ್ತೆಯಾದ ರಾತ್ರಿ ಅಂಕಿತಾ ನಿರ್ವಾಹಕರು ಮತ್ತು ವ್ಯವಸ್ಥಾಪಕರೊಂದಿಗೆ ಹೊರಗೆ ಹೋಗಿದ್ದರು ಆದರೆ ಹಿಂತಿರುಗಲಿಲ್ಲ ಎಂದು ನೌಕರರು ವಿಚಾರಣೆಯಲ್ಲಿ ತಿಳಿಸಿದ್ದರು.


UP Dalit Sisters death case police arrest 6 youths arrested Rape Murder


ಹರಿದ್ವಾರದ ಆರ್ಯನಗರದ ಸ್ಥಳೀಯ ಫಾರ್ಮಸಿ ನಿವಾಸಿ ರೆಸಾರ್ಟ್ ನಿರ್ವಾಹಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಅಂಕಿತ್ ಅಲಿಯಾಸ್ ಪುಲ್ಕಿತ್ ಗುಪ್ತಾ, ಜ್ವಾಲಾಪುರದ ದಯಾನಂದ ನಗರಿ ನಿವಾಸಿ ಮತ್ತು ಮ್ಯಾನೇಜರ್ ಸೌರಭ್ ಭಾಸ್ಕರ್, ಜ್ವಾಲಾಪುರದ ಸೂರಜ್‌ನಗರ ನಿವಾಸಿಗಳನ್ನು ಪೊಲೀಸರು ಬಂಧಿಸಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದ್ದಾರೆ.


ಗ್ರಾಹಕರ ಜೊತೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ ಸಚಿವನ ಪುತ್ರ


ಅಂಕಿತಾ ಜತೆ ಬ್ಯಾರೇಜ್‌ಗೆ ಬಂದಿದ್ದಾಗಿ ಮೂವರು ಆರೋಪಿಗಳು ತಿಳಿಸಿದ್ದಾರೆ. ಇಲ್ಲಿ ಫಾಸ್ಟ್ ಫುಡ್ ತಿಂದು ಮದ್ಯ ಸೇವಿಸಿದ್ದಳು.ಇದರ ನಂತರ ಪುಲ್ಕಿತ್ ಆರ್ಯ ಗ್ರಾಹಕರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಾನೆ ಎಂದು ಎಲ್ಲರಿಗೂ ಹೇಳುವುದಾಗಿ ಅಂಕಿತಾ ಹೇಳಿದ್ದಾರೆ. ಅಲ್ಲದೇ ಅಂಕಿತಾ ಪುಲ್ಕಿತ್ ನ ಮೊಬೈಲ್ ಅನ್ನು ಕಾಲುವೆಗೆ ಎಸೆದಿದ್ದಾಳೆ. ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ನಂತರ ಪುಲ್ಕಿತ್ ಮತ್ತು ಆತನ ಇತರ ಇಬ್ಬರು ಸಹಚರರು ಅಂಕಿತಾಳನ್ನು ಕಾಲುವೆಗೆ ತಳ್ಳಿದ್ದಾರೆ.


ಇದನ್ನೂ ಓದಿ: Shocking: ಕಿಸೆಯಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕೆ ಗುಂಡಿಕ್ಕಿದ ಪೊಲೀಸ್!


ಮೂವರು ಆರೋಪಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ಮರೆಮಾಚುವಿಕೆ, ಸಂಚು ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಎಸ್‌ಪಿ ಶೇಖರ್‌ ಸುಯಾಲ್‌ ತಿಳಿಸಿದ್ದಾರೆ.


ಗ್ರಾಮಸ್ಥರ ಆಕ್ರೋಶ


ರಿಷಿಕೇಶದಲ್ಲಿ, ಗಂಗಾ ಭೋಗ್‌ಪುರದ ಜನರು ಅಂಕಿತಾ ಕೊಲೆ ಪ್ರಕರಣದ ಆರೋಪಿಗಳಿಗಾಗಿ ಲಕ್ಷ್ಮಂಜುಲಾ ಠಾಣೆಯಿಂದ ಕೋಟ್‌ದ್ವಾರ ನ್ಯಾಯಾಲಯಕ್ಕೆ ಹೋಗುತ್ತಿದ್ದ ಪೊಲೀಸ್ ಜೀಪನ್ನು ತಡೆದಿದ್ದರು. ಜನರು ಜೀಪಿನ ಗಾಜು ಒಡೆದು, ಆರೋಪಿಗಳ ಬಟ್ಟೆ ಹರಿದು ಥಳಿಸಿದ್ದಾರೆ. ಅಷ್ಟೇ ಅಲ್ಲ, ಜನರು ಕಾರನ್ನು ಪಲ್ಟಿ ಮಾಡಲು ಯತ್ನಿಸಿದ್ದಾರೆ. ಸುಮಾರು 45 ನಿಮಿಷಗಳ ನಂತರ ಎಎಸ್ಪಿ ಶೇಖರ್ ಸುಯಲ್ ಸ್ಥಳಕ್ಕೆ ತಲುಪಿದರು. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ.

Published by:Precilla Olivia Dias
First published: