• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Andhra Pradesh:10ನೇ ತರಗತಿ ಪಾಸಾಗಿ ವಿವಾಹವಾದವರಿಗೆ ಬಂಪರ್, ಒಂದು ಲಕ್ಷ ರೂಪಾಯಿ ಸಹಾಯಧನ ಬಿಡುಗಡೆ ಮಾಡಿದ ಜಗನ್!​

Andhra Pradesh:10ನೇ ತರಗತಿ ಪಾಸಾಗಿ ವಿವಾಹವಾದವರಿಗೆ ಬಂಪರ್, ಒಂದು ಲಕ್ಷ ರೂಪಾಯಿ ಸಹಾಯಧನ ಬಿಡುಗಡೆ ಮಾಡಿದ ಜಗನ್!​

ಸಾಂದರ್ಭಿಕ ಸುದ್ದಿ

ಸಾಂದರ್ಭಿಕ ಸುದ್ದಿ

ಶುಕ್ರವಾರ ವರ್ಚುವಲ್​ ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಯೋಜನೆಯ 38 ಕೋಟಿ ರೂ. ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಜಗನ್​, ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು, ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಮತ್ತು ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಮತ್ತು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಮುಂದೆ ಓದಿ ...
  • Share this:

ಅಮರಾವತಿ: ಆಂಧ್ರ ಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ (Jagan Mohan Reddy) ಶುಕ್ರವಾರ ವೈಎಸ್​ಆರ್​ ಕಲ್ಯಾಣಮಸ್ತು (YSR Kalyanamasthu) ಮತ್ತು ವೈಎಸ್‌ಆರ್ ಶಾದಿ ತೋಫ (YSR Shaadi Tohfa) ಯೋಜನೆಯ ಭಾಗವಾಗಿ 2022ರ ಅಕ್ಟೋಬರ್​-ಡಿಸೆಂಬರ್​ ಅವಧಿಯಲ್ಲಿ ವಿವಾಹವಾದ ಬಡ ಹೆಣ್ಣು ಮಕ್ಕಳಿಗೆ 38.18 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಒಟ್ಟು 4,534 ಅರ್ಹ ಫಲಾನುಭವಿಗಳು ತಲಾ ಒಂದು ಲಕ್ಷ ರೂಪಾಯಿಗಳನ್ನ ಪಡೆಯಲಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು, ಅಂಗವಿಕಲರು ಮತ್ತು ಕಟ್ಟಡ ಕಾರ್ಮಿಕ ವರ್ಗಕ್ಕೆ ಸೇರಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈ ಮೊತ್ತ ನೇರವಾಗಿ ಜಮಾ ಆಗಲಿದೆ ಎಂದು ತಿಳಿದುಬಂದಿದೆ.


ಶುಕ್ರವಾರ ವರ್ಚುವಲ್​ ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಈ ಮೊತ್ತವನ್ನು ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಜಗನ್​, ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು, ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಮತ್ತು ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಮತ್ತು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.


10ನೇ ತರಗತಿ ಉತ್ತೀರ್ಣ ಕಡ್ಡಾಯ


ಶಿಕ್ಷಣವೇ ನಮ್ಮ ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ ಎಂದು ನಮ್ಮ ಸರ್ಕಾರ ಬಲವಾಗಿ ನಂಬಿದೆ. ಈ ಯೋಜನೆಯನ್ನು ಪಡೆಯಲು 10ನೇ ತರಗತಿ ಕಡ್ಡಾಯವಾಗಿ ತೇರ್ಗಡೆಯಾಗಿರಬೇಕು. ಸಮಾಜದಲ್ಲಿ ಅಶಿಕ್ಷಿತರಿದ್ದರೆ ಯಶಸ್ಸು ಸಾಧಿಸಲು ಅವಕಾಶವಿಲ್ಲ. ದುರ್ಬಲ ವರ್ಗದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಈ ಷರತ್ತನ್ನು ವಿಧಿಸಲಾಗಿದೆಷ. ಮುಂದಿನ ತ್ರೈಮಾಸಿಕದಿಂದ ಅರ್ಹ ಹೆಣ್ಣುಮಕ್ಕಳ ತಾಯಂದಿರ ಬ್ಯಾಂಕ್ ಖಾತೆಗೆ ಈ ಯೋಜನೆಯ ಮೊತ್ತವನ್ನು ಜಮಾ ಮಾಡಲಾಗುವುದು. ಇದನ್ನು ಗಮನಿಸಿದರೆ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ತೇಜಿಸುತ್ತಾರೆ ಎಂದು ಜಗನ್​ ತಿಳಿಸಿದ್ದಾರೆ.


ಇದನ್ನೂ ಓದಿ: Andhra Pradesh: ಅಮರಾವತಿಯಲ್ಲ, ಆಂಧ್ರ ಪ್ರದೇಶಕ್ಕೆ ಈಗ ಹೊಸ ರಾಜಧಾನಿ! ಸಿಎಂ ಜಗನ್‌ ಮೋಹನ್‌ ರೆಡ್ಡಿಯಿಂದ ಘೋಷಣೆ


ಟಿಡಿಪಿ ಸರ್ಕಾರ ವಿಫಲ


17,709 ಫಲಾನುಭವಿಗಳಿಗೆ 68.68 ಕೋಟಿ ರೂಪಾಯಿಗಳನ್ನು ಪಾವತಿಸಲು ವಿಫಲವಾಗಿ 2018ರಲ್ಲಿ ಈ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಆದರೆ ವೈಎಸ್‌ಆರ್‌ಸಿಪಿ ಸರ್ಕಾರವು ವೈಎಸ್‌ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫಾವನ್ನು ಸಂಪೂರ್ಣ ಪಾರದರ್ಶಕವಾಗಿ ಜಾರಿಗೊಳಿಸುತ್ತಿದೆ ಎಂದು ರೆಡ್ಡಿ ತಿಳಿಸಿದ್ದಾರೆ.


ಸಹಾಯಧನ ಒಂದು ಲಕ್ಷಕ್ಕೆ ಹೆಚ್ಚಳ


ಟಿಡಿಪಿ ಆಡಳಿತದಲ್ಲಿ ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳು ಕ್ರಮವಾಗಿ 40,000, 50,000, 35,000 ಮತ್ತು 50,000 ರೂ.ಗಳನ್ನು ಪಡೆಯುತ್ತಿದ್ದರು. ವೈಎಸ್‌ಆರ್‌ಸಿಪಿ ಸರ್ಕಾರ ಎಸ್​ಸಿ, ಎಸ್​ಟಿ, ಅಲ್ಪ ಸಂಖ್ಯಾತರಿಗೆ ತಲಾ ಒಂದು ಲಕ್ಷರೂಗಳಿಗೆ ಏರಿಸಿದೆ. ಹಿಂದುಳಿದ ವರ್ಗಗಳಿಗೆ 35 ಸಾವಿರದಿಂದ 50 ಸಾವಿರ ರೂಗಳಿಗೆ ಏರಿಸಲಾಗಿದೆ. ಟಿಡಿಪಿ ಆಡಳಿತದಲ್ಲಿ ವಿಕಲಚೇತನ ಫಲಾನುಭವಿಗಳಿಗೆ 1,00,00 ನೀಡಲಾಗುತ್ತಿತ್ತು, ಈಗ ಅದನ್ನು 1,50,000ಕ್ಕೆ ಹಾಗೂ ಕಟ್ಟಡ ಕಾರ್ಮಿಕರಿಗೆ 20,000 ದಿಂದ 40,000 ರೂಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಹೆಚ್ಚಳ


ಅದೇ ರೀತಿ ಅಂತರ್ಜಾತಿ ವಿವಾಹಕ್ಕೆ ಆಯ್ಕೆಯಾದ ಎಸ್‌ಸಿ, ಎಸ್‌ಟಿ ಸಮುದಾಯದವರ ಪ್ರೋತ್ಸಾಹಧನ 75 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಹಿಂದುಳಿದ ವರ್ಗಗಳ ಫಲಾನುಭವಿಗಳ ಪ್ರೋತ್ಸಾಹಧನ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಜಗನ್​ ತಿಳಿಸಿದರು.


ಇದೇ ಸಂದರ್ಭದಲ್ಲಿ ಜಗನ್​ ಮೋಹನ್ ರೆಡ್ಡಿ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ವೈಎಸ್‌ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫದ ಜೊತೆಗೆ ಅಮ್ಮ ವೋಡಿ, ನಾಡು-ನೀಡು, ವಿದ್ಯಾ ದೀವೆನ, ವಸತಿ ದೀವೆನ, ಜಗನಣ್ಣ ಗೋರುಮುದ್ಧ ಯೋಜನೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಲಿದೆ ಎಂದರು. ಶಾಲೆಗಳಲ್ಲಿ ಡ್ರಾಪ್ಔಟ್ ಪ್ರಮಾಣವನ್ನು ರಾಜ್ಯವು ತೀವ್ರವಾಗಿ ಕಡಿಮೆ ಮಾಡುತ್ತದೆ ಮತ್ತು ದಾಖಲಾತಿಯನ್ನು ಹೆಚ್ಚಿಸಲು ಶ್ರಮಿಸುತ್ತದೆ ಎಂದು ತಿಳಿಸಿದರು.

Published by:Rajesha M B
First published: