Shabarimala Ayyappa: ಅಯ್ಯಪ್ಪನಿಗೆ ವಜ್ರದ ಕಿರೀಟ ಅರ್ಪಿಸಿ ಹರಕೆ ತೀರಿಸಿದ ಭಕ್ತ!

Diamond Crown: ಉದ್ಯಮಿ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಹರಕೆಯಂತೆ 50 ಲಕ್ಷ ಮೌಲ್ಯದ ವಜ್ರದ ಕಿರೀಟವನ್ನು ಅಯ್ಯಪ್ಪಸ್ವಾಮಿಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Corona) ಜನರಲ್ಲಿ ಎಂತಹ ಭಯ ಹುಟ್ಟಿಸಿದೆ ಅಂದ್ರೆ ವೈರಸ್ ತಗುಲಿದ್ರೆ ಬದುಕಿ ಬರೋದೇ ಕಷ್ಟ ಎನ್ನುವಂತೆ ಮಾಡಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಆಂಧ್ರಪ್ರದೇಶ (Andrapradesh) ದ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ (Nandyalayam Maram Venkatasubbayya) ಅವರು ಶಬರಿಮಲೆ ಅಯ್ಯಪ್ಪ (Sabarimala Ayyappa)ನ ಮೊರೆ ಹೋಗಿದ್ದರಂತೆ. ಬದುಕಿ ಬಂದ್ರೆ ವಜ್ರದ ಕಿರೀಟ (diamond crown) ಅರ್ಪಿಸೋದಾಗಿ ಹರಕೆ ಕಟ್ಟಿಕೊಂಡಿದ್ದರಂತೆ. ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಆಂಧ್ರಪ್ರದೇಶದ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಅವರು ಅಯ್ಯಪ್ಪನಿಗೆ 50 ಲಕ್ಷ ಮೌಲ್ಯದ ವಜ್ರದ ಹೊದಿಕೆಯ ಕಿರೀಟವನ್ನು ನೀಡಿದ್ದಾರೆ.

50 ಲಕ್ಷ ಮೌಲ್ಯದ ಕಿರೀಟ

ಉದ್ಯಮಿ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಅವರು ಶಬರಿಮಲೆ ಅಯ್ಯಪ್ಪಸ್ವಾಮಿಗೆ ನೀಡಿರೋ ವಜ್ರದ ಕಿರೀಟಿದ ಮೌಲ್ಯ 50 ಲಕ್ಷ ಅಂತ ಹೇಳಲಾಗ್ತಿದೆ. ಕಿರೀಟದ ಮೇಲಿನ ಭಾಗ ಸಂಪೂರ್ಣವಾಗಿ ವಜ್ರದಿಂದ ಕೂಡಿದೆ. ದೇವರಿಗೆ ಈ ರೀತಿ ಹೆಚ್ಚು ಬೆಲೆಬಾಳುವ ಉಡುಗೊರೆ ನೀಡಲು ಕೆಲವು ಕಾನೂನುಗಳಿವೆ, ಅದರ ಅನ್ವಯ ನೀಡಬೇಕು ಹೀಗಾಗಿ ವೆಂಕಟಸುಬ್ಬಯ್ಯ ತಮ್ಮ ವಕೀಲರ ಜೊತೆಯೇ ಬಂದು ಶಬರಿಮಲೆ ಅಯ್ಯಪ್ಪನಿಗೆ ಕಿರೀಟ ಅರ್ಪಿಸಿದರು.

ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಯಾರು?

ಉದ್ಯಮಿ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವರು, ತನ್ನದೇ ಆದ ಹಲವು ವ್ಯಾಪಾರ ವ್ಯವಹಾರಗಳನ್ನು ಹೊಂದಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಅಯ್ಯಪ್ಪನ ಭಕ್ತರಾಗಿದ್ದಾರೆ. ಪ್ರತಿ ವರ್ಷ ಸಂಕ್ರಾಂತಿ ಸಮಯದಲ್ಲೇ ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದರಂತೆ. ಆದರೆ ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕರೋನಾ ಸೋಂಕಿಗೆ ಒಳಗಾಗಿದ್ರು.

ಇದನ್ನೂ ಓದಿ: 40 ಪೈಸೆಗಾಗಿ ಎಂಪೈರ್ ಹೋಟೆಲ್ ವಿರುದ್ಧ ಕೇಸು ದಾಖಲಿಸಿದ ವಕೀಲ

‘ದೇವರೇ ಕೊರೊನಾದಿಂದ ಕಾಪಾಡು’

ಏನೇ ಸಂಕಷ್ಟ ಬರಲಿ ಜನರು ದೇವರ ಮೊರೆ ಹೋಗೋದು ಸಹಜ.
ಕಳೆದ ವರ್ಷ ಕೊರೊನಾ ಎರಡನೇ ಅಲೆ ಎಲ್ಲ ರಾಜ್ಯಗಳಲ್ಲೂ ತನ್ನ ಅಟ್ಟಹಾಸ ಮೆರೆದಿತ್ತು. ಇದೇ ವೇಳೆ ಆಂಧ್ರದ ಉದ್ಯಮಿ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ರು. 15 ದಿನಗಳ ಕಾಲ ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ.

ಶಬರಿಮಲೆ ಅಯ್ಯಪ್ಪನ ಭಕ್ತನಾಗಿರೋ ಅವ್ರು ಈ ವೇಳೆ ದೇವರ ಮೋರೆ ಹೋಗಿದ್ದಾರೆ. ಕೊರೊನಾದಿಂದ ನನ್ನನ್ನು ಕಾಪಾಡಿ ದೀರ್ಘಾಯುಷ್ಯ ನೀಡುವಂತೆ ಹರಕೆ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ತನ್ನನ್ನು ರೋಗದಿಂದ ಮುಕ್ತಗೊಳಿಸುತ್ತಾನೆ ಅನ್ನೋ ನಂಬಿಕೆಯು ಅವರಿಗಿತ್ತು. ಕೆಲ ದಿನಗಳ ಬಳಿಕ ಐಸಿಯು (ICU)ನಲ್ಲಿದ್ದ ಅವರು ಚೇತರಿಸಿಕೊಂಡರು. ತದನಂತ್ರ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಉದ್ಯಮಿ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಹರಕೆಯಂತೆ 50 ಲಕ್ಷ ಮೌಲ್ಯದ ವಜ್ರದ ಕಿರೀಟವನ್ನು ಅಯ್ಯಪ್ಪಸ್ವಾಮಿಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ.
ಏನೇ ಸಂಕಷ್ಟ ಬಂದ್ರು ಜನ ದೇವರ ಮೊರೆ ಹೊಗ್ತಾರೆ. ಅದರಲ್ಲೂ ಹೆಚ್ಚಾಗಿ ಕರ್ನಾಟಕದ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಂಧ್ರದ ತಿರುಪತಿ ತಿಮ್ಮಪ್ಪ, ಕೇರಳದ ಶಬರಿಮಲೆ ಅಯ್ಯಪ್ಪನ ಮೊರೆ ಹೋಗ್ತಾರೆ. ರಾಜಕಾರಣಿಗಳು, ಉದ್ಯಮಿ ಈ ರೀತಿ ಚಿನ್ನ, ವಜ್ರದ ಕಿರೀಟ ಆಭರಣಗಳನ್ನ ನೀಡುತ್ತಾ ಸುದ್ದಿಯಾಗ್ತಾನೆ ಇರ್ತಾರೆ.

ಇದನ್ನೂ ಓದಿ: ಕೊರೊನಾ ಬರ್ಲಿ ಅಂತಾನೇ ಕಂಡ ಕಂಡವರನೆಲ್ಲಾ ತಬ್ಬಿಕೊಳ್ಳುತ್ತಿದ್ದಾಳಂತೆ..! ವಿಡಿಯೋ ನೋಡಿ..

ಸಂಕ್ರಾಂತಿ ಸಮಯದಲ್ಲಿ ಶಬರಿಮಲೆ ಅಯ್ಯಪ್ಪನ ಸನ್ನಿಧನಕ್ಕೆ ಭಕ್ತರ ದಂಡೆ ಹರಿದು ಬರುತ್ತೆ. ಆದ್ರೆ ಈ ಬಾರಿ ದೇಶದಲ್ಲಿ ಕೊರೊನಾ 3ನೇ ಅಲೆಯ ಅಬ್ಬರ ಜೋರಾಗಿದ್ದು, ಭಕ್ತರ ಸಂಖ್ಯೆ ಕೂಡ ಕಡಿಮೆ ಆಗಿದೆ.
Published by:Sandhya M
First published: