PM Modi Interview: ಪಂಚರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲ್ಲಿದೆ; ಪ್ರಧಾನಿ ಮೋದಿ ವಿಶ್ವಾಸ

ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು. ಇದೇ ರೀತಿಯ ಕುಟುಂಬ ರಾಜಕಾರಣವನ್ನು ಹರಿಯಾಣ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನೋಡಬಹುದು

ಪ್ರಧಾನಿ ಮೋದಿ ಸಂದರ್ಶನ

ಪ್ರಧಾನಿ ಮೋದಿ ಸಂದರ್ಶನ

 • Share this:
   ಪಂಚ ರಾಜ್ಯಗಳ ಚುನಾವಣೆಗೆ ಮುನ್ನ ಎಎನ್​ಐ ಸುದ್ದಿ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂದರ್ಶನ ನೀಡಿದ್ದು, ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ವಿಧಾನಸಭಾ ಚುನಾವಣೆ (Assembly Election) ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ರೈತರ ಪ್ರತಿಭಟನೆ, ಕುಟುಂಬ ರಾಜಕಾರಣ, ಸಂಸತ್ತಿನಲ್ಲಿನ ತಮ್ಮ ಭಾಷಣ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಾತನಾಡಿದರು.

  ಚುನಾವಣೆ ಘೋಷಣೆಯಾಗಿರುವ ಪಂಚ ರಾಜ್ಯಗಳಲ್ಲಿ ಬಿಜೆಪಿ ಪರ ಜನರು ಒಲವು ತೋರುತ್ತಿರುವುದನ್ನು ನೋಡಿದ್ದೇನೆ. ಈ ಜನರು ಐದು ರಾಜ್ಯಗಲ್ಲೂ ಬಿಜೆಪಿಗೆ ಸೇವೆ ಮಾಡಲು ಅವಕಾಶ ನೀಡುತ್ತಾರೆ. ನಾವು ಸಂಪೂರ್ಣ ಬಹುಮತದೊಂದಿಗೆ ಚುನಾವಣೆ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

  ಜನರಿಗೆ ಬಿಜೆಪಿ ಮೇಲೆ ನಂಬಿಕೆ ಇದೆ

  ಉತ್ತರ ಪ್ರದೇಶದ ಜನರು ಈಗಾಗಲೇ ‘ಏಕ್ ಬಾರ್ ಆವೋ, ಏಕ್ ಬಾರ್ ಜಾವೋ’ (ಒಮ್ಮೆ ಅಧಿಕಾರಕ್ಕೆ ಬಂದು ನಂತರ ಹೋಗು) ಎಂಬ ಹಳೆಯ ಸಿದ್ಧಾಂತವನ್ನು ಹೊರಹಾಕಿದ್ದಾರೆ. 2014ರಿಂದ ಜನರು ನಮ್ಮ ಆಡಳಿತವನ್ನು ಮೆಚ್ಚಿಕೊಂಡು, ನಮಗೆ ಬೆಂಬಲ ನೀಡಿ ಆಯ್ಕೆ ಮಾಡುತ್ತಿದ್ದಾರೆ. ಈಗ ಮತ್ತೆ ನಮ್ಮನ್ನು ಅವರು ಆಯ್ಕೆ ಮಾಡುವ ವಿಶ್ವಾಸ ಇದೆ. ಚುನಾವಣೆಗಳು ಒಂದು ರೀತಿ ಕಲಿಕೆಯ ವಿಶ್ವ ವಿದ್ಯಾಲಯಗಳಂತೆ ಸೋತರೆ ಆತ್ಮವಲೋಕನಕ್ಕೆ ಅವಕಾಶ ಸಿಗಲಿದೆ ಎಂದರು

  ನಮಗೆ ಜನರ ಮೇಲೆ, ಅವರ ಸಾಮರ್ಥ್ಯಗಳ ಮೇಲೆ ನಂಬಿಕೆ ಇದೆ. ಸರ್ಕಾರದ ನೀತಿಗಳು ಅವರಿಗೆ ಅವಕಾಶಗಳನ್ನು ನೀಡಬೇಕು. ಅವರಿಗೆ ಗರಿಷ್ಠ ಅವಕಾಶ ಸಿಗುವಂತೆ ಪಾಲಿಸಿಗಳನ್ನು ಮಾಡುತ್ತಿದ್ದೇವೆ. ಸರ್ಕಾರಕ್ಕೆ ವ್ಯಾಪಾರ ಮಾಡಲು ಯಾವುದೇ ವ್ಯವಹಾರವಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಇದು ಸಮಾಜವಾದದೊಂದಿಗೆ ಹೇಗೆ ಸಂಪರ್ಕ ಹೊಂದಿದೆ? ಇದು ಸಮಾಜವಾದಕ್ಕೆ ವಿರುದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದರು

  ಜನರ ಪರ ಕೆಲಸ ನನ್ನ ಆದ್ಯತೆ

  ಎಲ್ಲೆಲ್ಲಿ ಬಿಜೆಪಿಗೆ ಸ್ಥಿರತೆಯಿಂದ ಕೆಲಸ ಮಾಡಲು ಅವಕಾಶ ಸಿಕ್ಕಿದೆಯೋ ಅಲ್ಲಿ ಆಡಳಿತದ ಪರವಾದ ವಾತಾವರಣವಿರುತ್ತದೆಯೇ ಹೊರತು ವಿರೋಧಿಗಳಲ್ಲ. ಬಡವರಿಗೆ ಅನ್ನ, ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯ, ರಸ್ತೆ, ಸಣ್ಣ ರೈತರ ಬಗ್ಗೆ ಚಿಂತನೆ ಮಾಡುವುದು ಸರ್ಕಾರದ ಕೆಲಸ. ಇದು ನನ್ನ ಆದ್ಯತೆ.

  ಇದನ್ನು ಓದಿ: Facebook Liveನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಹೆಂಡತಿ ಸಾವು

  ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ಶತ್ರು

  ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು. ಒಂದು ಕುಟುಂಬವು ತಲೆಮಾರುಗಳಿಂದ ಪಕ್ಷವನ್ನು ನಡೆಸುತ್ತಿದೆ ಎಂದರೆ ಅಲ್ಲಿ ಕುಟುಂಬ ಇದೆ ಎಂದು ಅರ್ಥ. ಇದೇ ರೀತಿಯ ಕುಟುಂಬ ರಾಜಕಾರಣವನ್ನು ಹರಿಯಾಣ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನೋಡಬಹುದು

  ರೈತರ ಅನುಕೂಲಕ್ಕಾಗಿ ಕೃಷಿ ಕಾನೂನುಗಳನ್ನು ತರಲಾಯಿತು, ಆದರೆ ಜನರ ಹಿತಾಸಕ್ತಿಯಿಂದ ಹಿಂತೆಗೆದುಕೊಳ್ಳಲಾಯಿತು. ತಾವು ಸದಾ ರೈತರ ಹಿತಕ್ಕಾಗಿ ದುಡಿದಿದ್ದು, ಅವರ ಬೆಂಬಲವೂ ಇದೆ.

  ಇದನ್ನು ಓದಿ: ಅಪಘಾತಕ್ಕೆ ಒಳಗಾದ ಯುವಕನ ಪ್ರಾಣ ರಕ್ಷಿಸಿದ Sonu Sood; ನಟನ ಮಾನವೀಯತೆಗೆ ಶ್ಲಾಘನೆ

  ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಷ್ಟ್ರೀಯ ಸಂಪತ್ತನ್ನು ವಸೂಲಿ ಮಾಡುತ್ತಿರುವ ತನಿಖಾ ಸಂಸ್ಥೆಗಳು, ಸರ್ಕಾರವನ್ನು ಶ್ಲಾಘಿಸಬೇಕು.

  ಚುನಾವಣೆ ಸಮಯದಲಲಿ ನಾವು ಟಿಕೆಟ್ ಹಂಚಿಕೆಯ ವೇಳೆ ಜಾತಿ ಆಧಾರದ ಮೇಲೆ ವರ್ಗೀಕರಣವನ್ನು ಪ್ರಾರಂಭಿಸುತ್ತೇವೆ. ಯಾವ ಸಮುದಾಯದಿಂದ ಶೇಕಡಾವಾರು ಮತಗಳನ್ನು ನೀಡಲಾಗುತ್ತದೆ ಎಂಬುದನ್ನು ಚರ್ಚಿಸುತ್ತೇವೆ. ನಾವು ಅದನ್ನು ಬದಲಾಯಿಸಬೇಕು. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' (ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ) ಮಂತ್ರದೊಂದಿಗೆ ಮುಂದುವರಿಯಲು ಬಯಸುತ್ತೇನೆ. ದೇಶವನ್ನು ಮುನ್ನಡೆಸಲು ಏಕತೆ ಮುಖ್ಯ ಎಂದರು
  Published by:Seema R
  First published: