Anil Deshmukh: ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ಅನಿಲ್​ ದೇಶ್​ಮುಖ್​ ರಾಜೀನಾಮೆ

ಅನಿಲ್ ದೇಶಮುಖ್

ಅನಿಲ್ ದೇಶಮುಖ್

ಬಾಂಬೆ ಹೈ ಕೋರ್ಟ್​ ಆದೇಶದ ಬಳಿಕ ಗೃಹ ಸಚಿವ ಸ್ಥಾನದಲ್ಲಿ ನೈತಿಕವಾಗಿ ಮುಂದುವರೆಯುವುದು ಸರಿಯಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ದೇಶ್​ಮುಖ್​ ಉಲ್ಲೇಖಿಸಿದ್ದಾರೆ

  • Share this:

ಮುಂಬೈ (ಏ. 5): ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​​ಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವಿರುದ್ಧ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಮತ್ತು ಅವ್ಯವಹಾರ ಆರೋಪ ಕುರಿತು ತನಿಖೆ ನೀಡುವಂತೆ ಮುಂಬೈ ಹೈ ಕೋರ್ಟ್​ ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈನ ಮಾಜಿ ಪೊಲೀಸ್​ ಆಯುಕ್ತ ಪರಮ್​ ಬೀರ್​ ಸಿಂಗ್, ಗೃಹ ಸಚಿವರಾದ ಅನಿಲ್​ ದೇಶಮುಖ್​​ ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ 100 ಕೋಟಿ ರೂಪಾಯಿ ಲಂಚ ಸಂಗ್ರಹಿಸುವಂತೆ ಪೊಲೀಸ್​ ಅಧಿಕಾರಿಗಳಿಗೆ ಹೇಳಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಯು ಎಂದು ಕೋರಿ ಪರಮ್​ ಬಿರ್​ ಸಿಂಗ್​ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.



ಈ ಕುರಿತು ಮಾತನಾಡಿರುವ ಎನ್​ಸಿಪಿ ಮುಖಂಡ ನವಾಬ್​ ಮಲ್ಲಿಕ್​, ಮುಂಬೈ ಮಾಜಿ ಪೊಲೀಸ್​ ಆಯುಕ್ತ ಪರಮ್​ ಬೀರ್​ ಸಿಂಗ್​ ಅವರ ಪತ್ರದ ಅನ್ವಯ ಬಾಂಬೆ ಹೈ ಕೋರ್ಟ್​ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ. ಈ ಬೆಳವಣಿಗೆ ಬೆನ್ನಲ್ಲೆ ದೇಶ್​ ಮುಖ್​ ಅವರು ತಮ್ಮ ಗೃಹ ಸಚಿವ ಸ್ಥಾನದಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಎನ್​ಡಿಎ ಮುಖ್ಯಸ್ಥ ಶರದ್​ ಪವಾರ್​ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ದೇಶ್​ಮುಖ್​ ಸಲ್ಲಿಸಿದ್ದಾರೆ. ಬಳಿಕ ಅವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಬಾಂಬೆ ಹೈ ಕೋರ್ಟ್​ ಆದೇಶದ ಬಳಿಕ ಗೃಹ ಸಚಿವ ಸ್ಥಾನದಲ್ಲಿ ನೈತಿಕವಾಗಿ ಮುಂದುವರೆಯುವುದು ಸರಿಯಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ದೇಶ್​ಮುಖ್​ ಉಲ್ಲೇಖಿಸಿದ್ದಾರೆ.

top videos
    First published: