HOME » NEWS » National-international » ANIMALS DEAD AT SAN ANTONIO PRIMATE SANCTUARY AFTER WINTER STORM SESR STG

ಟೆಕ್ಸಾಸ್‌ನಲ್ಲಿ ಅಪಾಯಕಾರಿ ಮಟ್ಟ ತಲುಪಿದ ಉಷ್ಣಾಂಶ: ಹೆಪ್ಪುಗಟ್ಟಿ ಸಾವನ್ನಪ್ಪುತ್ತಿರುವ ಪ್ರಾಣಿಗಳು

ಪ್ರಾಣಿಗಳು ಚಳಿಗಾಲದ ಕೆಟ್ಟ ಹವಾಮಾನಕ್ಕೆ ತುತ್ತಾಗಿದ್ದು, ಮಂಜಿನಲ್ಲಿ ಹೆಪ್ಪುಗಟ್ಟಿ ಪ್ರಾಣಬಿಡುತ್ತಿವೆ. ಚಿಂಪಾಂಜಿ, ಕೋತಿಗಳು, ಲೆಮರ್‌ಗಳು ಸೇರಿದಂತೆ ಅಸಖ್ಯಾಂತ ಪಕ್ಷಿಗಳು ಸಾವನ್ನಪ್ಪಿವೆ ಎಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

news18-kannada
Updated:February 18, 2021, 2:52 PM IST
ಟೆಕ್ಸಾಸ್‌ನಲ್ಲಿ ಅಪಾಯಕಾರಿ ಮಟ್ಟ ತಲುಪಿದ ಉಷ್ಣಾಂಶ: ಹೆಪ್ಪುಗಟ್ಟಿ ಸಾವನ್ನಪ್ಪುತ್ತಿರುವ ಪ್ರಾಣಿಗಳು
ಪ್ರಾಣಿಗಳು ಚಳಿಗಾಲದ ಕೆಟ್ಟ ಹವಾಮಾನಕ್ಕೆ ತುತ್ತಾಗಿದ್ದು, ಮಂಜಿನಲ್ಲಿ ಹೆಪ್ಪುಗಟ್ಟಿ ಪ್ರಾಣಬಿಡುತ್ತಿವೆ. ಚಿಂಪಾಂಜಿ, ಕೋತಿಗಳು, ಲೆಮರ್‌ಗಳು ಸೇರಿದಂತೆ ಅಸಖ್ಯಾಂತ ಪಕ್ಷಿಗಳು ಸಾವನ್ನಪ್ಪಿವೆ ಎಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
  • Share this:
ಅಮೆರಿಕದ ಟೆಕ್ಸಾಸ್‌ನಲ್ಲಿ ಉಷ್ಣಾಂಶ ಪ್ರಮಾಣ ಫ್ರೀಜಿಂಗ್ ಲವೆಲ್ ಗಿಂತಲೂ ಕಳಗೆ ಇಳಿದಿದ್ದು, ಮನುಷ್ಯರು ಸೇರಿದಂತೆ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಈ ವಾರದ ಆರಂಭದಲ್ಲಿ ಇಲ್ಲಿ ವಿದ್ಯುತ್ ಕಡಿತ ಮಾಡಲಾಗಿದ್ದು, ಟೆಕ್ಸಾಸ್‌ನ ಬಹುತೇಕ ಭಾಗಗಳು ಕತ್ತಲೆಯಲ್ಲಿ ಮುಳುಗಿವೆ. ಸ್ಯಾನ್ ಆಂಟೋನಿಯೊದ ಪ್ರೈಮರ್ಲಿ ಪ್ರೈಮೇಟ್ಸ್ ಅಭಯಾರಣ್ಯದಲ್ಲಿನ ಪ್ರಾಣಿಗಳು ಚಳಿಗಾಲದ ಕೆಟ್ಟ ಹವಾಮಾನಕ್ಕೆ ತುತ್ತಾಗಿದ್ದು, ಮಂಜಿನಲ್ಲಿ ಹೆಪ್ಪುಗಟ್ಟಿ ಪ್ರಾಣಬಿಡುತ್ತಿವೆ. ಚಿಂಪಾಂಜಿ, ಕೋತಿಗಳು, ಲೆಮರ್‌ಗಳು ಸೇರಿದಂತೆ ಅಸಖ್ಯಾಂತ ಪಕ್ಷಿಗಳು ಸಾವನ್ನಪ್ಪಿವೆ ಎಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸತತವಾಗಿ 2 ದಿನಗಳ ಕಾಲ ಜೋರಾಗಿ ಗಾಳಿ ಬೀಸಿದ ಪರಿಣಾಮ ಇಲ್ಲಿನ ನಿವಾಸಿಗಳು ಹಾಗೂ ಪ್ರಾಣಿಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಮನೆಗಳು, ವಾಹನಗಳು ಸೇರಿದಂತೆ ಮರಗಳೆಲ್ಲವೂ ಹೆಪ್ಪುಗಟ್ಟಿ ಮಂಜಿನ ಆಕೃತಿಯಂತೆ ಕಾಣುತ್ತಿವೆ. ‘ನನ್ನ ಕಚೇರಿ ಮಂಜುಗಡ್ಡೆಯಿಂದ ಆವೃತವಾಗಿ ಈ ರೀತಿ ಹೆಪ್ಪುಗಟ್ಟುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ, ಇಲ್ಲಿನ ಕೆಟ್ಟ ಹವಾಮಾನ ಪರಿಣಾಮ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರೈಮರ್ಲಿ ಪ್ರೈಮೇಟ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಬ್ರೂಕ್ ಚಾವೆಜ್ ತಿಳಿಸಿದ್ದಾರೆ.

ಚಂಡಮಾರುತದ ಹೊಡೆತಕ್ಕೆ ಎಷ್ಟು ಪ್ರಾಣಿಗಳು ಸಾವನ್ನಪ್ಪಿವೆ ಎಂಬ ಅಂದಾಜು ಇನ್ನೂ ತಿಳಿದಿಲ್ಲವೆಂದು ಚಾವೆಜ್ ಹೇಳಿದ್ದಾರೆ. ಶುಕ್ರವಾರದವರೆಗೂ ಚಳಿಗಾಲದ ಹವಾಮಾನದಲ್ಲಿ ಏರುಪೇರಾಗಲಿದೆ ಎಂಬ ಮುನ್ಸೂಚನೆ ಇದೆ ಎಂದಿದ್ದಾರೆ.

ಯಾವ ಪ್ರಾಣಿಗಳನ್ನು ಉಳಿಸಬೇಕೆಂಬುದನ್ನು ಅಭಯಾರಣ್ಯ ನಿರ್ಧರಿಸಬೇಕು

ಮುಂಜಾನೆ ವೇಳೆ ವಿದ್ಯುತ್ ಹೋದ ಬಳಿಕ ಚಾವೆಜ್ ಮತ್ತು ಅವರ 12 ತಂಡಗಳು ಕಾರ್ಯರೂಪಕ್ಕೆ ಬಂದವು.ಈ ತಂಡ ಅಭಯಾರಣ್ಯದಲ್ಲಿರುವ ಸುಮಾರು 400 ಪ್ರಾಣಿಗಳನ್ನು ಬೆಚ್ಚಗಿಡಲು ಜನರೇಟರ್‌ಗಳು, ಸ್ಪೇಸ್ ಹೀಟರ್‌ಗಳು, ಪ್ರೋಪೇನ್ ಟ್ಯಾಂಕ್‌ಗಳು ಮತ್ತು ಕಂಬಳಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿತ್ತು. ಆದರೆ ತಾಪಮಾನದಲ್ಲಿ ಮತ್ತಷ್ಟು ಕುಸಿತ ಕಾಣುತ್ತಿದ್ದಂತೆ ಈ ಯೋಜನೆ ಸಂರಕ್ಷಣೆಯ ಬದಲು ಪ್ರಾಣಿಗಳನ್ನು ಸ್ಥಳಾಂತರಿಸಲು ನಿರ್ಧರಿಸಿತು.

‘ನಾನು ಹಿಂದೆ ಯಾವುದೇ ರೀತಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ನಾವು ಯಾವ ಪ್ರಾಣಿಗಳನ್ನು ಹಿಡಿಯಲು ಸಾಧ್ಯವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಉಳಿಸಲು ಪ್ರಯತ್ನಿಸುತ್ತೇವೆಂದು ಚಾವೆಜ್ ತಿಳಿಸಿದ್ದಾರೆ. ಸಾರಿಗೆ ವ್ಯವಸ್ಥೆ ಮಾಡುವಾಗ ಸಾವನ್ನಪ್ಪಿರುವ ಪ್ರಾಣಿಗಳನ್ನು ಹುಡುಕಲು ತಂಡ ಮುಂದಾಯಿತು. ‘ಇದುವರೆಗೆ ಎಷ್ಟು ಪ್ರಾಣಿಗಳು ಮೃತಪಟ್ಟಿವೆ ಎಂದು ಯಾರೋ ನನ್ನನ್ನು ಕೇಳಿದರು. ಆದರೆ ನನಗೆ ಇನ್ನೂ ಅದರ ಬಗ್ಗೆ ನಿಖರ ಮಾಹಿತಿ ತಿಳಿದಿಲ್ಲ’ ಎಂದು ಚಾವೆಜ್ ಹೇಳಿದರು. ‘ನಾವು ಅನೇಕ ಕೋತಿಗಳು, ಲೆಮರ್ಸ್ ಮತ್ತು ಉಷ್ಣವಲಯದ ಪಕ್ಷಿಗಳನ್ನು ಕಳೆದುಕೊಂಡಿದ್ದೇವೆಂದು’ ಅವರು ಹೇಳಿದ್ದಾರೆ.

ಇನ್ನೂ ಅಭಯಾರಣ್ಯದ ಬಳಿಯಿರುವ ಅನೇಕ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಕೆಲವರು ಸ್ಯಾನ್ ಆಂಟೋನಿಯೊ ಮೃಗಾಲಯ ಮತ್ತು ಒಕ್ಲಹೋಮ ಗಡಿಯ ಬಳಿಯ ಅಭಯಾರಣ್ಯಕ್ಕೆ ಹೋದರು. ಇತರರು ಸ್ವಯಂಸೇವಕರ ಮನೆಗಳಿಗೆ ತೆರಳಿದರು. 33 ಚಿಂಪಾಜಿಗಳು ಇನ್ನೂ ಅಭಯಾರಣ್ಯದಲ್ಲಿಯೇ ಉಳಿದಿವೆ. ಅವುಗಳನ್ನು ಬೇರೆಡೆ ಸಾಗಿಸುವುದು ರಕ್ಷಣಾ ತಂಡಕ್ಕೆ ಸುಲಭವಾಗಿರಲಿಲ್ಲ. ಹೀಗಾಗಿ ಅವುಗಳು ಅಲ್ಲಿಯೇ ಉಳಿದುಕೊಂಡಿವೆ ಎಂದು ಪ್ರೈಮರ್ಲಿ ಪ್ರೈಮೇಟ್ಸ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿದ್ದು, ಪ್ರಾಣಿಗಳ ರಕ್ಷಣೆಗಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದೆ.

ಹದಗೆಡುತ್ತಿರುವ ಉಷ್ಣಾಂಶ ಮತ್ತು ಮುಂದುವರಿದ ದುರಂತಟೆಕ್ಸಾಸ್‌ನ ಆಳವಾದ ಫ್ರೀಜಿಂಗ್ ಲೇವಲ್ ಇನ್ನೂ ಮುಕ್ತಾಯವಾಗಿಲ್ಲ. ದಿನದಿಂದ ದಿನಕ್ಕೆ ಹದಗೆಡುತ್ತಿರುವ ಉಷ್ಣಾಂಶದ ಪರಿಣಾಮ ಮನುಷ್ಯರು ಮತ್ತು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಗ್ರಿಡ್ ಅನ್ನು ನಿರ್ವಹಿಸಲು ಹೆಚ್ಚಿನ ವಿದ್ಯುತ್ ಕಡಿತಗೊಳಿಸಲು ಆದೇಶಿಸಲಾಗಿದೆ. ಮುಂದಿನ ಬುಧವಾರದವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಆಸ್ಟಿನ್ ಎನರ್ಜಿ ತನ್ನ ಗ್ರಾಹಕರಿಗೆ ತಿಳಿಸಿದೆ.

ಟೆಕ್ಸಾಸ್‌ನಲ್ಲಿ ಬೀಸುತ್ತಿರುವ ಚಂಡಮಾರುತವು ಅದರ ಶೀತ ತಾಪಮಾನಕ್ಕೆ ಮಾತ್ರವಲ್ಲದೇ ಅಪಾಯಕಾರಿ ಹವಾಮಾನಕ್ಕೆ ದಾರಿಮಾಡಿಕೊಟ್ಟಿದೆ. ನಿರಂತರವಾಗಿ ಮಂಜು ಸುರಿಯುತ್ತಿರುವುದರಿಂದ ಮನೆಗಳು ಮತ್ತು ಕಟ್ಟಡಗಳು ಹೆಪ್ಪುಗಟ್ಟುತ್ತಿವೆ. ಯಾವುದೇ ರೀತಿಯ ಬೆಚ್ಚನೆಯ ಹವಾಮಾನ ಇರದ ಕಾರಣ ಟೆಕ್ಸಾಸ್‌ನ ಜನರು ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಹಲವರು ಸ್ಟೌವ್‌ಗಳು, ಜನರೇಟರ್‌ಗಳು ಮತ್ತು ಕಾರುಗಳ ಮೊರೆ ಹೋಗಿದ್ದಾರೆ.
Published by: Seema R
First published: February 18, 2021, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories