• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Accident| ಯೋಧನ ಮೃತದೇಹವನ್ನು ಹಸ್ತಾಂತರಿಸಿ ಹಿಂದಿರುಗುತ್ತಿದ್ದಾಗ ಅಪಘಾತ; ಆಂಧ್ರಪ್ರದೇಶದ 4 ಪೊಲೀಸರು ಮೃತ

Accident| ಯೋಧನ ಮೃತದೇಹವನ್ನು ಹಸ್ತಾಂತರಿಸಿ ಹಿಂದಿರುಗುತ್ತಿದ್ದಾಗ ಅಪಘಾತ; ಆಂಧ್ರಪ್ರದೇಶದ 4 ಪೊಲೀಸರು ಮೃತ

ಅಪಘಾತಕ್ಕೊಳಗಾಗಿರುವ ಆಂಧ್ರಪ್ರದೇಶದ ಪೊಲೀಸರ ವಾಹನ.

ಅಪಘಾತಕ್ಕೊಳಗಾಗಿರುವ ಆಂಧ್ರಪ್ರದೇಶದ ಪೊಲೀಸರ ವಾಹನ.

ಶ್ರೀಕಾಕುಳಂಗೆ ತೆರಳುತ್ತಿದ್ದ ಪೊಲೀಸ್‌ ಜೀಪ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಎಸ್​ಐ ಜೆ. ಕೃಷ್ಣುಡು, ಹೆಡ್​ ಕಾನ್ಸ್​ಟೇಬಲ್​ಗಳಾದ ವೈ ಬಾಬು ರಾವ್​, ಟಿ. ಆಂಟೋನಿ ಮತ್ತು ಚಾಲಕ ಪಿ. ಜನಾರ್ಧನ ರಾವ್​ ಎಂದು ಗುರುತಿಸಲಾಗಿದೆ.

  • Share this:

    ಶ್ರೀಕಾಕುಲಂ (ಆಗಸ್ಟ್​ 24); ದೇಶದ ಗಡಿಯಲ್ಲಿ ಮೃತಪಟ್ಟ ಸೈನಿಕನ (indian soldier) ಪಾರ್ಥೀವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿ ಹಿಂದಿರುಗಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ (Accident) ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ ಒಟ್ಟು ನಾಲ್ಕು ಜನ ಪೊಲೀಸರು ಮೃತಪಟ್ಟಿರು ಧಾರುಣ ಘಟನೆ ಇಂದು ಆಂಧ್ರ ಪ್ರದೇಶದ (Andhra Pradesh) ಶ್ರೀಕಾಕುಲಂ (Srikakulam) ನಲ್ಲಿ ನಡೆದಿದೆ. ಜಿಲ್ಲೆಯ ಭೈರಿ ಸಾರಂಗಪುರಂನಲ್ಲಿರುವ ಯೋಧನ ಕುಟುಂಬಕ್ಕೆ ಯೋಧನ ಮೃತದೇಹ ಹಸ್ತಾಂತರಿಸಿದ ಬಳಿಕ ಪೊಲೀಸ್‌ ಸಿಬ್ಬಂದಿ ಹಿಂದಿರುಗು ತ್ತಿದ್ದರು. ಈ ವೇಳೆ ಅವರ ಚಲಿಸುತ್ತಿದ್ದ ಕಾರು ಪಲಸಾ ಬಳಿಯಿರುವ ಹೆದ್ದಾರಿ-16 ರಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಓರ್ವ ಸಬ್​ ಇನ್ಸ್​ಪೆಕ್ಟರ್​ ಮತ್ತು ಮೂವರು ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಆಂಧ್ರ ಪ್ರದೇಶ ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.


    ಶ್ರೀಕಾಕುಳಂಗೆ ತೆರಳುತ್ತಿದ್ದ ಪೊಲೀಸ್‌ ಜೀಪ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಎಸ್​ಐ ಜೆ. ಕೃಷ್ಣುಡು, ಹೆಡ್​ ಕಾನ್ಸ್​ಟೇಬಲ್​ಗಳಾದ ವೈ ಬಾಬು ರಾವ್​, ಟಿ. ಆಂಟೋನಿ ಮತ್ತು ಚಾಲಕ ಪಿ. ಜನಾರ್ಧನ ರಾವ್​ ಎಂದು ಗುರುತಿಸಲಾಗಿದೆ.


    ಇದನ್ನೂ ಓದಿ: Love U Rachu| ಲವ್ ಯು ರಚ್ಚು ಸಿನಿಮಾ ದುರಂತ; ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ


    ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಸೂಚನೆ ನೀಡಿರುವುದಾಗಿ ಪೊಲೀಸ್​ ಮಹಾನಿರ್ದೇಶಕ ಡಿ. ಗೌತಮ್​ ಸಾವಂಗ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾಲ್ವರು ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ, ಮೃತರ ಕುಟುಂಬದ ನೆರವಿಗೆ ಇಲಾಖೆ ನಿಲ್ಲಲಿದೆ ಎಂದು ಡಿಜಿಪಿ ಸಾವಂಗ್​ ಆಶ್ವಾಸನೆ ನೀಡಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:MAshok Kumar
    First published: