HOME » NEWS » National-international » ANDHRA PRADESH MAN WATCHES BIGG BOSS AS DOCTORS PERFORM CRITICAL BRAIN SURGERY ON HIM RMD

ರೋಗಿ ಬಿಗ್​ ಬಾಸ್​ ನೋಡುತ್ತಿರುವಾಗಲೇ ಮೆದುಳಿನ ಸರ್ಜರಿ ಮಾಡಿದ ವೈದ್ಯರು!

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ. ಪ್ರಸಾದ್​ ಎಂಬುವವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ಸರ್ಜರಿ ನಡೆಯುತ್ತಿರುವಾಗಲೇ ಆತ ಬಿಗ್​ ಬಾಸ್​ ನೋಡಿದ್ದಾನೆ.

news18-kannada
Updated:November 23, 2020, 11:32 AM IST
ರೋಗಿ ಬಿಗ್​ ಬಾಸ್​ ನೋಡುತ್ತಿರುವಾಗಲೇ ಮೆದುಳಿನ ಸರ್ಜರಿ ಮಾಡಿದ ವೈದ್ಯರು!
ಬಿಗ್ ಬಾಸ್
  • Share this:
ಬಿಗ್​ ಬಾಸ್​ ಶೋ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದು. ಇದೆ ಕಾರಣಕ್ಕೆ ಕೆಲವರು ಅಡುಗೆ ಮಾಡುತ್ತಾ, ಇನ್ನೂ ಕೆಲವರು ಶಿಕ್ಷಕರು ಕೊಟ್ಟ ನೋಟ್ಸ್​ ಬರೆಯುತ್ತಾ, ಇನ್ನೂ ಕೆಲವರು ಕಚೇರಿಯ ಕೆಲಸ ಮಾಡುತ್ತಾ ಈ ಶೋ ನೋಡುತ್ತಾರೆ. ಆದರೆ, ಇಲ್ಲೋರ್ವ ವ್ಯಕ್ತಿ ವೈದ್ಯರು ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡುತ್ತಿರುವಾಗಲೇ ಬಿಗ್​ ಬಾಸ್​ ವೀಕ್ಷಿಸಿದ್ದಾನೆ! ಇದು ವೈದ್ಯ ಲೋಕದಲ್ಲೇ ಭಾರೀ ಅಚ್ಚರಿ ಮೂಡಿಸಿದ ಶಸ್ತ್ರಚಿಕಿತ್ಸೆಗಳಲ್ಲೊಂದಾಗಿದೆ.

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ. ಪ್ರಸಾದ್​ ಎಂಬುವವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಸಾಮಾನ್ಯವಾಗಿ ಇಂತಹ ಸರ್ಜರಿ ಮಾಡುವಾಗ ರೋಗಿಯ ಪ್ರಜ್ಞೆ ತಪ್ಪಿಸಲಾಗುತ್ತದೆ. ಆದರೆ, ಈ ರೋಗಿ ತಾನು ಎಚ್ಚರವಾಗಿರುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲ, ಶಸ್ತ್ರ ಚಿಕಿತ್ಸೆ ವೇಳೆ ಬಿಗ್​ ಬಾಸ್​ ಕೂಡ ನೋಡಿದ್ದಾನೆ. ಬಿಗ್​ ಬಾಸ್​ ಶೋ ಮುಗಿದ ತಕ್ಷಣ ಅವತಾರ್​ ಸಿನಿಮಾ ವೀಕ್ಷಿಸಿದ್ದಾನೆ.

Youtube Video

ಸದ್ಯ, ಈ ಸುದ್ದಿ ಭಾರೀ ವೈರಲ್​ ಆಗಿದೆ. ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುವಾಗಲೇ ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಸದ್ಯ, ಬಿಗ್​ ಬಾಸ್​ 14ನೇ ಸೀಸನ್​ ನಡೆಯುತ್ತಿದೆ. ಕೊರೋನಾ ವೈರಸ್​ ಇರುವುದರಿಂದ ಹೆಚ್ಚು ಕಾಳಜಿ ವಹಿಸಿ ಈ ಶೋ ನಡೆಸಲಾಗುತ್ತಿದೆ.
Published by: Rajesh Duggumane
First published: November 23, 2020, 11:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories