BJPಗೆ ಮತ ಹಾಕಿ, ಬರೀ 50 ರೂಪಾಯಿಗೆ ಮದ್ಯ ಸಿಗುವಂತೆ ನಾವು ಮಾಡ್ತೀವಿ: ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ

ಬಿಜೆಪಿಗೆ ಮತ ಹಾಕಿದರೆ ಉತ್ತಮ ಗುಣಮಟ್ಟದ ಮದ್ಯವನ್ನು ಕೇವಲ 70 ರೂಪಾಯಿ ಬೆಲೆಗೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇದರಿಂದ ಆದಾಯ ಜಾಸ್ತಿಯಾದರೆ ಒಂದು ಕ್ವಾಟರ್​ಗೆ 50 ರೂಪಾಯಿ ಕೊಡಲೂ ನಾವು ಸಿದ್ಧ ಎಂದು ಸೋಮು ವೀರರಾಜು ತಿಳಿಸಿದರು

ಸೋಮು ವೀರರಾಜು

ಸೋಮು ವೀರರಾಜು

 • Share this:
  ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರು (Political Leaders) ಜನರಿಗೆ ಭರವಸೆ ನೀಡುವುದು, ಆಮಿಷ ಒಡ್ಡುವುದು ಎಲ್ಲವೂ ಸರ್ವೇ ಸಾಮಾನ್ಯ. ಅನೇಕ ಬಾರಿ ಮತಗಳನ್ನು ಸೆಳೆಯಲು ರಾಜಕೀಯ ನಾಯಕರು ಏನೆಲ್ಲಾ ಆಮಿಷಗಳನ್ನು ಒಡ್ಡುತ್ತಾರೆ ಎಂದರೆ ಜನ ಒಂದು ಕ್ಷಣ ಇದು ನಿಜವಾ ಸುಳ್ಳಾ ಎಂದು ಆಲೋಚನೆ ಮಾಡಬೇಕು, ಹಾಗಿರುತ್ತೆ. ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ (AP BJP President) ಸೋಮು ವೀರರಾಜು (Somu Veerraju) ಜನಸಾಮಾನ್ಯರಿಗೆ ಇಂಥದ್ದೇ ಒಂದು ಆಮಿಷ ಒಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಮಂಗಳವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜನರಿಗೆ ಈ ರೀತಿಯ ಭರವಸೆ ನೀಡಿದ್ದಾರೆ ಸೋಮು ವೀರರಾಜು. ಸದ್ಯ ಇವರ ಮಾತುಗಳು ಭಾರೀ ಚರ್ಚೆಯಲ್ಲಿವೆ.

  ರಾಜ್ಯ ಸರ್ಕಾರ ಈಗ ನೀಡುತ್ತಿರುವ ಮದ್ಯ ಬಹಳ ಕಳಪೆ ಮಟ್ಟದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಉತ್ತಮ ಗುಣಮಟ್ಟದ ಮದ್ಯವನ್ನು ಬಹಳ ಕಡಿಮೆ ಬೆಲೆಗೆ ಕೊಡುತ್ತೇವೆ. ಈಗ ಪ್ರತಿಯೊಬ್ಬ ವ್ಯಕ್ತಿಯೂ ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ಮದ್ಯಕ್ಕಾಗಿಯೇ ಖರ್ಚು ಮಾಡುತ್ತಾರೆ. ಇದು ಕೂಡಾ ಸರ್ಕಾರವೇ ನಾನಾ ಸ್ಕೀಂಗಳ ಹೆಸರಿನಲ್ಲಿ ನೀಡುತ್ತಿದೆ.

  ಒಂದು ಕೋಟಿ ಮತ ಬೇಕಾಗಿದೆ

  ಅಂಕಿ ಅಂಶಗಳ ಪ್ರಕಾರ ಆಂಧ್ರ ಪ್ರದೇಶದಲ್ಲಿ ಒಂದು ಕೋಟಿ ಜನ ಮದ್ಯಪಾನ ಮಾಡುತ್ತಾರೆ. ಈ ಒಂದು ಕೋಟಿ ಜನರೂ ಬಿಜೆಪಿಗೆ ವೋಟು ಹಾಕಿದರೆ ಉತ್ತಮ ಗುಣಮಟ್ಟದ ಮದ್ಯವನ್ನು ಕೇವಲ 70 ರೂಪಾಯಿ ಬೆಲೆಗೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇದರಿಂದ ಆದಾಯ ಜಾಸ್ತಿಯಾದರೆ ಒಂದು ಕ್ವಾಟರ್​ಗೆ 50 ರೂಪಾಯಿ ಕೊಡಲೂ ನಾವು ಸಿದ್ಧ ಎಂದು ಸೋಮು ವೀರರಾಜು ತಿಳಿಸಿದರು. ಆಂಧ್ರ ಪ್ರದೇಶದಲ್ಲಿ ಒಂದು ಕ್ವಾಟರ್ ಮದ್ಯದ ಬೆಲೆ ಈಗ 200 ರೂಪಾಯಿಗಿಂತಲೂ ಹೆಚ್ಚಿದೆ.

  2024ರ ಚುನಾವಣೆಯಲ್ಲಿ ಒಂದು ಕೋಟಿ ಜನರು ಬಿಜೆಪಿಗೆ ವೋಟ್ ಹಾಕಿದ್ರೆ ಇಡೀ ರಾಜ್ಯಕ್ಕೇ ಅನುಕೂಲವಾಗುತ್ತದೆ ಎಂದು ಸೋಮು ವೀರರಾಜು ಹೇಳಿದರು. ಈಗ ರಾಜ್ಯ ಸರ್ಕಾರ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರಾಡಿದ ಈ ಮಾತು ವ್ಯಾಪಕ ಟೀಕೆಗೆ ಗುರಿಯಾಗಿದೆ.

  ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದ 

  ಇನ್ನು ರಾಜ್ಯ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡಾ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿಕೊಂಡಿದ್ದರು. ಪಾಕಿಸ್ತಾನಕ್ಕೆ ಮತಾಂತರವಾಗಿ ಹೋದ ಹಿಂದೂಗಳನ್ನು ಮರಳಿ ಭಾರತಕ್ಕೆ ಕರೆತರಬೇಕು. ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ಘರ್ ವಾಪ್ಸಿ ಮಾಡಬೇಕಿದೆ ಎಂದು ತೇಜಸ್ವಿ ಸೂರ್ಯ ಉಡುಪಿಯ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಇದಕ್ಕೆ ಮಠಗಳು ಪ್ರತೀ ವರ್ಷಕ್ಕೆ ಇಂತಿಷ್ಟು ಜನರನ್ನು ಮರುಮತಾಂತರ ಮಾಡುವ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದೂ ಹೇಳಿದ್ದರು.

  ಇದನ್ನೂ ಓದಿ: Tejasvi Surya: ಮುಸ್ಲಿಂ-ಕ್ರೈಸ್ತರನ್ನು ಆದಷ್ಟು ಬೇಗ ಹಿಂದೂ ಧರ್ಮಕ್ಕೆ ಕರೆತರಬೇಕು; ತೇಜಸ್ವಿ ಸೂರ್ಯ

  ಅವರ ಈ ಮಾತಿಗೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದ್ದರಿಂದ ಮರುದಿನವೇ ತಮ್ಮ ಹೇಳಿಕೆ ಅನಾವಶ್ಯಕ ವಿವಾದಗಳಿಗೆ ಕಾರಣವಾಗಿದೆ. ಆದ್ದರಿಂದ ನನ್ನ ಮಾತುಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಜನ ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ವಿ ಸೂರ್ಯ ಮಾತುಗಳಿಗೆ ತಮ್ಮ ಪರ ಮತ್ತು ವಿರೋಧಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು.

  ಪರ ವಿರೋಧಗಳ ವಾದ-ವಿವಾದ

  ಕೆಲವರು ಅವರ ಮಾತುಗಳು ಸರಿ ಎಂದರೆ ಇನ್ನು ಕೆಲವರು ಇದರಲ್ಲಿ ಯಾವ ರೀತಿಯ ನ್ಯಾಯವೂ ತಮಗೆ ಕಾಣುತ್ತಿಲ್ಲ ಎಂದರು. ತಮ್ಮ ಮಾತುಗಳನ್ನು ಹಿಂಪಡೆದ ನಂತರವೂ ಅನೇಕರು ತಾವು ಮರು ಮತಾಂತರದ ಬಗ್ಗೆ ಆಡಿದ ಮಾತುಗಳನ್ನು ಹಿಂಪಡೆದಿರಾ ಅಥವಾ ಈ ವಿಚಾರದಲ್ಲಿ ಮಠಗಳಿಗೆ ವಾರ್ಷಿಕ ಟಾರ್ಗೆಟ್ ನೀಡುವ ಬಗ್ಗೆಯಾ ಎಂದು ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದರು.
  Published by:Soumya KN
  First published: