ತಿರುಪತಿಯಲ್ಲಿ ಶ್ರೀ ಬಾಲಾಜಿ, ವಿಜಯವಾಡದಲ್ಲಿ NTR​; ಹೊಸ ಜಿಲ್ಲೆಗಳ ರಚನೆಗೆ ಮುಂದಾದ Andhra

ಅನಂತಪುರ ಎರಡಾಗಿ ಅನಂತಪುರ ಮತ್ತು ಶ್ರೀ ಸತ್ಯಸಾಯಿ, ಚಿತ್ತೂರು ಎರಡಾಗಿ ಚಿತ್ತೂರು ಮತ್ತು ಶ್ರೀ ಬಾಲಾಜಿ ಜಿಲ್ಲೆಗಳನ್ನು ರಚನೆ ಮಾಡಲಾಗುವುದು

ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ

ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ

 • Share this:
  ಹೈದ್ರಾಬಾದ್ (ಜ. 27):  ಆಂಧ್ರ ಪ್ರದೇಶ ಸರ್ಕಾರವು (Andhra pradesh Government) ರಾಜ್ಯದಲ್ಲಿನ ಜಿಲ್ಲೆಗಳನ್ನು ವಿಂಗಡಿಸಿ ಮರು ಸಂಘಟಿಸಲು ಅಧಿಸೂಚನೆಗಳನ್ನು ಹೊರಡಿಸಿದೆ, ಅಸ್ತಿತ್ವದಲ್ಲಿರುವ 13 ಜಿಲ್ಲೆಗಳನ್ನು ವಿಂಗಡಿಸಿ 26 ಜಿಲ್ಲೆಗಳನ್ನಾಗಿ ರೂಪಿಸಲು (New District) ಮುಂದಾಗಿದೆ. ಇದಕ್ಕಾಗಿ ಗೆಜೆಟ್ ಆದೇಶ ಹೊರಡಿಸಲಾಗಿದೆ.  ಹೊಸದಾಗಿ ರಚಿಸಲಾದ ಜಿಲ್ಲೆಗಳಲ್ಲಿ ವಿಜಯವಾಡದಲ್ಲಿ (Vijayawada) ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಜಿಲ್ಲೆ, ರಾಯಚೋಟಿಯಲ್ಲಿ ಅನ್ನಮಯ್ಯ ಜಿಲ್ಲೆಯ ಮತ್ತು ತಿರುಪತಿಯಲ್ಲಿ (Tirupati) ಶ್ರೀ ಬಾಲಾಜಿ ಜಿಲ್ಲೆ ಪ್ರಧಾನ ಕಛೇರಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ 13 ಜಿಲ್ಲೆಗಳು ತಮ್ಮ ಹೆಸರನ್ನು ಉಳಿಸಿಕೊಂಡರೆ, ಪಶ್ಚಿಮ ಗೋದಾವರಿ ಜಿಲ್ಲೆಯ ಆಡಳಿತ ಕೇಂದ್ರವನ್ನು ಎಲ್ಲೂರಿನಿಂದ ಭೀಮಾವರಂಗೆ ಸ್ಥಳಾಂತರಿಸುವ ಕುರಿತು ನಿರ್ಧರಿಸಲಾಗಿದೆ. 

  ಯಾವೆಲ್ಲ ಜಿಲ್ಲೆಗಳ ರಚನೆ

  ಉಳಿದಂತೆ ಹೊಸದಾಗಿ ರಚಿಸಲಾದ ಜಿಲ್ಲೆಗಳಲ್ಲಿ ಅನಕಾಪಲ್ಲಿ, ಕಾಕಿನಾಡ, ಕೋನಸೀಮಾ, ಏಲೂರು, ಬಾಪಟ್ಲ, ಪಲ್ನಾಡು ಮತ್ತು ನಂದ್ಯಾಲ್. ಮಾನ್ಯಂ ಜಿಲ್ಲೆ ಮತ್ತು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ ಎಂಬ ಹೆಸರಿನ ಎರಡು ಜಿಲ್ಲೆಗಳನ್ನು ಸಹ ರಚಿಸಲಾಗಿದೆ.
  ಪೂರ್ವ ಗೋದಾವರಿ ಜಿಲ್ಲೆಯನ್ನು ಪರಿಣಾಮಕಾರಿಯಾಗಿ ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಅವು ಪೂರ್ವ ಗೋದಾವರಿ, ಕಾಕಿನಾಡ ಮತ್ತು ಕೋನಸೀಮಾ. ಪಶ್ಚಿಮ ಗೋದಾವರಿ ಎರಡು ಪಶ್ಚಿಮ ಗೋದಾವರಿ ಮತ್ತು ಏಲೂರು, ಕೃಷ್ಣದಲಲಿ ಎರಡು (ಕೃಷ್ಣ ಮತ್ತು ಎನ್‌ಟಿಆರ್, ಗುಂಟೂರು ಮೂರು ಗುಂಟೂರು, ಬಾಪಟ್ಲ, ಪಲ್ನಾಡು, ಕರ್ನೂಲ್ ಎರಡಾಗಿ ಕರ್ನೂಲ್ ಮತ್ತು ನಂದ್ಯಾಲ್, ಅನಂತಪುರ ಎರಡಾಗಿ ಅನಂತಪುರ ಮತ್ತು ಶ್ರೀ ಸತ್ಯಸಾಯಿ, ಮತ್ತು ಚಿತ್ತೂರು ಎರಡಾಗಿ ಚಿತ್ತೂರು ಮತ್ತು ಶ್ರೀ ಬಾಲಾಜಿ ಜಿಲ್ಲೆಗಳು ಒಳಗೊಂಡಿರಲಿದೆ.

  ಆಡಳಿತ ಕಾರ್ಯಕ್ಕಾಗಿ ವಿಭಜನೆ

  ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಗಳ ಪ್ರಕಾರ, ಆಡಳಿತಾತ್ಮಕ ಪುನರ್ರಚನೆಯ ಭಾಗವಾಗಿ ಕೆಲವು ಹೊಸ ಕಂದಾಯ ವಿಭಾಗಗಳನ್ನು ಸಹ ಪ್ರಸ್ತಾಪಿಸಲಾಗಿದೆ. ವಿಜಯನಗರದ ಬೊಬ್ಬಿಲಿ, ವಿಶಾಖಪಟ್ಟಣದ ಭೀಮುನಿಪಟ್ಟಣಂ, ಪಶ್ಚಿಮ ಗೋದಾವರಿಯ ಭೀಮಾವರಂ, ವಿಜಯವಾಡದ ನಂದಿಗಮ ಮತ್ತು ತಿರುವುರು ಅಥವಾ ಎನ್‌ಟಿಆರ್ ಜಿಲ್ಲೆ, ಬಾಪಟ್ಲಾ ಮತ್ತು ಬಾಪಟ್ಲಾ ಅಡಿಯಲ್ಲಿ ಚಿರಾಲಾ ಜಿಲ್ಲೆ, ಪ್ರಕಾಶಂನ ಪೊಡಿಲಿ, ನಂದ್ಯಾಲದ ಧೋಣೆ ಮತ್ತು ಆತ್ಮಕೂರ್, ಚಿತ್ತೂರಿನ ಪಲಮನೇರು, ಹಾಗೆಯೇ ಪುಟ್ಟಪರ್ತಿ ಮತ್ತು ರಾಯಚೋಟಿ ಜಿಲ್ಲೆ ರಚನೆ ಮಾಡಲಾಗಿದೆ.
  ಮಾನ್ಯಂ ಜಿಲ್ಲೆ ಪಾಲಕೊಂಡ ಮತ್ತು ಪಾರ್ವತಿಪುರಂ ಕಂದಾಯ ವಿಭಾಗಗಳನ್ನು ಒಳಗೊಂಡಿದ್ದರೆ, ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ ಪಡೇರು ಮತ್ತು ರಂಪಚೋಡವರಂಗಳನ್ನು ಒಳಗೊಂಡಿರುತ್ತದೆ.

  ಇದನ್ನು ಓದಿ: ಭಾರತದ ಭವಿಷ್ಯ ನಿರ್ಧರಿಸಲಿದೆ ಉತ್ತರ ಪ್ರದೇಶದ ಚುನಾವಣೆ; ಅಮಿತ್​ ಶಾ

  ಬುಡಕಟ್ಟು ಕಾರ್ಯಕರ್ತರ ವಿರೋಧ

  ಇನ್ನು ಜಿಲ್ಲೆಗಳ ಮರುಸಂಘಟನೆಗೆ ಬುಡಕಟ್ಟು ಕಾರ್ಯಕರ್ತರು ಏಜೆನ್ಸಿಗಳು ವಿರೋಧ ವ್ಯಕ್ತಪಡಿಸಿದವು. ಇದು ಬುಡಕಟ್ಟು ಜನಸಂಖ್ಯೆಗೆ ಅನಾನುಕೂಲತೆಯನ್ನು ಉಂಟುಮಾಡಬಹುದು. ಅವರ ಹಕ್ಕುಗಳನ್ನು ದುರ್ಬಲಗೊಳಿಸಬಹುದು ಎಂದು ಎಚ್ಚರಿಸಿದರು. ಬದಲಿಗೆ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಪ್ರತಿ ಐಟಿಡಿಎಯನ್ನು ಜಿಲ್ಲೆಯಾಗಿ ಅಥವಾ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಆಗಿ ಪರಿವರ್ತಿಸುವಂತೆ ಸಲಹೆ ನೀಡಿದ್ದರು.

  ಇದನ್ನು ಓದಿ: ಅತ್ಯಾಚಾರ ಸಂತ್ರಸ್ತೆ ಮುಖಕ್ಕೆ ಮಸಿಬಳಿದು, ಮೆರವಣಿಗೆ; Delhiಯಲ್ಲಿ ಅಮಾನವೀಯ ಘಟನೆ

  ಹೊಸ ಜಿಲ್ಲೆ ರಚಿಸುವ ಭರವಸೆ ನೀಡಿದ್ದ ವೈಎಸ್​ಆರ್​ಸಿಪಿ

  2019 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ವೈಎಸ್‌ಆರ್‌ಸಿಪಿ ರಾಜ್ಯದ 25 ಲೋಕಸಭಾ ಕ್ಷೇತ್ರಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಭರವಸೆ ನೀಡಿತ್ತು. ಜುಲೈ 2020 ರಲ್ಲಿ, ರಾಜ್ಯದ ಜಿಲ್ಲೆಗಳ ಮರುಸಂಘಟನೆಗೆ ಕೆಲಸ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ರಚನೆಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿತು. ಅದರಂತೆ ಇದೀಗ ಜಿಲ್ಲೆಗಳ ವಿಗಂಡನೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
  Published by:Seema R
  First published: