ಆಂಧ್ರದಲ್ಲಿ ‘ಚಲೋ ಆತ್ಮಕೂರು’: ಚಂದ್ರಬಾಬು ನಾಯ್ಡು ಮತ್ತವರ ಮಗ ಸೇರಿ ಹಲವು ಟಿಡಿಪಿ ಮುಖಂಡರ ಗೃಹ ಬಂಧನ

ಜಗನ್​ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಧ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಟಿಡಿಪಿ ಪಕ್ಷದ ಆರೋಪ. ಟಿಡಿಪಿ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತ ಪಕ್ಷ ಕೂಡ ಪ್ರತಿಭಟನೆ ನಡೆಸುತ್ತಿದೆ.

Vijayasarthy SN | news18
Updated:September 11, 2019, 11:14 AM IST
ಆಂಧ್ರದಲ್ಲಿ ‘ಚಲೋ ಆತ್ಮಕೂರು’: ಚಂದ್ರಬಾಬು ನಾಯ್ಡು ಮತ್ತವರ ಮಗ ಸೇರಿ ಹಲವು ಟಿಡಿಪಿ ಮುಖಂಡರ ಗೃಹ ಬಂಧನ
ಟಿಡಿಪಿ ಕಾರ್ಯಕರ್ತರು
Vijayasarthy SN | news18
Updated: September 11, 2019, 11:14 AM IST
ಹೈದರಾಬಾದ್(ಸೆ. 11): ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ದುರಾಡಳಿತ ನಡೆಸುತ್ತಿದ್ದಾರೆಂದು ಖಂಡಿಸಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಪಕ್ಷ ಚಲೋ ಆತ್ಮಕೂರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರ ಸರ್ಕಾರವು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ಸೇರಿದಂತೆ ಹಲವು ಟಿಡಿಪಿ ಮುಖಂಡರನ್ನು ಗೃಹ ಬಂಧನದಲ್ಲಿರಿಸಿದೆ. ಗೃಹ ಬಂಧನಕ್ಕೊಳಗಾದವರಲ್ಲಿ ನಾಯ್ಡು ಮಗ ನರಾ ಲೋಕೇಶ್, ದೇವಿನೇನಿ ಅವಿನಾಶ್, ಕೇಸಿನೇನಿ ನಾನಿ, ಭೂಮ ಅಖಿಲಪ್ರಿಯಾ ಮೊದಲಾದವರೂ ಇದ್ದಾರೆ.

ಗೃಹ ಬಂಧನವನ್ನು ಖಂಡಿಸಿ ಚಂದ್ರಬಾಬು ನಾಯ್ಡು ಅವರು 12 ಗಂಟೆ ಉಪವಾಸ ನಿರಶನ ಪ್ರಾರಂಭಿಸಿದ್ದಾರೆ. ಹಲವು ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಅಮರಾವತಿಯ ಉಂದವಳ್ಳಿಯಲ್ಲಿರುವ ಚಂದ್ರಬಾಬು ನಾಯ್ಡು ನಿವಾಸದ ಹೊರಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೊಂದಿಗೂ ಕಾರ್ಯಕರ್ತರು ಘರ್ಷಣೆಗಿಳಿದಿದ್ಧಾರೆ.

ಇದನ್ನೂ ಓದಿ: ಭಾರೀ ಸಂಕಷ್ಟದಲ್ಲಿ ಪೇಟಿಎಂ; ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4 ಸಾವಿರ ಕೋಟಿ ನಷ್ಟ!

ಆಂಧ್ರದ ವೈಎಸ್​ಆರ್​ಪಿ ಸರ್ಕಾರದ 100 ದಿನಗಳ ಆಡಳಿತಾವಧಿಯಲ್ಲಿ ದುರಾಡಳಿತವಾಗಿದೆ; ಟಿಡಿಪಿ ಮುಖಂಡರನ್ನು ಗುರಿ ಮಾಡಿ ರಾಜಕೀಯ ಧ್ವೇಷ ತೀರಿಸಿಕೊಳ್ಳಲಾಗುತ್ತಿದೆ; ಸುಳ್ಳು ಕೇಸ್​ಗಳನ್ನ ಹಾಕಿ ಊರಿನಿಂದಲೇ ಉಚ್ಛಾಟನೆ ಮಾಡಲಾಗುತ್ತಿದೆ; ನೂರು ದಿನಗಳಲ್ಲಿ 8 ಟಿಡಿಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಚಂದ್ರಬಾಬು ನಾಯ್ಡು ಅವರು ಚಲೋ ಆತ್ಮಕೂರ್ ಪ್ರತಿಭಟನೆಗೆ ಕರೆ ನೀಡಿದ್ದರು. ರಾಜಧಾನಿ ಅಮರಾವತಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಆತ್ಮಕೂರ್ ನಗರಕ್ಕೆ ರಾಜ್ಯದ ವಿವಿಧೆಡೆಯಿಂದ ಪ್ರತಿಭಟನಾಕಾರರು ಆಗಮಿಸಿ ಸೇರುವ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಮುಖಂಡರನ್ನು ಗೃಹ ಬಂಧನದಲ್ಲಿರಿಸಿದೆ.

ಟಿಡಿಪಿ ಮುಖಂಡರನ್ನು ಗೃಹ ಬಂಧನದಲ್ಲಿರಿಸಿದ ಸರಕಾರದ ಕ್ರಮದ ವಿರುದ್ಧ ಚಂದ್ರಬಾಬು ನಾಯ್ಡು, ನರಾ ಲೋಕೇಶ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ. ಸರ್ಕಾರದ ದುರಾಡಳಿತದ ದೋತ್ಯಕವಾಗಿದೆ. ಸರ್ಕಾರ ತನ್ನ ದೌರ್ಬಲ್ಯ ಮುಚ್ಚಿಟ್ಟುಕೊಳ್ಳಲು ಟಿಡಿಪಿ ಸದಸ್ಯರನ್ನು ಬಂಧಿಸಿದೆ ಎಂದು ನರಾ ಲೋಕೇಶ್ ಆಪಾದಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಅಮೆರಿಕ ರಾಯಭಾರಿ ಕಚೇರಿ ಬಳಿ ಬಾಂಬ್ ದಾಳಿ; 9/11 ದಾಳಿಯ ವಾರ್ಷಿಕೋತ್ಸವವನ್ನು ನೆನಪಿಸಿದ ತಾಲಿಬಾನ್ ಉಗ್ರರು!

ಗುಂಟೂರು ಜಿಲ್ಲೆಯಲ್ಲಿ ನಿನ್ನೆಯಿಂದಲೂ ಹಿಂಸಾಚಾರಗಳು ನಡೆಯುತ್ತಿವೆ. ಟಿಡಿಪಿ ಮತ್ತು ವೈಎಸ್ಸಾರ್​ಪಿ ಪಕ್ಷಗಳ ಕಾರ್ಯಕರ್ತರು ಹಲವು ಕಡೆ ಘರ್ಷಣೆಗಳಿದಿದ್ಧಾರೆ. ಐದಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವುದು ತಿಳಿದುಬಂದಿದೆ. ನರಸರಾವ್ ಪೇಟ, ಪಲನಾಡು, ಗುರಜಾಲ ಹಾಗೂ ಇನ್ನೂ ಕೆಲವೆಡೆ ಸೆಕ್ಷನ್ 144 ಜಾರಿ ಮಾಡಲಾಗಿದೆ.
Loading...

ಇತ್ತ, ಟಿಡಿಪಿಯ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತಾರೂಢ ಪಕ್ಷ ಕೂಡ ಪಾಟೀ ಪ್ರತಿಭಟನೆ ಮಾಡಲು ಯೋಜಿಸಿದೆ. ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ಅವಧಿಯಲ್ಲಿ ನಡೆದಿತ್ತೆನ್ನಲಾದ ವ್ಯಾಪಕ ಭ್ರಷ್ಟಾಚಾರ, ರಾಜಕೀಯ ಧ್ವೇಷ ಸಾಧನೆಯನ್ನು ಎತ್ತಿ ತೋರಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಈ  ಹಿನ್ನೆಲೆಯಲ್ಲಿ ಪೊಲೀಸರು ವೈಎಸ್​ಆರ್​ಪಿ ಪಕ್ಷದ ಕಾರ್ಯಕರ್ತರನ್ನೂ ಬಂಧಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...