ನವದೆಹಲಿ (ಅ.27): ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಫೇಸ್ಬುಕ್ ದೇಶದಲ್ಲಿ ರಾಜಕೀಯವ ವಿಷಯಗಳನ್ನು ಹೇಗೆ ನಿರ್ವಹಿಸುತ್ತಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಈ ವರದಿ ಬಳಿಕ ಫೇಸ್ಬುಕ್ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಸಾರ್ವಜನಿಕ ಸೇವೆಯ ಆಸಕ್ತಿ ವಿಷಯಗಳನ್ನು ಹಿಡಿದಿಡುವಲ್ಲಿ ವಿಫಲವಾದ ಹಿನ್ನಲೆ ಅವರು ಸ್ಥಾನದಿಂದ ಕೆಳಗೆ ಇಳಿದಿದ್ದಾರೆ ಎಂದು ಫೇಸ್ಬುಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ತಿಳಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನಿಯಮದ ಮುಖ್ಯಸ್ಥರಾಗಿ ದಾಸ್ ಕಾರ್ಯನಿರ್ವಹಿಸುತ್ತಿದ್ದರು.
ದೇಶದಲ್ಲಿ ಫೇಸ್ಬುಕ್ ವ್ಯವಹಾರ ಭವಿಷ್ಯದಲ್ಲಿ ಹಾನಿಯಾಗಬಹುದೆಂಬ ಭೀತಿಯಿಂದ ಅವರು ಹಿಂದೂ ವಿರೋಧಿ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ಅವರು ವಿರೋಧಿಸಿದ್ದರು ಎಂದು ಈ ಹಿಂದೆ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಆದರೆ, ಈ ವರದಿ ಬಳಿಕವೂ ಫೇಸ್ಬುಕ್ ಮುಖ್ಯಸ್ಥ ಅಜಿತ್ ಮೋಹನ್ ದಾಸ್ ತಮ್ಮ ಸಂಸ್ಥೆಯ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೇ ವಾಲ್ಸ್ಟ್ರೀಟ್ ಜರ್ನಲ್ನ ಲೇಖನ ವ್ಯಕ್ತಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದರು.
ಇದನ್ನು ಓದಿ: ದೆಹಲಿ ಗಲಭೆ ಪ್ರಕರಣ: ಸಮನ್ಸ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಫೇಸ್ಬುಕ್ ಇಂಡಿಯಾ ಉಪಾಧ್ಯಕ್ಷ; ನಾಳೆ ಅರ್ಜಿ ವಿಚಾರಣೆ
ಅಷ್ಟೇ ಅಲ್ಲದೇ ಈ ವರದಿಯಿಂದಾಗಿ ರಾಜಕೀಯ ಬಿಕ್ಕಟ್ಟಿಗೂ ಕಾರಣವಾಗಿತ್ತು. ಅಲ್ಲದೇ ಭಾರತದಲ್ಲಿ ಫೇಸ್ಬುಕ್ ಸರಿಯಾದ ನಿಯಂತ್ರಣ ನೀತಿ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆ ಕೂಡ ಸಂಸ್ಥೆ ಉದ್ಯೋಗಿಗಳನ್ನು ಪ್ರಶ್ನಿಸಲು ಪ್ರೇರೇಪಿಸಿತು.
ಭಾರತದ ಅತ್ಯಂತ ಪ್ರಭಾವಶಾಲಿ ಕಾರ್ಪೋರೇಟ್ ಲಾಬಿ ಕಾರ್ಯನಿರ್ವಾಹಕರಲ್ಲಿ ದಾಸ್ ಕೂಡ ಒಬ್ಬರೆಂದು ಪರಿಗಣಿಸಲ್ಪಿಟ್ಟಿದ್ದರು. ವಿಶೇಷ ಎಂದರೆ ಇವರು ಕಂಪನಿ ಸೇರಿದ ಬಳಿಕ 2011ರಿಂದ ಭಾರತದಲ್ಲಿ ಫೇಸ್ಬುಕ್ ಏರಿಕೆ ಕಂಡಿತು. ಭಾರತದಲ್ಲಿ ನಮ್ಮ ಸಂಸ್ಥೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಅಂಕಿ ದಾಸ್ ಪ್ರಮುಖರು ಕೂಡ ಎಂದು ಸಂಸ್ಥೆ ಅವರ ವಿದಾಯದ ವೇಳೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ