ಬಿಹಾರದಲ್ಲಿ ಮಕ್ಕಳ ಸಾವು; ವೈದ್ಯರು, ಮಕ್ಕಳನ್ನು ಭೇಟಿ ಮಾಡಲಿರುವ ಸಿಎಂ ನಿತೀಶ್​ಗೆ ಸಂಬಂಧಿಕರಿಂದ ಗೋ ಬ್ಯಾಕ್​ ಘೋಷಣೆ

ಜೂನ್​ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್​) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.

HR Ramesh | news18
Updated:June 18, 2019, 1:26 PM IST
ಬಿಹಾರದಲ್ಲಿ ಮಕ್ಕಳ ಸಾವು; ವೈದ್ಯರು, ಮಕ್ಕಳನ್ನು ಭೇಟಿ ಮಾಡಲಿರುವ ಸಿಎಂ ನಿತೀಶ್​ಗೆ ಸಂಬಂಧಿಕರಿಂದ ಗೋ ಬ್ಯಾಕ್​ ಘೋಷಣೆ
ಜೂನ್​ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್​) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.
  • News18
  • Last Updated: June 18, 2019, 1:26 PM IST
  • Share this:
ಬಿಹಾರದಲ್ಲಿ ಕಳೆದ ಎರಡು ವಾರದಿಂದ ಮೆದುಳು ಜ್ವರಕ್ಕೆ 126 ಮಕ್ಕಳು ಬಲಿಯಾಗಿದ್ದಾರೆ. ಇನ್ನು ನೂರಾರು ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಜಾಫರ್​ನಗರದ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಏತನ್ಮಧ್ಯೆ ರೊಚ್ಚಿಗೆದ್ದಿರುವ ರೋಗಿಗಳ ಸಂಬಂಧಿಕರು ನಿತೀಶ್​ ಕುಮಾರ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ನಿತೀಶ್ ಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಮತ್ತು ರೋಗಗ್ರಸ್ಥ ಮಕ್ಕಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಆದರೆ, ಎರಡು ವಾರಗಳಿಂದ ರೋಗ ತಡೆಗಟ್ಟವಲ್ಲಿ ನಿರ್ಲಕ್ಷ್ಯ ತೋರಿರುವ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಪ್ರತಿಭಟನಾಕಾರರು ಗೋ ಬ್ಯಾಕ್​ ಎಂದು ನಿತೀಶ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ಸಚಿವ ಹರ್ಷವರ್ದನ್​ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವಾನ ಹೇಳಿ, ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈ ವೇಳೆ ಅವರನ್ನು ತಡೆಗಟ್ಟಿದ್ದ ಪ್ರತಿಭಟನಾಕಾರರು ಮುಜಾಫರ್​ನಗರದಿಂದ ಪಾಟ್ನಾಗೆ ಹಿಂದಿರುಗುವಂತೆ ಆಗ್ರಹಿಸಿದ್ದರು. ಮತ್ತು ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.ಕಾಯಿಲೆಗೆ ಮಕ್ಕಳು ಬಲಿಯಾದ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಕುರಿತು ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಹಾರ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ.ಇದನ್ನು ಓದಿ: ಬಿಹಾರದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 126 ಕ್ಕೆ ಏರಿಕೆ; ಸಿಎಂ ನಿತೀಶ್​ ಕುಮಾರ್ ಆಸ್ಪತ್ರೆಗೆ ಮೊದಲ ಭೇಟಿ

ಜೂನ್​ ತಿಂಗಳಂದು ಬಿಹಾರದಲ್ಲಿ ಮೆದುಳು ಜ್ವರ (ಎಪಿಡೆಮಿಕ್​) ಹಬ್ಬಿ, 126 ಮಕ್ಕಳು ಅಸುನೀಗಿದ್ದಾರೆ. ಆದರೆ, ಮಕ್ಕಳು ಅಸುನೀಗಲು ಹೈಪೊಗ್ಲಿಸಿಮಿಯಾ ಕಾರಣ ಎಂದು ಸರ್ಕಾರ ವಾದಿಸುತ್ತಿದೆ.

ಈ ಘಟನೆ ರಾಜಕೀಯವಾಗಿಯೂ ತಿರುಗಿದ್ದು, ಆರ್​ಜೆಡಿ ಮತ್ತು ಕಾಂಗ್ರೆಸ್, ನಿತೀಶ್​ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸುತ್ತಿವೆ.

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading