ಒಲಿಂಪಿಕ್ಸ್‌ ಕ್ರೀಡಾಪಟುಗಳಿಗೆ ಕೇರಳ ಸರ್ಕಾರ ಗೌರವ ನೀಡುತ್ತಿಲ್ಲ: ಹರಿಹಾಯ್ದ ಅಂಜು ಬಾಬಿ ಜಾರ್ಜ್

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ರಾಜ್ಯ/ಕೇಂದ್ರ ಸರ್ಕಾರಗಳು, ಕೆಲವೊಂದು ಸಂಸ್ಥೆಗಳು ಬಹುಮಾನಗಳನ್ನು ಘೋಷಿಸುತ್ತಿವೆ. ಆದರೆ ತಂಡದ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ಅದ್ಭುತ ಪ್ರದರ್ಶನವನ್ನು ಕೇರಳ ಸರಕಾರ ಗುರುತಿಸಿಲ್ಲ ಹಾಗೂ ಅವರ ಪ್ರತಿಭೆಗೆ ಮನ್ನಣೆ ನೀಡಿಲ್ಲ

ಅಂಜು ಬಾಬಿ ಜಾರ್ಜ್

ಅಂಜು ಬಾಬಿ ಜಾರ್ಜ್

 • Share this:
  ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವು ಕಂಚಿನ ಪದಕ ಗೆದ್ದು ಇತಿಹಾಸ ರಚಿಸಿರುವುದು ನಮಗೆಲ್ಲಾ ಗೊತ್ತೇ ಇದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ರಾಜ್ಯ/ಕೇಂದ್ರ ಸರ್ಕಾರಗಳು, ಕೆಲವೊಂದು ಸಂಸ್ಥೆಗಳು ಬಹುಮಾನಗಳನ್ನು ಘೋಷಿಸುತ್ತಿವೆ. ಆದರೆ ತಂಡದ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ಅದ್ಭುತ ಪ್ರದರ್ಶನವನ್ನು ಕೇರಳ ಸರಕಾರ ಗುರುತಿಸಿಲ್ಲ ಹಾಗೂ ಅವರ ಪ್ರತಿಭೆಗೆ ಮನ್ನಣೆ ನೀಡಿಲ್ಲ ಎಂದು ಮಾಜಿ ವಿಶ್ವ ಚಾಂಪಿಯನ್ ಅಂಜು ಬಾಬಿ ಜಾರ್ಜ್ ಪಿಣರಾಯಿ ವಿಜಯನ್​​ ಸರಕಾರದ ವಿರುದ್ಧ ಹರಿಹಾಯ್ದಿದಿದ್ದಾರೆ.

  ಹಲವಾರು ರಾಜ್ಯಗಳು ತಮ್ಮ ನಾಡಿನ ಕ್ರೀಡಾಪಟುಗಳಿಗಾಗಿ ಅನೇಕ ನಗದು ಬಹುಮಾನ, ಪುರಸ್ಕಾರಗಳನ್ನು ನೀಡಿದ್ದು, ಸನ್ಮಾನಗಳನ್ನು ಮಾಡಿ ಕ್ರೀಡಾಪಟುಗಳನ್ನು ಅಭಿನಂದಿಸಿದ್ದರೂ ಕೇರಳ ಸರಕಾರ ಮಾತ್ರ ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ರಾರಾಜಿಸಿದ ಶ್ರೀಜೇಶ್‌ಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬುದಾಗಿ ಅಂಜು ವಾಗ್ದಾಳಿ ನಡೆಸಿದ್ದಾರೆ. ಮಾತೃಭೂಮಿ ಚಾನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಂಜು ಈ ವಿಷಯವನ್ನು ಹೊರಹಾಕಿದ್ದು ಶ್ರೀಜೇಶ್‌ಗೆ ಸರಕಾರವು ಯಾವುದೇ ಗೌರವ ನೀಡಿಲ್ಲ ಇದು ನಿಜ ಎಂಬುದಾಗಿ ಹೇಳಿದ್ದಾರೆ. ಒಬ್ಬ ಕ್ರೀಡಾಪಟು ಒಲಿಂಪಿಕ್ ಪದಕ ಗೆದ್ದಿದ್ದಲ್ಲಿ ಅವರ ಅರ್ಹತೆಯನ್ನು ಅರಿತುಕೊಳ್ಳಬೇಕು ಹಾಗೂ ಅದಕ್ಕೆ ಸಮನಾದ ಗೌರವ ನೀಡಬೇಕು ಎಂದು ಅಂಜು ವಿಷಾದ ವ್ಯಕ್ತಪಡಿಸಿದ್ದಾರೆ.

  ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್  ಈ ಹಿಂದೆ  ಶ್ರೀಜೇಶ್‌ರನ್ನು ಹೊಗಳಿ ಮಾಧ್ಯಮಗಳಲ್ಲಿ ಹೇಳಿಕೆಯನ್ನು ನೀಡಿದ್ದರು. ಆದರೆ ಕೇರಳ ಸರಕಾರ ಒಲಿಂಪಿಕ್ ಪದಕ ವಿಜೇತರಿಗೆ ಯಾವುದೇ ಬಹುಮಾನ ಘೋಷಿಸಿಲ್ಲ. ಹರಿಯಾಣ ಸರಕಾರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರಿಗೆ 6 ಕೋಟಿ ಬಹುಮಾನ ಘೋಷಿಸಿದ ಬೆನ್ನಲ್ಲೇ ಕೇರಳ ಸರಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗತೊಡಗಿದವು. ಇತರ ಒಲಿಂಪಿಯನ್ ಕ್ರೀಡಾಪಟುಗಳನ್ನು ಆಯಾಯ ರಾಜ್ಯ ಸರಕಾರಗಳು ಘೋಷಿಸಿವೆ.

  ಇತರ ಒಲಿಂಪಿಯನ್‌ಗಳನ್ನೂ ಅವರ ರಾಜ್ಯಗಳು ಗೌರವಿಸಿವೆ - ಪುರುಷರ ಹಾಕಿ ತಂಡದ ಭಾಗವಾಗಿರುವ ವಿವೇಕ್ ಸಾಗರ್ ಮತ್ತು ನೀಲಕಂಠ ಶರ್ಮಾರಿಗೆ ಮಧ್ಯಪ್ರದೇಶ ಸರಕಾರ 1 ಕೋಟಿ ರೂ., ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ರಿಗೆ ಮಣಿಪುರ ಸರಕಾರವು 1 ಕೋಟಿ ರೂಪಾಯಿಗಳನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಇದನ್ನೂ ಓದಿ: ನೀನು ನನಗೆ ಅಗತ್ಯವಿಲ್ಲ: ಬುಮ್ರಾ ಟ್ವಿಟ್ಟರ್‌ನಲ್ಲಿ ಹೀಗೆ ಬರೆದದ್ದು ಯಾರಿಗಾಗಿ..?

  ಅಂಜು ಕೂಡ ತಾವು ವಿಶ್ವಚಾಂಪಿಯನ್ ಪದಕ ಗೆದ್ದಾಗ ಕೇರಳ ಸರಕಾರ ನಡೆದುಕೊಂಡ ರೀತಿಯನ್ನು ಇಲ್ಲಿ ಟೀಕಿಸಿದ್ದು, ನನಗೂ ಇದೇ ರೀತಿಯ ಅವಮಾನವನ್ನು ಸರಕಾರ ಮಾಡಿದೆ ಹಾಗೂ ಸರಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ಹೇಳಿಕೆ ನೀಡಿದರು ಎಂಬುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  ಕೇರಳ ಈ ಹಿಂದೆ ಶ್ರೀಜೇಶ್‌ಗೆ 5 ಲಕ್ಷ ನಗದು ಬಹುಮಾನ ಹಾಗೂ ಭಾರತದ ಹಾಕಿ ತಂಡಕ್ಕೆ 5 ಲಕ್ಷ ನಗದು ಬಹುಮಾನನ್ನು ಘೋಷಿಸಿತ್ತು. ಬಿಸಿಸಿಐ ಸೇರಿದಂತೆ ಕ್ರೀಡಾ ಸಮಿತಿಗಳು ಕೂಡ ಹಾಕಿ ತಂಡಕ್ಕೆ ಬಹುಮಾನಗಳನ್ನು ಘೋಷಿಸಿವೆ. ಆದರೆ ಉದ್ಯೋಗಿ ಡಾ. ಶಂಶೀರ್ ವಯಲೀಲ್ ಶ್ರೀಜೇಶ್ ಅವರಿಗೆ 1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದು ಅಭೂತಪೂರ್ವ ಅಂಶವಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: