Andhra Pradesh: ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ, 6 ಸಾವು, 13 ಜನ ಗಾಯ

ಆಂಧ್ರಪ್ರದೇಶದ (Andhra Pradesh) ಎಲೂರು ಜಿಲ್ಲೆಯ (Eluru District) ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚೆಗೆ ಅಗ್ನಿ ಅವಘಡಗಳು (Fire Accidents) ಹೆಚ್ಚುತ್ತಿದ್ದು  ಇದೀಗ ಆಂಧ್ರಪ್ರದೇಶದ ಎಲೂರು ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿ 6 ಜನ ಮೃತಪಟ್ಟಿದ್ದಾರೆ. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದಾರೆ. ಬುಧವಾರ ತಡರಾತ್ರಿ ಆಂಧ್ರಪ್ರದೇಶದ (Andhra Pradesh) ಎಲೂರು ಜಿಲ್ಲೆಯ (Eluru District) ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಏಲೂರಿನ ಅಕ್ಕಿರೆಡ್ಡಿಗುಡೆಂನಲ್ಲಿರುವ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಈ ಘಟನೆ ನಡೆದಿದೆ.

ಅಸಮರ್ಪಕ ಕಾರ್ಯದಿಂದಾಗಿ ಬಾಯ್ಲರ್ ಘಟಕದಲ್ಲಿ ಸಕ್ರಿಯ ಔಷಧೀಯ ಪದಾರ್ಥಗಳು ಮತ್ತು ಇತರ ಮಧ್ಯಂತರಗಳನ್ನು ತಯಾರಿಸಲು ಬಳಸುವ ಅನಿಲ ಸೋರಿಕೆಯಾದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬುಧವಾರ ರಾತ್ರಿ 11:30 ರ ಸುಮಾರಿಗೆ ನಡೆದಿದೆ.

ನೈಟ್ರಿಕ್ ಆಸಿಡ್, ಮೊನೊಮಿಥೈಲ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಏಲೂರು ಎಸ್ಪಿ ರಾಹುಲ್ ದೇಬ್ ಶರ್ಮಾ ತಿಳಿಸಿದ್ದಾರೆ.

ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ

ಆಂಧ್ರಪ್ರದೇಶ ಸರ್ಕಾರ ಬಾಯ್ಲರ್ ಸ್ಫೋಟದಲ್ಲಿ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡ ಇತರರಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಪ್ರಧಾನಿ ಮೋದಿ ಸಂತಾಪ

ಈ ದುರಂತ ಘಟನೆಯ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಂಧ್ರಪ್ರದೇಶದ ಎಲೂರುನಲ್ಲಿರುವ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಅಪಘಾತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.

ಜನರ ಸ್ಥಳಾಂತರ

ಸ್ಫೋಟ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಕಿಯನ್ನು ನಂದಿಸಲು ನುಜ್ವಿಡ್ ಮತ್ತು ಹತ್ತಿರದ ಘಟಕಗಳಿಂದ ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ಒತ್ತಲಾಯಿತು. ಆದರೆ ವಿಪತ್ತು ಪ್ರತಿಕ್ರಿಯೆ ತಂಡಗಳು ಅನಿಲ ಸೋರಿಕೆಯು ಅಪಾಯಕಾರಿಯಾಗಬಹುದೆಂಬ ಭಯದಿಂದ ಹತ್ತಿರದ ಕಾಲೊನಿಗೆ ಜನರನ್ನು ಸ್ಥಳಾಂತರಿಸಿದವು.

ಶೋಧ ಕಾರ್ಯಾಚರಣೆ

ಯಾವುದೇ ಉದ್ಯೋಗಿ ನಾಪತ್ತೆಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನಿಲ ಸೋರಿಕೆಗೆ ಕಾರಣ ತಿಳಿದುಬಂದಿಲ್ಲ ಎಂದು ಏಲೂರು ಜಿಲ್ಲಾ ಎಸ್ಪಿ ರಾಹುಲ್ ದೇವ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:

ನೂರು ಹಸುಗಳು ಸಜೀವ ದಹನ

ಇಂದಿರಾಪುರಂನ ಅಹಿಂಸಾ ಖಂಡ-2ರ ಪಕ್ಕದಲ್ಲಿರುವ ಗುಡಿಸಲುಗಳಲ್ಲಿ (Huts) ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿ (Fire) ಕಾಣಿಸಿಕೊಂಡಿದೆ. ಮಧ್ಯಾಹ್ನ 1.17ಕ್ಕೆ ಕರೆ ಬಂದ ನಂತರ 10 ಅಗ್ನಿಶಾಮಕ ಟೆಂಡರ್‌ಗಳನ್ನು ಕಳುಹಿಸಿದ್ದೇವೆ ಎಂದು ಅಗ್ನಿಶಾಮಕ (Fire Force) ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುಡಿಸಲುಗಳಿಗೂ ಬೆಂಕಿ

ಇಂದಿರಾಪುರಂ ಸಮೀಪದ ಕನವಾನಿ ಗ್ರಾಮದಲ್ಲಿರುವ ‘ಗೋಶಾಲೆ’ಯಲ್ಲಿ ಸೋಮವಾರ ಮಧ್ಯಾಹ್ನದ ವೇಳೆಗೆ ಸಮೀಪದಲ್ಲಿದ್ದ ಗುಡಿಸಲುಗಳಿಂದ (Huts) ಬೆಂಕಿ ಕಾಣಿಸಿಕೊಂಡು 36 ಹಸುಗಳು (Cow) ಜೀವಂದ ಸುಟ್ಟು ಕರಕಲಾಗಿವೆ. ಹಿರಿಯ ಪೊಲೀಸ್ (Police) ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆಯನ್ನು (Enquiry) ಪ್ರಾರಂಭಿಸಿದರು.

ಇದನ್ನೂ ಓದಿ: Scholarship Offer: ಒಬ್ಬ ವಿದ್ಯಾರ್ಥಿಗಾಗಿ 27 ಶಾಲೆಗಳಿಂದ ₹30 ಕೋಟಿ ಸ್ಕಾಲರ್ಶಿಪ್ ಆಫರ್: ಅಂಥ ವಿಶೇಷವೇನು?

ಇಂದಿರಾಪುರಂನ ಅಹಿಂಸಾ ಖಂಡ-2ರ ಪಕ್ಕದಲ್ಲಿರುವ ಗುಡಿಸಲುಗಳಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ 1.17ಕ್ಕೆ ಕರೆ ಬಂದ ನಂತರ 10 ಅಗ್ನಿಶಾಮಕ ಟೆಂಡರ್‌ಗಳನ್ನು ತಂದಿದ್ದೇವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸುಮಾರು 100 ಗುಡಿಸಲುಗಳು ಸುಟ್ಟು ಹೋಗಿವೆ ಆದರೆ ಬೆಂಕಿಗೆ ಸಂಬಂಧಿಸಿದ ಯಾವುದೇ ಗಾಯಗಳಾಗಿಲ್ಲ ಎಂದು ಸಿಂಗ್ ಹೇಳಿದರು.
Published by:Divya D
First published: