Andhra High Court ಕೆಂಗಣ್ಣಿಗೆ ಗುರಿಯಾದ IAS ಅಧಿಕಾರಿಗಳು, ಸಿಎಂಗೆ ಮೊರೆ! ಏನಿದು ಪ್ರಕರಣ?

ಇದು ಕೇವಲ ವ್ಯಕ್ತಿಗಳ ಪ್ರಶ್ನೆಯಲ್ಲ, ಸರಣಿ ಘಟನೆಗಳಿಂದಾಗಿ ಇಡೀ ವ್ಯವಸ್ಥೆಯೇ ಶಿಥಿಲವಾಗುತ್ತಿದ್ದು, ಇದನ್ನು ತುರ್ತಾಗಿ ಸರಿಪಡಿಸಬೇಕು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಒಬ್ಬ ಅಧಿಕಾರಿಗೆ ನೀಡುವ ಶಿಕ್ಷೆಯು ಸರ್ಕಾರಕ್ಕೆ ಶಿಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆಂಧ್ರಪ್ರದೇಶದಲ್ಲಿ (Andhra Pradesh) ಭಾರತೀಯ ಆಡಳಿಟಾತ್ಮಕ ಸೇವೆಯ ಅಧಿಕಾರಿಗಳು ಹಾಗೂ ಉಚ್ಛ ನ್ಯಾಯಾಲಯದ (High Court) ಮಧ್ಯೆ ಒಂದು ರೀತಿಯ ಹಗ್ಗುಜಗ್ಗಾಟದ ಸಂದರ್ಭ ಸೃಷ್ಟಿಯಾಗಿದ್ದು ನ್ಯಾಯಾಲಯ ಈಗ ಆ ಅಧಿಕಾರಿಗಳ ವಿರುದ್ಧ ಕೋರ್ಟ್ ಅವಹೇಳನಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಐಎ‍ಎಸ್ ಅಧಿಕಾರಿಗಳ (IAS officers) ಗುಂಪು ಬೇಸರಗೊಂಡಿದ್ದು, ಮುಖ್ಯಮಂತ್ರಿಗಳ ಮೊರೆ ಹೋಗಿರುವುದಾಗಿ ವರದಿಯಾಗಿದೆ. ವಕೀಲ ವೃತ್ತಿಯೊಂದಿಗಿನ ಘರ್ಷಣೆಯಿಂದ ಉಂಟಾಗಿರುವ ಈ ಸಂಘರ್ಷ ಸದ್ಯ ಐಎಎಸ್ ಶ್ರೇಣಿಯ ಅಧ್ಕಾರಿಗಳಿಗೆ ದಿಗ್ಭ್ರಮೆ ಉಂಟಾಗುವಂತೆ ಮಾಡಿದ್ದು, ಇದು ಈಗ ಒಟ್ಟಾರೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುವ ಅಪಾಯವನ್ನುಂಟುಮಾಡುತ್ತಿದೆ ಎನ್ನಲಾಗಿದೆ. ಆಂಧ್ರ ಪ್ರದೇಶ ಐಎಎಸ್ ಅಸೋಸಿಯೇಷನ್ ಹಿರಿಯ ಅಧಿಕಾರಿಗಳು ​​ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ತನ್ನ ವಾದವನ್ನು ಮಂಡಿಸಿ, ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ "ಸರಿಪಡಿಸುವ ಕ್ರಮ" ತೆಗೆದುಕೊಳ್ಳುವಂತೆ ಮತ್ತು ಕೇಡರ್‌ನ ಘನತೆಯನ್ನು ಕಾಪಾಡುವಂತೆ ಕೇಳಿಕೊಂಡಿದೆ.

  ನ್ಯಾಯಾಂಗ ನಿಂದನೆ ಸಾಬೀತು 

  ಮಾರ್ಚ್ 31 ರಂದು, ವಿಶೇಷ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಇಬ್ಬರು ಸೇರಿದಂತೆ ಎಂಟು ಐಎಎಸ್ ಅಧಿಕಾರಿಗಳು 'ನ್ಯಾಯಾಂಗ ನಿಂದನೆ' ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಅವರಿಗೆ ಒಂದು ವರ್ಷದವರೆಗೆ ಕಲ್ಯಾಣ ಹಾಸ್ಟೆಲ್‌ಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸಲು ಆದೇಶಿಸಲಾಯಿತು. ಅಲ್ಲದೆ, ಇತ್ತೀಚೆಗೆ, ಯುವ ಐಎಎಸ್ ಅಧಿಕಾರಿಯೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಅದರಲ್ಲಿ ಅವರ ಯಾವ ಪಾತ್ರವೂ ಇರಲಿಲ್ಲ ಎನ್ನಲಾಗಿದೆ.

  ಇದನ್ನೂ ಓದಿ: Contract for Separation: 3 ವರ್ಷ ನೋಡೋಣ, ಅಡ್ಜೆಸ್ಟ್ ಆಗಿಲ್ಲ ಅಂದ್ರೆ ಬೇರೆಬೇರೆ; ಗಂಡ-ಹೆಂಡತಿ ಅಗ್ರಿಮೆಂಟ್!

  ಕಳೆದ ವರ್ಷವೂ ಐದು ಅಧಿಕಾರಿಗಳನ್ನು ಕೋರ್ಟ್ ಅವಹೇಳನಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ವಿಧಿಸಲಾಯಿತಾದರೂ ತದನಂತರ ಅದನ್ನು ಅಮಾನತ್ತುಗೊಳಿಸಲಾಯಿತು. ಐಎಎಸ್ ಅಸೋಸಿಯೇಷನ್ ​​ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗೆ ತನ್ನ ವಾದವನ್ನು ಮಂಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದೆ. ಹಿರಿಯ ಐಎಎಸ್ ಅಧಿಕಾರಿಗಳ ನಿಯೋಗವು ಇತ್ತೀಚೆಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು ಸದ್ಯ ನಡೆಯುತ್ತಿರುವುದು ಒಳ್ಳೆಯದಲ್ಲ ಮತ್ತು "ನಿಸ್ಸಂಶಯವಾಗಿ ಯಾರೊಬ್ಬರ ಹಿತದೃಷ್ಟಿಯಿಂದಲೂ ಉತ್ತಮವಲ್ಲ" ಎಂದು ಹೇಳಿರುವುದಾಗಿ ವರದಿಯಾಗಿದೆ.

  ಸಿಎಂಗೆ ಮೊರೆ 

  ಇದು ಕೇವಲ ವ್ಯಕ್ತಿಗಳ ಪ್ರಶ್ನೆಯಲ್ಲ, ಸರಣಿ ಘಟನೆಗಳಿಂದಾಗಿ ಇಡೀ ವ್ಯವಸ್ಥೆಯೇ ಶಿಥಿಲವಾಗುತ್ತಿದ್ದು, ಇದನ್ನು ತುರ್ತಾಗಿ ಸರಿಪಡಿಸಬೇಕು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಒಬ್ಬ ಅಧಿಕಾರಿಗೆ ನೀಡುವ ಶಿಕ್ಷೆಯು ಸರ್ಕಾರಕ್ಕೆ ಶಿಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ. ಐಎಎಸ್ ಅಧಿಕಾರಿಗಳ ಮುಖ್ಯ ಕುಂದುಕೊರತೆ ಏನೆಂದರೆ, ಈ ರೀತಿಯ ಪ್ರಕರಣಗಳಲ್ಲಿ ನ್ಯಾಯಯುತ ವಾದಗಳನ್ನು ಮಂಡಿಸಲು ವಿಫಲರಾಗಿರುವ ಸರ್ಕಾರಿ ಅಭಿಯೋಜಕರ ಪಾತ್ರ ಎನ್ನಲಾಗಿದೆ. ಅವರ ವಾದ ಮಂಡಿಸುವ ವಿಫಲತೆಯಿಂದಾಗಿ ಅಹಿತಕರ ಫಲಿತಾಂಶಗಳು ಹೊರಬರಲು ಕಾರಣವಾಗುತ್ತಿವೆ ಎಂದು ಐಎಸ್‍ಎಸ್ ಅಧಿಕಾರಿಗಳು ದೂರಿದ್ದಾರೆನ್ನಲಾಗಿದೆ.

  ಸರ್ಕಾರಿ ವಕೀಲರು, ಪ್ರಾಸಂಗಿಕವಾಗಿ, ಸಂಪೂರ್ಣವಾಗಿ ರಾಜಕೀಯ ನೇಮಕಾತಿಗಳಾಗಿದ್ದು ಅರ್ಹತೆ ಒಂದು ಮಾನದಂಡವಾಗಿಲ್ಲ. ಪ್ರತಿ ನ್ಯಾಯಾಲಯದಲ್ಲಿ ಪ್ರಕರಣ ಆಲಿಸುವಿಕೆಗೆ ಹಾಜರಾಗಲು, ಸಂಬಂಧಪಟ್ಟ ಸರ್ಕಾರಿ ಇಲಾಖೆಯ ವತಿಯಿಂದ ಅವರಿಗೆ, ಪ್ರತಿ ಉಪಸ್ಥಿತಿಗೆ10,000 ರಿಂದ ಒಂದು ಲಕ್ಷ ರೂ. ವರೆಗೆ ಶುಲ್ಕ ದೊರೆಯುತ್ತದೆ.

  ಸರ್ಕಾರಿ ವಕೀಲರ ವೈಫಲ್ಯ

  "ಐಎಎಸ್ ಅಧಿಕಾರಿಗಳನ್ನು ನ್ಯಾಯಾಲಯದಿಂದ ಎತ್ತಂಗಡಿ ಮಾಡಿದ ಪ್ರತಿಯೊಂದು ಪ್ರಕರಣದಲ್ಲೂ ಸಂಬಂಧಪಟ್ಟ ಸರ್ಕಾರಿ ವಕೀಲರ ವೈಫಲ್ಯ ಎದ್ದು ಕಾಣುತ್ತಿದೆ. ಹಲವು ಪ್ರಕರಣಗಳಲ್ಲಿ ವಕೀಲರು ನ್ಯಾಯಾಧೀಶರ ಮುಂದೆ ಸ್ಪಷ್ಟವಾಗಿ ಸೋತಂತೆ ಕಾಣುತ್ತಾರೆ, ಇದರ ಪರಿಣಾಮವಾಗಿ ವ್ಯತಿರಿಕ್ತ ತೀರ್ಪು (ಅವಹೇಳನ ಪ್ರಕರಣಗಳಲ್ಲಿ). ನ್ಯಾಯಾಲಯದಿಂದ ಬರುತ್ತಿರುವುದಾಗಿ ಹೇಳುವ ಮೂಲಕ ಹಲವು ಐಎಎಸ್ ಅಧಿಕಾರಿಗಳು ಈ ಬಗ್ಗೆ ಗಮನ ಸೆಳೆದಿದ್ದಾರೆ.

  ಇದನ್ನೂ ಓದಿ: Karnataka-Maharashtra Border: "ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಹೋರಾಟ" ಎಂದ 'ಮಹಾ' ಡಿಸಿಎಂ, ಇತ್ತ ಮತ್ತೆ ಎಂಇಎಸ್ ಕಿರಿಕ್!

  ಒಂದು ಪ್ರಕರಣದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರು ನ್ಯಾಯಾಲಯದ ಎದುರು ನಿಂತಿದ್ದಾಗ, ನ್ಯಾಯಾಧೀಶರು "ನಾನು ಅವರನ್ನು (ಐಎಎಸ್ ಅಧಿಕಾರಿ) ಜೈಲಿಗೆ ಕಳುಹಿಸಬೇಕೇ ಅಥವಾ ಸಮಾಜ ಸೇವೆ ಮಾಡಲು ಹೇಳಬೇಕೇ?" ಎಂದು ಕೇಳಿದಾಗ ಸಂಬಂಧಿಸಿದ ಸರ್ಕಾರಿ ವಕೀಲ "ಮುಗುಳ್ನಕ್ಕು" ಸುಮ್ಮನೆ ನಿಂತಿದ್ದರೆನ್ನಲಾಗಿದೆ. ಯುವ ಐಎಎಸ್ ಅಧಿಕಾರಿಯ ವಿಚಾರವಾಗಿ, ನ್ಯಾಯಾಂಗ ನಿಂದನೆ ಪ್ರಕರಣವು ನ್ಯಾಯಾಧೀಶರ ಮುಂದೆ ಬಂದಾಗ, ಸಂಬಂಧಪಟ್ಟ ಸರ್ಕಾರಿ ವಕೀಲ ನ್ಯಾಯಾಲಯಕ್ಕೆ ಹಾಜರಾಗದೆ ಜೈಲು ಶಿಕ್ಷೆಗೆ ಕಾರಣವಾಯಿತೆನ್ನಲಾಗಿದೆ.

  ಮತ್ತೊಂದು ನಿದರ್ಶನದಲ್ಲಿ, ಸರ್ಕಾರಿ ವಕೀಲರು ಪ್ರಕರಣದ ವಿಚಾರಣೆಯನ್ನು ಬಿಟ್ಟುಬಿಟ್ಟಿದ್ದರಿಂದ ನ್ಯಾಯಾಧೀಶರು ವಿಶೇಷ ಮುಖ್ಯ ಕಾರ್ಯದರ್ಶಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು."ಇಂತಹ ನಿದರ್ಶನಗಳು ಹಲವಾರಿವೆ. ಜಿಪಿಗಳ (ಗವರ್ನ್ಮೆಂಟ್ ಪ್ಲೀಡರ್ಸ್) ಅಸಡ್ಡೆ ಮತ್ತು ಅದಕ್ಷತೆಯಿಂದಾಗಿ ನಾವು ನ್ಯಾಯಾಲಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಉನ್ನತ ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಹುಪಾಲು ಅವಹೇಳನ ಪ್ರಕರಣಗಳಲ್ಲಿ ಸರ್ಕಾರದ ಸ್ವಂತ ಹಣಕಾಸು ಇಲಾಖೆಯೇ ತಪ್ಪಾಗಿರುವುದರಿಂದ ಸಮಸ್ಯೆ ಕೇವಲ ವಕೀಲರದ್ದೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ.

  "ಗುತ್ತಿಗೆದಾರರಿಗೆ ಮತ್ತು ನಿವೃತ್ತ ನೌಕರರಿಗೆ ಬೇಕಾದ ಪಾವತಿ ಮಾಡುವಲ್ಲಿ ಹಣಕಾಸು ಇಲಾಖೆಯು ಅತಿಯಾದ ವಿಳಂಬ ನೀತಿ ಅನುಸರಿಸಿದ್ದರಿಂದ ನಿಂದನೆ ಪ್ರಕರಣಗಳು ಮತ್ತು ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ವಿಶೇಷ ಮುಖ್ಯ ಕಾರ್ಯದರ್ಶಿ (ಹಣಕಾಸು) ಸ್ವತಃ ಹಲವಾರು ಬಾರಿ ಈ ಪರಿಸ್ಥಿತಿಯನ್ನು ಅನುಭವಿಸಿದ್ದರೂ ಸಹ ಇಲ್ಲಿಯವರೆಗೂ ಏನೂ ಬದಲಾಗಿಲ್ಲ" ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಧಕ್ಕೆ

  ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿರುವ ಐಎ‍ಎಸ್ ಅಧಿಕಾರಿಗಳ ನಿಯೋಗವು ಅವರನ್ನು ಕುರಿತು ಇಅಕ್ಷಣವೇ ಇದನ್ನು ಪರಿಹರಿಸುವಂತೆ ಕೇಳಿಕೊಂಡಿದ್ದು ಇಲ್ಲವಾದಲ್ಲಿ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಧಕ್ಕೆಯಾಗಿ ಅದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ವಿವರಿಸಿದೆ. ಅಧಿಕಾರಿಗಳು ಅವಹೇಳನವನ್ನು ಎದುರಿಸುತ್ತಿರುವ ಪ್ರಕರಣಗಳಲ್ಲಿ, ಪರಿಣಾಮಕಾರಿ ವಾದಕ್ಕಾಗಿ ಖಾಸಗಿ ವಕೀಲರನ್ನು ನಿಯೋಜಿಸಿಕೊಳ್ಳಲು ಮತ್ತು ದಂಡದ ಕ್ರಮವನ್ನು ತಪ್ಪಿಸಲು ಸರ್ಕಾರದ ಮಧ್ಯಸ್ಥಿಕೆಯನ್ನು ನಾವು ಬಯಸುತ್ತೇವೆ. ನೆರೆಯ ತೆಲಂಗಾಣ ಸರ್ಕಾರವು ಅಂತಹ ಪ್ರಕರಣಗಳಿಗೆ ವಿಶೇಷ ಬಜೆಟ್ ಅನ್ನು ಮೀಸಲಿಟ್ಟಿದೆ ಮತ್ತು ನಮಗೂ ಸರ್ಕಾರದ ಇದೇ ರೀತಿಯ ಆರ್ಥಿಕ ಬೆಂಬಲ ಬೇಕು. ' ಎಂದು ನಿಯೋಗ ಸಿಎಂಗೆ ತಿಳಿಸಿದೆ.

  ಇತರ ವಿಷಯಗಳ ಜೊತೆಗೆ, ನಿಯಮಿತ ಸಾಮಾಜಿಕ ಕೂಟಗಳ ಮೂಲಕ ನ್ಯಾಯಾಧೀಶರೊಂದಿಗೆ ಅನೌಪಚಾರಿಕ ಮಾತುಕತೆಗಾಗಿ ಸರ್ಕಾರವು ಪುನಃ ಬಾಗಿಲು ತೆರೆಯುವಂತೆ ಅಧಿಕಾರಿಗಳು ಸಲಹೆ ನೀಡಿದರು.

  "ಕಳೆದ ಮೂರು ವರ್ಷಗಳಲ್ಲಿ ಅಂತಹ ಮಾತುಕತೆಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಆಡಳಿತ ಪಕ್ಷವು ತೆಗೆದುಕೊಂಡ ಘರ್ಷಣೆಯ ನಿಲುವು ಕಂದಕವನ್ನು ಮಾತ್ರ ವಿಸ್ತರಿಸಿದೆ, ಅದನ್ನು ಈಗ ಜೋಡಿಸಬೇಕಾದ ಸೇತುವೆಯಂತೆ ಮಾಡಬೇಕಾಗಿದೆ" ಎಂದು ಉನ್ನತ ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿದಾಗ ಅವರು ಅಧಿಕಾರಿ ವರ್ಗದ ಅಭಿಪ್ರಾಯಕ್ಕೆ ಸಮ್ಮತಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
  Published by:Kavya V
  First published: