HOME » NEWS » National-international » ANIMAL CRUELTY CASES ROSE IN MUMBAI SINCE LOCKDOWN CLAIM ACTIVISTS STG LG

ಲಾಕ್‍ಡೌನ್ ಜಾರಿ ಬಳಿಕ ಪ್ರಾಣಿಗಳ ಮೇಲಿನ ಕಿರುಕುಳ ಪ್ರಕರಣಗಳ ಹೆಚ್ಚಳ: ವರದಿಯಲ್ಲಿ ಬಯಲು

ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ಜನರನ್ನು ಕಾಡಿದ್ದು ನಿರುದ್ಯೋಗ ಹಾಗೂ ಹಣದುಬ್ಬರ. ಈ ಎರಡು ಕಾರಣಗಳಿಂದ ಪ್ರಾಣಿಗಳ ಮಲೆ ಹಲ್ಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾದವು. 2018, 2019ಕ್ಕೆ ಹೋಲಿಸಿದರೆ ಈ ರೀತಿಯ ಘಟನೆಗಳು 2020ರಲ್ಲಿ ಹೆಚ್ಚಾಗಿ ಘಟಿಸಿದವು.

news18-kannada
Updated:April 7, 2021, 1:05 PM IST
ಲಾಕ್‍ಡೌನ್ ಜಾರಿ ಬಳಿಕ ಪ್ರಾಣಿಗಳ ಮೇಲಿನ ಕಿರುಕುಳ ಪ್ರಕರಣಗಳ ಹೆಚ್ಚಳ: ವರದಿಯಲ್ಲಿ ಬಯಲು
ಸಾಂದರ್ಭಿಕ ಚಿತ್ರ
  • Share this:
ಮಾರ್ಚ್ 28 ರಂದು ವ್ಯಕ್ತಿಯೊಬ್ಬ ಬೀದಿ ನಾಯಿಗೆ ಕಿರುಕುಳ ನೀಡಿರುವ ಘಟನೆ ಗೋರೆಗಂವ್‍ನ ನಯಾ ನಗರದಲ್ಲಿ ನಡೆದಿದ್ದು, ಇದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ ಆ ವ್ಯಕ್ತಿಯ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಾರ್ಚ್ 11 ರಂದು ಕನಿಷ್ಠ ಎಂಟು ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ ಸರಣಿ ಶ್ವಾನ ಅತ್ಯಾಚಾರಿಯನ್ನು ಅತ್ಯಾಚಾರದ ವಿಡಿಯೋ ದೊರಕಿದ ಬಳಿಕ ಡಿಎನ್ ನಗರ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 4 ರಂದು 4 ವರ್ಷದ ನಾಯಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ಚಂಡೀವಾಲಾದಲ್ಲಿ ನಡೆದಿದೆ. ಸಕಿನಾಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿಂಸೆ ಕುರಿತಾದ ಸಾಕ್ಷ್ಯಾಧಾರಗಳಿದ್ದರೂ ಇದುವರೆಗೂ ಯಾರನ್ನು ಬಂಧಿಸಿಲ್ಲ. ಅಕ್ಟೋಬರ್ 20, 2020ರಲ್ಲಿ ಒಂದು ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿ ಅದರ ಗುಪ್ತಾಂಗಕ್ಕೆ ಮರದ ತುಂಡನ್ನು ತುರುಕಿ ಅಮಾನವೀಯವಾಗಿ ಕೊಂದ ಘಟನೆ ಪೊವಾಯ್‍ನ ಹಿರಾನಂದನಿ ಗಾರ್ಡನ್ ಬಳಿಯ ಗಲೇರಿಯ ಮಾಲ್ ಹತ್ತಿರ ನಡೆದಿತ್ತು. ಕೊಲೆಯತ್ನದ ಹಿನ್ನೆಲೆ ಅಪರಿಚಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು.

ಈ ರೀತಿ ಮನುಷ್ಯರು ಮನುಷ್ಯತ್ವ ಮರೆತು ಪ್ರಾಣಿಗಳ ಮೇಲೆ ಸಾಕಷ್ಟು ದೌರ್ಜನ್ಯ ಎಸಗಿದ್ದರೂ ಅದರಲ್ಲಿ ಕೆಲವೇ ಕೆಲವು ಘಟನೆಗಳು ಮಾತ್ರ ದಾಖಲಾದವು. ಇವುಗಳ ಹೊರತಾಗಿಯೂ ಕಳೆದ ಒಂದು ವರ್ಷದಿಂದ ಅಂದರೆ ಲಾಕ್‍ಡೌನ್ ಸಮಯ ಏಪ್ರಿಲ್ 2020ರ ಬಳಿಕ ಪ್ರಾಣಿಗಳ ಮೇಲಿನ ದೌರ್ಜನ್ಯ, ಹಿಂಸೆ ಪ್ರಕರಣಗಳು ಹೆಚ್ಚಾದವು. ಪ್ರಾಣಿಗಳ ಸಮಾಲೋಚನಕಾರರು ಹಾಗೂ ಎನ್‍ಜಿಒ ಕಾರ್ಯಕರ್ತರ ಪ್ರಕಾರ, ಲಾಕ್‍ಡೌನ್ ಜಾರಿಯಾದ ನಂತರ ಪ್ರಾಣಿಗಳ ಮೇಲಿನ ಕಿರುಕುಳ ಪ್ರಕರಣಗಳು ಅತಿಯಾದವು ಎಂದು ಹೇಳಿದ್ದಾರೆ.

ಲಸಿಕೆ ಪಡೆದ ಬಳಿಕವೂ ಕೊರೋನಾ ಪಾಸಿಟಿವ್ ಆದವರೆಷ್ಟು? ಎಂಬ ಮಾಹಿತಿ ಕಲೆಹಾಕಲು ಮುಂದಾದ ಕೇಂದ್ರ

ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ಜನರನ್ನು ಕಾಡಿದ್ದು ನಿರುದ್ಯೋಗ ಹಾಗೂ ಹಣದುಬ್ಬರ. ಈ ಎರಡು ಕಾರಣಗಳಿಂದ ಪ್ರಾಣಿಗಳ ಮಲೆ ಹಲ್ಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾದವು. 2018, 2019ಕ್ಕೆ ಹೋಲಿಸಿದರೆ ಈ ರೀತಿಯ ಘಟನೆಗಳು 2020ರಲ್ಲಿ ಹೆಚ್ಚಾಗಿ ಘಟಿಸಿದವು ಎಂದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಸೊಸೈಟಿ ಬಾಂಬೆ ಹಾಗೂ ಬಾಂಬೆಯ ಪ್ರಾಣಿಗಳ ಹಕ್ಕು ರಕ್ಷಣಾ ಎನ್‍ಜಿಒ ಅಧಿಕಾರಿ ವಿಜಯ್ ಮೊಹ್ನಾನಿ ಮಾಹಿತಿ ನೀಡಿದರು.

ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಎನ್‍ಜಿಒ ಮಾಹಿತಿಯನ್ನು ಬಿಡುಗಡೆಮಾಡಿದೆ. ಇವರ ಮಾಹಿತಿ ಆಧಾರದ ಮೇಲೆ 2021ರಲ್ಲಿ ಪ್ರತಿದಿನ ಮುಂಬೈನಲ್ಲಿ ಕನಿಷ್ಠ 8 ಪ್ರಾಣಿಗಳು ಮಾನವರಿಂದ ಹಿಂಸೆಗೊಳಗಾಗುತ್ತಿವೆ. 2019ರಲ್ಲಿ ಕೇವಲ 2 ಅಥವಾ 3 ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದು. 2019ಕ್ಕೆ ಹೋಲಿಸಿದರೆ 2021ರಲ್ಲಿ ಪ್ರಕರಣಗಳ ಸಂಖ್ಯೆ ಯಥೇಚ್ಛವಾಗಿದೆ. ಕಳೆದ ವರ್ಷ ಸುಮಾರು 886 ಪ್ರಕರಣಗಳು ದಾಖಲಾಗಿದ್ದು, ಸೆಪ್ಟೆಂಬರ್ ನಂತರ ಹೆಚ್ಚು ಪ್ರಕರಣಗಳು ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಮೇಲಿನ ವರದಿ ಆಧರಿಸಿ ಹೇಳುವುದಾದರೆ, ಪ್ರಾಣಿಗಳ ಮೇಲಿನ ಹಿಂಸಾತ್ಮಕ ಕೃತ್ಯಗಳು ಕಾಲಕ್ರಮೇಣ ಯಥೇಚ್ಛವಾಗುತ್ತಿವೆ. ಮುನುಷ್ಯರು ತಮ್ಮ ಸ್ವಾರ್ಥದ ಕಾರಣ ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗುವುದು ತಕ್ಕುದಲ್ಲ.
Published by: Latha CG
First published: April 7, 2021, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories