HOME » NEWS » National-international » ANGEL WINGED CALF BORN WITH SIX LEGS FINALLY FINDS A FOREVER HOME STG MAK

ಏಂಜಲ್ ರೆಕ್ಕೆಯೊಂದಿಗೆ ಹುಟ್ಟಿದ ಕರು ಕೊನೆಗೆ ಶಾಶ್ವತವಾದ ಮನೆ ತಲುಪಿದ್ದು, ಮನಕಲುಕುತ್ತದೆ!

ಭುಜದ ಮೇಲಿರುವ ಕಾಲುಗಳನ್ನು ಕತ್ತರಿಸುವ ತೀರ್ಮಾನ ಮಾಡಿದ್ದ ಹಸುವಿನ ಮಾಲೀಕ ಕೊನೆಗೆ ಪಶುವೈದ್ಯರ ಬಳಿಗೆ ಹೋಗಿದ್ದಾನೆ. ಆಗ ಪಶುವೈದ್ಯರು ಕರುವಿಗೆ ಕಾಲುಗಳು ಬೆನ್ನು ಮೂಳೆಗಳಿಗೆ ಅಂಟಿಕೊಂಡಿವೆ. ಹಾಗಾಗಿ ಕಾಲುಗಳನ್ನು ಕತ್ತರಿಸುವುದು ಬೇಡ ಎಂದು ತಿಳಿಸಿದ್ದಾರೆ.

news18-kannada
Updated:February 26, 2021, 4:16 PM IST
ಏಂಜಲ್ ರೆಕ್ಕೆಯೊಂದಿಗೆ ಹುಟ್ಟಿದ ಕರು ಕೊನೆಗೆ ಶಾಶ್ವತವಾದ ಮನೆ ತಲುಪಿದ್ದು, ಮನಕಲುಕುತ್ತದೆ!
ಏಂಜಲ್ ರೆಕ್ಕೆ ಮತ್ತು ಆರು ಕಾಲುಗಳೊಂದಿಗೆ ಜನಿಸಿರುವ ಕರು.
  • Share this:
ಕೆಲವೊಮ್ಮೆ ನಮ್ಮ ಸುತ್ತುಮುತ್ತ ನಡೆಯುವ ಅಪರೂಪದ ಘಟನೆಗಳು ಗಲಿಬಿಲಿ ಆಗುವಂತೆ ಮಾಡುತ್ತದೆ. ಇನ್ನು, ಪ್ರಕೃತಿಗೆ ಮೀರಿದ ವಿಷ್ಮಯಗಳನ್ನು ಪವಾಡಗಳೆಂದು ಕರೆಯಬೇಕೋ ಅಥವಾ ಏನೆಂದು ಕರೆಯಬೇಕೋ ಆ ಕ್ಷಣದಲ್ಲಿ ಅರ್ಥವಾಗುವುದಿಲ್ಲ. ಸಾಮಾನ್ಯವಾಗಿ ಜನಿಸುವ ಹಸುವಿನ ಕರುಗಳಿಗೆ 4 ಇರುವುದನ್ನು ಎಲ್ಲರೂ ನೋಡಿರುತ್ತೇವೆ. ಆದರೆ, ಐರ್ಲೆಂಡ್‌ನಲ್ಲಿ ಜನಿಸಿದ ಕರುವಿಗೆ ಆರು ಕಾಲುಗಳಿದ್ದು, ಇದನ್ನು ನೋಡಿದವರು ಆಶ್ಚರ್ಯಗೊಂಡು ಎಂಜೆಲ್‌ ರೆಕ್ಕೆಗಳೆಂದು ಕರೆದಿದ್ದಾರೆ.

ಕರು ಬದುಕಿರುವುದೇ ಸಾಧನೆ ಎಂದ ಬೆಲ್‌ಫಾಸ್ಟ್ ನ್ಯೂಸ್‌

6 ಕಾಲು ಇರುವ ಹಸುವನ್ನು ನೋಡಿದ ಹಸುವಿನ ಯಜಮಾನ ಮೊದಲಿಗೆ ಈ ಕರುವನ್ನು ಮನೆಗೆ ಸ್ವಾಗತಿಸಲು ನಿರಾಕರಿಸಿದ್ದಾನೆ. ಕರುವಿಗೆ ಆರು ಕಾಲುಗಳಿವೆ. ಇನ್ನು, ಐರ್ಲೆಂಡ್‌ನ ಬೆಲ್‌ಫಾಸ್ಟ್‌ ನ್ಯೂಸ್‌, ಈ ಕರು ದೌರ್ಬಲ್ಯಗಳ ನಡುವೆ ಬದುಕಿರುವುದೇ ದೊಡ್ಡ ಸಾಧನೆ ಎಂದಿದೆ. ಹುಟ್ಟಿದ ಈ ಕರುವಿಗೆ ನಾಲ್ಕು ಕಾಲುಗಳು ಎಲ್ಲಾ ಕರುಗಳಂತೆ ಇದ್ದರೆ ಇನ್ನೆರಡು ಕಾಲುಗಳು ಭುಜಗಳ ಮೇಲಿವೆ. ಇದು ಕರುವಿಗೆ ರೆಕ್ಕೆ ಇದ್ದಂತೆ ಕಾಣಿಸುತ್ತದೆ.

ಭುಜದ ಮೇಲಿರುವ ಕಾಲುಗಳನ್ನು ಕತ್ತರಿಸುವ ತೀರ್ಮಾನ ಮಾಡಿದ್ದ ಹಸುವಿನ ಮಾಲೀಕ ಕೊನೆಗೆ ಪಶುವೈದ್ಯರ ಬಳಿಗೆ ಹೋಗಿದ್ದಾನೆ. ಆಗ ಪಶುವೈದ್ಯರು ಕರುವಿಗೆ ಕಾಲುಗಳು ಬೆನ್ನು ಮೂಳೆಗಳಿಗೆ ಅಂಟಿಕೊಂಡಿವೆ. ಹಾಗಾಗಿ ಕಾಲುಗಳನ್ನು ಕತ್ತರಿಸುವುದು ಬೇಡ ಎಂದು ತಿಳಿಸಿದ್ದಾರೆ.

ಆಗ, ಈ ಕರುವಿನಿಂದ ನನಗೆ ಪ್ರಯೋಜನ ಇಲ್ಲ. ಕರು ಎಲ್ಲಿ ನೆಮ್ಮದಿಯಾಗಿ ಬದುಕುತ್ತದೆ ಎಲ್ಲಿಗೆ ಬಿಟ್ಟು ಬರಲಿ ಎಂದು ಕರುವಿನ ಯಜಮಾನ ಯೋಚನೆ ಮಾಡುತ್ತಿದ್ದರು. ಬಳಿಕ ನಾರ್ಥನ್‌ ಐರ್ಲೆಂಡ್‌ನ ಪುನರ್‌ವಸತಿ ಕೇಂದ್ರವೊಂದನ್ನು ಸಂಪರ್ಕಿಸಿ ಕರುವನ್ನು ಬಿಟ್ಟು ಬಂದಿದ್ದನು, ಪುನರ್‌ವಸತಿ ಕೇಂದ್ರವು ಈ ಕರುವನ್ನು ‘ವಿಶೇಷವಾದ ಕರು’ ಎಂದು ಕರೆದಿದೆ.

ಇದನ್ನೂ ಓದಿ: Vinay Kumar: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ಖ್ಯಾತ ಆಲ್​ರೌಂಡರ್​ ವಿನಯ್​ ಕುಮಾರ್!

'ಏಂಜಲ್‌ ರೆಕ್ಕೆಯ ಕರು'ಪುನರ್‌ವಸತಿ ಕೇಂದ್ರವು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ಕರುವಿನ ಪೋಟೋಗಳನ್ನು ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿತ್ತು. ತಾಯಿ ಜೊತಗೆ ಕರು ಬೆಳೆಯಬೇಕಿತ್ತು. ಆದರೆ ಇದರ ಯಜಮಾನ ಕರು ಮತ್ತು ಕರುವಿನ ತಾಯಿಯನ್ನು ದೂರ ಮಾಡಿದ್ದಾರೆ ಎಂದು ಫೋಸ್ಟ್‌ನಲ್ಲಿ ಬರೆದುಕೊಂಡಿದೆ. ಈ ಪೋಸ್ಟ್‌ಗೆ 24 ಗಂಟೆಯೊಳಗೆ 49,000 ಜನ ಲೈಕ್‌ ಮಾಡಿದ್ದಾರೆ. ಹಲವರು ನೆಟ್ಟಿಗರು ಇದನ್ನು ಏಂಜಲ್‌ ರೆಕ್ಕೆ ಹೊಂದಿರುವ ಕರು, ಅಪರೂಪದ ಕರು ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಕರುವಿಗೆ ಶಾಶ್ವತ ಮನೆಯನ್ನು ನಿರ್ಮಿಸಲಾಗಿದೆ ಎಂದು ಪುನರ್‌ವಸತಿ ಕೇಂದ್ರ ತಿಳಿಸಿದೆ. ಆದರೆ, ಎಲ್ಲಿ ಕರುವಿಗೆ ಮನೆ ನಿರ್ಮಿಸಲಾಗಿದೆ ಎಂಬುದನ್ನು ರಹಸ್ಯವಾಗಿಟ್ಟು, ಉತ್ತರ ಐರ್ಲೆಂಡ್‌ನಲ್ಲಿಯೇ ಇದೆ ಎಂದು ಗುಟ್ಟನ್ನು ರಟ್ಟು ಮಾಡಿದೆ. ಆದರೆ, ತಾಯಿ ಮತ್ತು ಕರುವನ್ನು ಇದರ ಯಜಮಾನ ದೂರ ಮಾಡಿರುವುದನ್ನು ಪುನರ್‌ವಸತಿ ಕೇಂದ್ರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.
Published by: MAshok Kumar
First published: February 26, 2021, 4:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories