Andhra Home Minister: ಹಣ ದೋಚುವಾಗ ಮಹಿಳೆ ಅಡ್ಡ ಬಂದಿದ್ದರಿಂದಲೇ ಅತ್ಯಾಚಾರ ನಡೆದಿದೆ: ಆಂಧ್ರ ಗೃಹ ಸಚಿವೆ ವಿವಾದಾತ್ಮಕ ಹೇಳಿಕೆ

ಹಣವನ್ನು ಕಾಪಾಡಿಕೊಳ್ಳಲು ಮಹಿಳೆ ಮಧ್ಯಪ್ರವೇಶಿಸಿದಾಗ ಅತ್ಯಾಚಾರ ನಡೆದಿದೆ. ಆರೋಪಿಗಳಿಗೆ ರೇಪ್​​ ಮಾಡುವ ಉದ್ದೇಶ ಇರಲಿಲ್ಲ, ಅನಿರೀಕ್ಷಿತವಾಗಿ ಅತ್ಯಾಚಾರ ನಡೆದಿದೆ ಎಂದು ಹೇಳುವ ಮೂಲಕ ವಿವಾದಕ್ಕೊಳಗಾಗಿದ್ದಾರೆ.

ಗೃಹ ಸಚಿವೆ ತಾನೆತಿ ವನಿತಾ

ಗೃಹ ಸಚಿವೆ ತಾನೆತಿ ವನಿತಾ

  • Share this:
ಅಮರಾವತಿ: ಆಂಧ್ರಪ್ರದೇಶದ ನೂತನ ಗೃಹ ಸಚಿವೆ ತಾನೆತಿ ವನಿತಾ (Andhra Pradesh Home Minister Taneti Vanitha) ಅವರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ (Rape) ಘಟನೆಗಳ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಮೇ 1 ರಂದು 25 ವರ್ಷದ ಗರ್ಭಿಣಿ (Pregnant) ಮೇಲೆ ರೇಪಲ್ಲೆ ರೈಲು ನಿಲ್ದಾಣದಲ್ಲಿ ಸಾಮೂಹಿಕ ಅತ್ಯಾಚಾರವು ಉದ್ದೇಶಿತ ಘಟನೆ ಅಲ್ಲ. ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸಿದೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಹಿಂದೆ, ವೈಜಾಗ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಗುವಿನ ಸುರಕ್ಷತೆಯ ಜವಾಬ್ದಾರಿ ತಾಯಿಯದಾಗಿರುತ್ತದೆ ಎಂಬ ಅವರ ಹೇಳಿಕೆಯೂ ಅನೇಕರ ಹುಬ್ಬೇರಿಸಿತ್ತು.

ಇದನ್ನೂ ಓದಿ: Minor Girls: ಶಾಲೆಯಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಕಳಚಿ ಲೈಂಗಿಕ ಕಿರುಕುಳ!

ಅಡ್ಡ ಬಂದಿದ್ದರಿಂದಲೇ ಅತ್ಯಾಚಾರ ಆಗಿದೆ

ಅತ್ಯಾಚಾರದ ಘಟನೆಗಳಿಗೆ ಮಾನಸಿಕ ಪರಿಸ್ಥಿತಿ ಮತ್ತು ಬಡತನ ಎಂದು ದೂಷಿಸಿದರು. ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಪುರುಷರು ಕುಡಿದು ಹಣ ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರಿಂದ ಇದು  ಅನಿರೀಕ್ಷಿತ ರೀತಿಯಲ್ಲಿ ಸಂಭವಿಸಿದೆ. ಹಣವನ್ನು ಕಾಪಾಡಿಕೊಳ್ಳಲು ಮಹಿಳೆ ಮಧ್ಯಪ್ರವೇಶಿಸಿದಾಗ ಅತ್ಯಾಚಾರ ನಡೆದಿದೆ. ಆರೋಪಿಗಳಿಗೆ ರೇಪ್​​ ಮಾಡುವ ಉದ್ದೇಶ ಇರಲಿಲ್ಲ, ಅನಿರೀಕ್ಷಿತವಾಗಿ ಅತ್ಯಾಚಾರ ನಡೆದಿದೆ ಎಂದು ಹೇಳುವ ಮೂಲಕ ವಿವಾದಕ್ಕೊಳಗಾಗಿದ್ದಾರೆ.

ಪೊಲೀಸರು ಇರಲಿಲ್ಲ ಅಂತ ಹೇಳಲು ಬರಲ್ಲ

ಪತಿಯ ಮೇಲಿನ ಹಲ್ಲೆಯನ್ನು ತಡೆಯಲು ಮಹಿಳೆ ಪ್ರಯತ್ನಿಸಿದಳು, ಆಗ ಅನಿರೀಕ್ಷಿತ ರೀತಿಯಲ್ಲಿ ಕೆಲವು ಘಟನೆಗಳು ಸಂಭವಿಸಿದವು, ಸಮರ್ಪಕ ರೈಲ್ವೇ ಪೋಲೀಸ್ ಪಡೆಗಳು ಲಭ್ಯವಿಲ್ಲದಿರುವುದನ್ನು ದೂಷಿಸಲಾಗುವುದಿಲ್ಲ, ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Poison Whiskey: ವಿಸ್ಕಿ ಕುಡಿಸಿ 4 ವರ್ಷದ ಮಗುವನ್ನೇ ಕೊಂದ ಅಮ್ಮ, ಅಜ್ಜಿ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ

ಗೃಹ ಸಚಿವೆ ಹೇಳಿಕೆಗೆ ಪ್ರತಿಪಕ್ಷಗಳು ಗರಂ

ಪ್ರತಿಪಕ್ಷ ತೆಲುಗು ದೇಶಂ ಪಕ್ಷವು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗಳು ಬೇಜವಾಬ್ದಾರಿ ಎಂದು ಬಣ್ಣಿಸಿದೆ. ಎರಡು ವಾರಗಳಲ್ಲಿ ಆಂಧ್ರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಎರಡು ಅತ್ಯಾಚಾರ ಘಟನೆಗಳು ನಡೆದಿವೆ. ಏಪ್ರಿಲ್ 16 ರಂದು ಗುರಜಾಲ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅಂದು ಏನಾಯ್ತು?

ರೈಲು ನಿಲ್ದಾಣದಲ್ಲಿ ರಾತ್ರಿ ಗಂಡ ಮತ್ತು ಮಕ್ಕಳೊಂದಿಗೆ ರೈಲು ಹತ್ತಲು ಕಾದು ಕುಳಿತಿದ್ದ ಗರ್ಭಿಣಿ ಮೇಲೆ ಮೂವರು ದುರುಳರು ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಗಂಡ ಮತ್ತು ಮೂವರು ಮಕ್ಕಳೊಂದಿಗೆ ಮಹಿಳೆ ಇದ್ದಾಗ ಕುಡಿದ ಮತ್ತಿನಲ್ಲಿ ಬಂದ ಮೂವರು ಆಕೆಯನ್ನು ಎಳೆದೊಯ್ದು ನೀಚ ಕೃತ್ಯ ಎಸಗಿದ್ದಾರೆ. ಈ ಕೃತ್ಯದಲ್ಲಿ ಓರ್ವ ಅಪ್ರಪ್ತಾ ಬಾಲಕನೂ ಕೂಡ ಭಾಗಿಯಾಗಿದ್ದಾನೆ. ಈ ವೇಳೆ ಆಕೆಯ ಗಂಡನಿಗೆ ಗಂಭೀರವಾಗಿ ಥಳಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಾಯಕ್ಕಾಗಿ ಆತ ಕೂಗಲು ಯತ್ನಿಸಿದರೂ ವಿಫಲನಾಗಿದ್ದಾನೆ. ಶನಿವಾರ ಕುಟುಂಬವು ಕೆಲಸ ಹುಡುಕಿಕೊಂಡು ಗುಂಟೂರಿನಿಂದ ಕೃಷ್ಣಾ ಜಿಲ್ಲೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರಕಾಶಂ ಜಿಲ್ಲೆಯ ಇವರು ರೈಲಿಗಾಗಿ ನಿಲ್ದಾಣದಲ್ಲಿ ಕಾದಿದ್ದರು. ಶನಿವಾರ ರಾತ್ರಿ, ಗಂಡ ಹೆಂಡತಿ ಮೂವರು ಮಕ್ಕಳು ರೈಲು ನಿಲ್ದಾಣದ ಬೆಂಚ್ ಮೇಲೆ ಮಲಗಿದ್ದಾರು. ಈ ವೇಳೆ ಕೃತ್ಯ ಎಸಗಿದ ಮೂವರಲ್ಲಿ ಒಬ್ಬ ವ್ಯಕ್ತಿ ಬಂದು ಸಂತ್ರಸ್ತೆ ಗಂಡನನ್ನು ಎಚ್ಚರಿಸಿದ್ದಾನೆ. ಕುಡಿದಿದ್ದ ಈತ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಂತ್ರಸ್ತೆ ಅಡ್ಡ ಬಂದ ಹಿನ್ನಲೆ ಆಕೆಯನ್ನು ಎಳೆದೊಯ್ದಿದ್ದಾರೆ. ಈ ವೇಳೆ ಗಂಡ ಪೊಲೀಸರ ಸಹಾಯಕ್ಕಾಗಿ ಅಂಗಲಾಚಿದ್ದಾನೆ.
Published by:Kavya V
First published: