Video | ಮೇಯರ್​ ಕಾಲಿಗೆ ಹಗ್ಗ ಕಟ್ಟಿ, ರಸ್ತೆ ಮೇಲೆ ಕಾರಿನಲ್ಲಿ ಎಳೆದೊಯ್ದ ರೈತರು; ಏಕೆ ಗೊತ್ತೇ?

ಸಾಂತಾ ರಿಟಾ ಎಲ್​ ಇನ್​ಇನ್ವರ್ನಾಡೆರೊ ಸಮುದಾಯಕ್ಕೆ ಸೇರಿದ ರೈತರು ಹೀಗೆ ದಾಳಿ ಮಾಡಿರುವುದು ಮೊದಲ ಬಾರಿಯೇನಲ್ಲ. 2018ರ ಚುನಾವಣೆ ವೇಳೆ ಮೇಯರ್ ಎಸ್ಕಾನ್​ಡಾನ್​ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಎಂದು ನಾಲ್ಕು ತಿಂಗಳ ಹಿಂದೆಯೂ ಇದೇ ರೀತಿ ದಾಳಿ ನಡೆಸಿದ್ದರು.

HR Ramesh | news18-kannada
Updated:October 10, 2019, 9:41 PM IST
Video | ಮೇಯರ್​ ಕಾಲಿಗೆ ಹಗ್ಗ ಕಟ್ಟಿ, ರಸ್ತೆ ಮೇಲೆ ಕಾರಿನಲ್ಲಿ ಎಳೆದೊಯ್ದ ರೈತರು; ಏಕೆ ಗೊತ್ತೇ?
ಮೇಯರ್​ನನ್ನು ಎಳೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ
HR Ramesh | news18-kannada
Updated: October 10, 2019, 9:41 PM IST
ಲಾಸ್ ಮಾರ್ಗರಿಟಾಸ್ (ಮೆಕ್ಸಿಕೊ): ರೊಚ್ಚಿಗೆದ್ದ ರೈತರು ದಕ್ಷಿಣ ಮೆಕ್ಸಿಕೋದ ಲಾಸ್ ಮಾರ್ಗರಿಟಾಸ್​ ನಗರಕ್ಕೆ ನುಗ್ಗಿ ಅಲ್ಲಿನ ಮೇಯರ್​ನನ್ನು ಕಚೇರಿಯಿಂದ ಹೊರಗೆಳೆದು ತಂದು, ಅವರನ್ನು ಹಗ್ಗದಿಂದ ಕಾರಿನ ಹಿಂಬದಿಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡ ಹೋದ ಘಟನೆ ಮಂಗಳವಾರ ನಡೆದಿದೆ.

ಸಾಂತಾ ರಿಟಾ ಎಲ್​ ಇನ್​ಇನ್ವರ್ನಾಡೆರೊ ಸಮುದಾಯಕ್ಕೆ ಸೇರಿದ ಜನರು ಲಾಸ್ ಮಾರ್ಗರಿಟಾಸ್ ಪಟ್ಟಣಕ್ಕೆ ಆಯುಧಗಳೊಂದಿಗೆ ನುಗ್ಗಿ, ದೊಣ್ಣೆಗಳಿಂದ ಮೇಯರ್ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಬಳಿಕ ಮೇಯರ್​ ಮೇಯರ್ ಜಾರ್ಜ್​ ಲೂಯಿಸ್ ಎಸ್ಕಾಡಾನ್ ಅವರನ್ನು ಹೊರಗೆ ದಬ್ಬಿ, ಅವರನ್ನು ಪಿಕಪ್ ವಾಹನಕ್ಕೆ ಕಟ್ಟಿ ರಸ್ತೆ ಮೇಲೆ ಸ್ವಲ್ಪ ದೂರದವರೆಗೂ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮೇಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೇಯರ್​ನನ್ನು ಎಳೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಮಾರು 50ರಿಂದ 60 ಮಂದಿ ಸುಲಿಗೆಕೋರರು ಮೂರು ಪಿಕ್​ಅಪ್​ ಟ್ರಕ್​ಗಳಲ್ಲಿ ಶಸ್ತ್ರ, ದೊಣ್ಣೆಗಳೊಂದಿಗೆ ಬಂದು ನನ್ನನ್ನು ಅಪಹರಿಸಿದ್ದಾರೆ. ಒಂದು ಕಾಲಿಗೆ ಹಗ್ಗ ಕಟ್ಟಿ, ವಾಹನದಲ್ಲಿ ನನ್ನನ್ನು ನನ್ನ ಕಚೇರಿ ರಸ್ತೆಯಲ್ಲಿ ಎಳೆದುಕೊಂಡ ಹೋದರು. ಬಳಿಕ  ಸಾಂತಾ ರಿಟಾ ಎಲ್​ ಇನ್​ಇನ್ವರ್ನಾಡೆರೊ ಗ್ರಾಮೀಣ ಸಮುದಾಯಕ್ಕೆ ನೇರವಾಗಿ ಹಣ ವರ್ಗಾವಣೆ ಸೇರಿದಂತೆ ಸಾರ್ವಜನಿಕ ಸಂಪನ್ಮೂಲ ಕೊಡುವಂತೆ ಬೇಡಿಕೆ ಇಟ್ಟರು ಎಂದು ಮೇಯರ್​ ಅವರು ಎಎಫ್​ಪಿ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.



Loading...

ಇದನ್ನು ಓದಿ: ಅಚ್ಚರಿಯಾದರೂ ಸತ್ಯ; ಸಾಕಿದ ಒಡತಿಗೇ ಶೂಟ್ ಮಾಡಿದ ನಾಯಿ!

ಸಾಂತಾ ರಿಟಾ ಎಲ್​ ಇನ್​ಇನ್ವರ್ನಾಡೆರೊ ಸಮುದಾಯಕ್ಕೆ ಸೇರಿದ ರೈತರು ಹೀಗೆ ದಾಳಿ ಮಾಡಿರುವುದು ಮೊದಲ ಬಾರಿಯೇನಲ್ಲ. 2018ರ ಚುನಾವಣೆ ವೇಳೆ ಮೇಯರ್ ಎಸ್ಕಾನ್​ಡಾನ್​ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಎಂದು ನಾಲ್ಕು ತಿಂಗಳ ಹಿಂದೆಯೂ ಇದೇ ರೀತಿ ದಾಳಿ ನಡೆಸಿದ್ದರು.

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...