TikTok Tragedy: ಟಿಕ್​ಟಾಕ್ ವಿಡಿಯೋ ಪೋಸ್ಟ್​ ಮಾಡಿದ್ದಕ್ಕೆ ಹೆಂಡತಿ ಪ್ರಾಣವನ್ನೇ ತೆಗೆದ ಪತಿರಾಯ!

ಕೊಲೆಯ ಹಿಂದಿನ ಕಾರಣವೇನು ಎಂಬುದರ ಬೆನ್ನತ್ತಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ನರಸಯ್ಯ ಮತ್ತು ಆತನ ಹೆಂಡತಿ ಸದಾ ಜಗಳವಾಡುತ್ತಿದ್ದರು. ತನ್ನ ಒಂಟಿತನವನ್ನು ಕಳೆಯಲು ಆಕೆ ಸದಾ ಟಿಕ್​ಟಾಕ್ ವಿಡಿಯೋಗಳನ್ನು ಮಾಡಿ ಅಪ್​ಲೋಡ್ ಮಾಡುತ್ತಿದ್ದಳು. ಇದಕ್ಕೆ ಗಂಡ ನರಸಯ್ಯ ವಿರೋಧಿಸುತ್ತಿದ್ದ.

Sushma Chakre | news18-kannada
Updated:November 28, 2019, 3:21 PM IST
TikTok Tragedy: ಟಿಕ್​ಟಾಕ್ ವಿಡಿಯೋ ಪೋಸ್ಟ್​ ಮಾಡಿದ್ದಕ್ಕೆ ಹೆಂಡತಿ ಪ್ರಾಣವನ್ನೇ ತೆಗೆದ ಪತಿರಾಯ!
ಸಾಂದರ್ಭಿಕ ಚಿತ್ರ
  • Share this:
ವಿಜಯವಾಡ (ನ. 28): ಮೊಬೈಲ್, ಇಂಟರ್ನೆಟ್​ನಿಂದಾಗಿ ಸಾಕಷ್ಟು ಎಷ್ಟೋ ಸಂಸಾರಗಳೇ ಮುರಿದುಬಿದ್ದ ಘಟನೆಗಳು ಸಾಕಷ್ಟಿವೆ. ಫೇಸ್​ಬುಕ್, ಇನ್​ಸ್ಟಾಗ್ರಾಂ, ವಾಟ್ಸಾಪ್​ ಸ್ಟೇಟಸ್​ , ಫೋಟೋಗಳಿಂದ ನೂರಾರು ಲವ್​ಸ್ಟೋರಿಗಳು ಬ್ರೇಕಪ್ ಆಗಿವೆ. ಆದರೆ, ಅದೆಲ್ಲದಕ್ಕಿಂತ ವಿಚಿತ್ರವಾದ ಘಟನೆ ಆಂಧ್ರಪ್ರದೇಶದ ವಿಜಯವಾಡದ ಬಳಿ ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬ ತನ್ನ ಹೆಂಡತಿ ಟಿಕ್​ಟಾಕ್ ವಿಡಿಯೋ ಮಾಡಿ ಹಾಕಿದಳೆಂದು ಕೋಪದಿಂದ ಆಕೆಯ ಜೀವವನ್ನೇ ತೆಗೆದಿದ್ದಾನೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಪೇಟೆ ಬಸ್​​ಸ್ಟಾಂಡ್ ಬಳಿ ಈ ಘಟನೆ ನಡೆದಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ನರಸರಪೇಟೆ ಡಿಎಸ್​ಪಿ ಎಂ. ವೀರ ರೆಡ್ಡಿ, ನರಸಯ್ಯ ಎಂಬ ವ್ಯಕ್ತಿ ಟಿಕ್​ಟಾಕ್​ ವಿಡಿಯೋ ಕಾರಣಕ್ಕೆ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 27 ವರ್ಷದ ನರಸಯ್ಯ ತನ್ನ ಅಣ್ಣ 35 ವರ್ಷದ ಸಿದ್ದಲ ಚಿನ್ನ ವೆಂಕಯ್ಯ ಜೊತೆ ಸೇರಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ನ. 17 ರ ರಾತ್ರಿ ಕೊಲೆ ನಡೆದಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಹೆಂಡತಿ ಸದಾ ಮೊಬೈಲ್ ಹಿಡಿದಿರುವುದನ್ನು ನೋಡಿ ಜಗಳವಾಡುತ್ತಿದ್ದ ವೆಂಕಯ್ಯ ಆಕೆಯ ಕುತ್ತಿಗೆಗೆ ಟವೆಲ್​ನಿಂದ ಬಿಗಿದು ಉಸಿರು ಕಟ್ಟಿಸಿದ್ದಾನೆ. ಅದಕ್ಕೆ ಆತನ ಅಣ್ಣ ಕೂಡ ಕೈಜೋಡಿಸಿದ್ದಾನೆ. ನಂತರ ಆಕೆಯ ಮೃತದೇಹವನ್ನು ಮನೆಯಿಂದ ಬೈಕ್​ನಲ್ಲಿ ಸಾಗಿಸಿ ಪೊಟ್ಲೂರು ಸ್ಮಶಾನದಲ್ಲಿ ಸುಟ್ಟಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಮಗ ತಲಾಖ್ ನೀಡಿದ ಕೆಲವೇ ಗಂಟೆಯಲ್ಲಿ ಸೊಸೆಗೆ ಗನ್​ ತೋರಿಸಿ ರೇಪ್ ಮಾಡಿದ ಮಾವ!

ಸ್ಮಶಾನದಲ್ಲಿ ಅರೆಬರೆ ಸುಟ್ಟಿದ್ದ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ ಕೂಡಲೆ ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಆಕೆಯ ಮೈಮೇಲಿದ್ದ ಒಡವೆಗಳಿಂದ ಆಕೆ ಯಾರು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆ ಸ್ಮಶಾನದ ಪಕ್ಕದಲ್ಲೇ ಇದ್ದ ಪೆಟ್ರೋಲ್​ ಬಂಕ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ನರಸಯ್ಯನ ಮೇಲೆ ಅನುಮಾನ ಉಂಟಾಗಿತ್ತು. ಆ ಕೊಲೆ ನಡೆದ ಹಿಂದಿನ ರಾತ್ರಿ 9.55ಕ್ಕೆ ಒಂದು ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಡುವಂತೆ ನರಸಯ್ಯ ಪೆಟ್ರೋಲ್ ಬಂಕ್​ನಲ್ಲಿ ಕೇಳಿದ್ದ. ಅಷ್ಟು ರಾತ್ರಿಯಲ್ಲಿ ಆ ಪ್ರದೇಶದಲ್ಲಿ ಯಾರೂ ಪೆಟ್ರೋಲ್ ಹಾಕಿಸಿಕೊಳ್ಳಲು ಬರುತ್ತಿರಲಿಲ್ಲ. ಹೀಗಾಗಿ, ಆತನ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಆತನ ಚಲನವಲನಗಳನ್ನು ಗಮನಿಸಿದ್ದರು. ನಂತರ ಆತನೇ ತನ್ನ ಹೆಂಡತಿಯನ್ನು ಕೊಲೆ ಮಾಡಿದವನು ಎಂಬುದು ಬಯಲಾಗಿತ್ತು.

ಇದನ್ನೂ ಓದಿ: ಗಂಡನ ಬರ್ತಡೇ​ ಪಾರ್ಟಿಯಲ್ಲಿ ಹೆಂಡತಿಗೆ ಕಾದಿತ್ತು ಶಾಕ್; ಕೈ, ಬಾಯಿ ಕಟ್ಟಿ ಅತ್ಯಾಚಾರ ನಡೆಸಿದ ಬೆಂಗಳೂರು ಯುವಕನ ಬಂಧನ

ಕೊಲೆಯ ಹಿಂದಿನ ಕಾರಣವೇನು ಎಂಬುದರ ಬೆನ್ನತ್ತಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ನರಸಯ್ಯ ಮತ್ತು ಆತನ ಹೆಂಡತಿ ಸದಾ ಜಗಳವಾಡುತ್ತಿದ್ದರು. ತನ್ನ ಹೆಂಡತಿ ತನಗೆ ನಿಯತ್ತಾಗಿಲ್ಲ ಎಂಬ ಅನುಮಾನ ನರಸಯ್ಯನಿಗೆ ಕಾಡುತ್ತಿತ್ತು. ಅಲ್ಲದೆ, ತನ್ನ ಒಂಟಿತನವನ್ನು ಕಳೆಯಲು ಆಕೆ ಸದಾ ಟಿಕ್​ಟಾಕ್ ವಿಡಿಯೋಗಳನ್ನು ಮಾಡಿ ಅಪ್​ಲೋಡ್ ಮಾಡುತ್ತಿದ್ದಳು. ಇದಕ್ಕೆ ಗಂಡ ನರಸಯ್ಯ ವಿರೋಧಿಸುತ್ತಿದ್ದ. ಗಂಡನಿಗೆ ಇಷ್ಟವಿಲ್ಲ ಎಂದು ಗೊತ್ತಾದ ನಂತರ ಆಕೆ ಹೆಚ್ಚೆಚ್ಚು ಟಿಕ್​ಟಾಕ್ ವಿಡಿಯೋಗಳನ್ನು ಮಾಡುತ್ತಿದ್ದಳು.
Loading...

ಇದೇ ಕಾರಣಕ್ಕೆ ಆಕೆಯನ್ನು ಹೊಡೆಯುತ್ತಿದ್ದ ನರಸಯ್ಯನಿಗೆ ವಿಚ್ಛೇದನ ನೀಡುವುದಾಗಿ ಆಕೆ ಹೆದರಿಸಿದ್ದಳು. ಹೀಗಾಗಿ, ನ. 17ರಂದು ಕೋಪದಲ್ಲಿ ಆಕೆಯನ್ನು ಕೊಲೆ ಮಾಡಿದ್ದ. ಆಂಧ್ರಪ್ರದೇಶದಲ್ಲಿ ಟಿಕ್​ಟಾಕ್​ ವಿಡಿಯೋ ಕಾರಣಕ್ಕೆ ನಡೆದ 2ನೇ ಕೊಲೆ ಇದಾಗಿದೆ. ನ. 7ರಂದು ಇದೇ ರೀತಿಯ ಪ್ರಕರಣವೊಂದರಲ್ಲಿ ಕಣಿಗಿರಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.

 
First published:November 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...