ಅಪ್ಪನ ಆರೈಕೆಗಾಗಿ ಸರ್ಕಾರಿ ಸ್ವಾಯತ್ತತೆಯ ಕಾಲ್ ಸೆಂಟರ್ ಹುದ್ದೆ ತೊರೆದ ಮಗ ಸರ್ಕಾರಿ ಆಸ್ಪತ್ರೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಅಪರೂಪದ ಘಟನೆ ಆಂಧ್ರಪ್ರದೇಶ ಜಿಲ್ಲೆಯ ವಿಶಾಖಪಟ್ಟಣದ ಅಕ್ಕಯಪೆಲ್ಲಮ್‍ನಲ್ಲಿ ನಡೆದಿದೆ. ಹೌದು ವೃದ್ಧರೆಂದರೆ ಕಡೆಗಣಿಸುವ ಈ ಕಾಲದಲ್ಲಿ ಸ್ವತಃ ತಂದೆಯ ಆರೋಗ್ಯದ ಹಿತದೃಷ್ಟಿಯಿಂದ ಎಂಬಿಎ ಓದಿರುವ ಮಧುಕಿಶನ್ ರಾವ್ ಸರ್ಕಾರಿ ಸ್ವಾಯತ್ತತೆಯ ಕೆಜಿಎಚ್ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.
ಏನಿದು ಘಟನೆ?:
ಮಧುಕಿಶನ್ ರಾವ್ ಸರ್ಕಾರಿ ಸ್ವಾಯತ್ತತೆಯ ಕಾಲ್ ಸೆಂಟರ್‌ನಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಅವರ ತಂದೆ ಸುದರ್ಶನ್ ರಾವ್, ಸ್ಥಳೀಯ ನೌಕಾನೆಲೆ ನಿವೃತ್ತ ಅಧಿಕಾರಿ. ಕಳೆದ 10 ದಿನಗಳ ಹಿಂದೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆ ಕೆಜಿಎಚ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ಸಿಎಸ್‍ಆರ್ ಬ್ಲಾಕ್‍ನಲ್ಲಿ ದಾಖಲಾಗಿದ್ದರು.
ದಾಖಲಿಸಿದ ಎರಡು ದಿನಗಳ ನಂತರ ಅವರ ತಂದೆ ಬಾತ್‍ರೂಮ್‍ನಲ್ಲಿ ಜಾರಿ ಬಿದ್ದು ರಕ್ತಸ್ರಾವ ಉಂಟಾಗಿದೆ. ಆಸ್ಪತ್ರೆ ಸಿಬ್ಬಂದಿ ಅಪ್ಪನನ್ನು ಹುಷಾರಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಧುಕಿಶನ್ ಹಾಗೂ ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಯನ್ನು ದೂರಿದರು. ದೂರು ನೀಡಿದ ನಂತರ ಆರೈಕೆ ಮಾಡಿದರಾದರೂ ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಅನ್ಯ ದಾರಿ ಕಾಣದ ಮಧುಕಿಶನ್ ತಾನು ಕಾರ್ಯನಿರ್ವಹಿಸುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ತಂದೆಯನ್ನು ನೋಡಿಕೊಳ್ಲುವ ಸಲುವಾಗಿ ಇದೇ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸೇರಿಕೊಂಡರು. ನಂತರ ಅವರಿದ್ದ ಕೋಣೆಗೆ ಬಂದರೆ ಅಪ್ಪ ಎಲ್ಲೂ ಕಾಣಲಿಲ್ಲ. ಆಗ ಹುಡುಕಾಡಿದಾಗ ಮೃತದೇಹ ಆಸ್ಪತ್ರೆಯ ಶೌಚಾಲಯದ ಹತ್ತಿರದ ಮುಂದಿನ ಭಾಗದಲ್ಲಿ ಇರುವುದು ಕಂಡು ಬಂದಿತು. ಅದೇ ವಾರ್ಡಿನ ಬಳಿ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ತಂದೆ ಬಹು ಸಮಯದ ಹಿಂದೆ ತೀರಿಹೋದರು ಎಂದು ತಿಳಿಸಿದರು. ಎಷ್ಟೇ ಪ್ರಯತ್ನ ಪಟ್ಟರೂ ಮಧುಕಿಶನ್‍ಗೆ ಅವರ ತಂದೆಯನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ.
ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಸುದರ್ಶನ್ ರಾವ್ ಅವರ ಸಾವಿಗೆ ಮೂಲ ಕಾರಣ ಕುಟುಂಬಸ್ಥರು ದೂರಿದ್ದಾರೆ. ಆಸ್ಪತ್ರೆಯ ಮುಖಸ್ಥರು, ಹಾಗೂ ನಿರ್ವಾಹಕರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಬಳಿ ದೂರು ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ?:
ಸೋಮವಾರ ರಾತ್ರಿ 8.30ರ ಸುಮಾರಿಗೆ ತಂದೆ ಸುದರ್ಶನ್ ಬಾತ್‍ರೂಮಿನಲ್ಲಿ ಬಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸುದರ್ಶನ್ ರಾವ್ ಸಾವನಪ್ಪಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮಧುಕಿಶನ್ ತಮ್ಮ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿದೆ ಮತ್ತು ಜಿಲ್ಲಾಧಿಕಾರಿಗಳು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಘಟನೆಗಳು ಆಸ್ಪತ್ರೆಯಲ್ಲಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಂಡಾಗ ಮಾತ್ರ ಖಾಸಿಗಾಗಿ ಆಸ್ಪತ್ರೆ ನಡೆಸುತ್ತಿರುವವರ ಹುಟ್ಟು ಅಡಗಿಸಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ