Acid Attack: ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ; ಕತ್ತು ಸೀಳಿ ಭಯಾನಕ ವಿಕೃತಿ

Crime News: ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ನೆರೆಹೊರೆಯವರು ಕಂಡು, ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಅಪ್ರಾಪ್ತ ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು (Acid Attack) ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಭಯಂಕರ ಅಪರಾಧ ಕೃತ್ಯವೊಂದು (Crime News) ವರದಿಯಾಗಿದೆ. ಅಷ್ಟೇ ಅಲ್ಲದೇ  ದಾಳಿ ನಡೆಸಿದ ವ್ಯಕ್ತಿ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಬಾಲಕಿಯ ಕತ್ತು ಸೀಳಿದ್ದಾನೆ. ಸೆಪ್ಟೆಂಬರ್ 5 ರ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿನಿ 14 ವರ್ಷದ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶದ (Andhra Pradesh) ನೆಲ್ಲೂರು ಜಿಲ್ಲೆಯ ಚೆಮುಡುಗುಂಟದ ನಕ್ಕಲ ಗಿರಿಜನ ಕಾಲೋನಿಯಲ್ಲಿ ಆರೋಪಿಯು ಬಾಲಕಿಯ ಮನೆಗೆ ನುಗ್ಗಿ ಈ ದುಷ್ಕೃತ್ಯ ನಡೆಸಿದ್ದಾನೆ.

  ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಸಂತ್ರಸ್ತೆ ವಾಶ್ ರೂಂಗೆ ಓಡಿ ಬಂದು ಒಳಗೆ ಬೀಗ ಹಾಕಿಕೊಂಡಿದ್ದಾಳೆ. ಆರೋಪಿ ಬಾಗಿಲು ಒಡೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಆತನ ಪ್ರಯತ್ನಕ್ಕೆ ಆಕೆ ಪ್ರತಿರೋಧ ತೋರಿದ ಕಾರಣ ಆತ ಆಕೆಯ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆ್ಯಸಿಡ್‌ನ್ನು ಆಕೆಯ ಬಾಯಿಗೆ ಮತ್ತು ಮುಖದ ಮೇಲೆ ಸುರಿದಿದ್ದಾನೆ ಎಂದು ವರದಿಯಾಗಿದೆ. ಆಕೆ ಕಿರುಚಲು ಆರಂಭಿಸಿದಾಗ ದುಷ್ಕರ್ಮಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಆಂಧ್ರ ಪ್ರದೇಶದಲ್ಲಿ ನಡೆದ ಈ ಭೀಕರ ದುಷ್ಕೃತ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ.

  ಬಾಲಕಿ ಸ್ಥಿತಿ ಚಿಂತಾಜನಕ
  ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ನೆರೆಹೊರೆಯವರು ಕಂಡು, ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ನೆಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ರಾವ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ತಮಗೆ ಆರೋಪಿಯ ಬಗ್ಗೆ ಖಚಿತ ಮಾಹಿತಿ ಇದ್ದು, ಶೀಘ್ರವೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Hijab Row Update: ಹಿಜಾಬ್ ವಿವಾದ; ಸುಪ್ರೀಂಕೋರ್ಟ್​ ಕೇಳಿದ ಮಹತ್ವದ ಪ್ರಶ್ನೆಗಳಿವು

  ಬಾಲಕಿಯ ಸಂಬಂಧಿಯಿಂದಲೇ ಕೃತ್ಯ
  ವರದಿಗಳ ಪ್ರಕಾರ, ಶಂಕಿತ ವ್ಯಕ್ತಿ ಸಂತೃಸ್ತ ಬಾಲಕಿಯ ಸಂಬಂಧಿಯೇ ಎಂದು ಹೇಳಲಾಗಿದೆ. ನೆಲ್ಲೂರಿನಲ್ಲಿರುವ ಅಪೋಲೋ ಆಸ್ಪತ್ರೆಯ ಶಾಖೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಒತ್ತಾಯಿಸಿದ್ದಾರೆ.

  ಸಚಿವರಿಂದ ಸಂತೃಸ್ತೆಯ ಕುಟುಂಬಸ್ಥರ ಭೇಟಿ
  ಆಂಧ್ರ ಪ್ರದೇಶ ರಾಜ್ಯ ಕೃಷಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ವಿಚಾರಿಸಿದರು. ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಯತ್ನದ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು. ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Nitin Gadkari: ಕಾರಿನ ಹಿಂಬದಿ ಸವಾರರಿಗೂ ಈಗ ಸೀಟ್​ಬೆಲ್ಟ್​ ಕಡ್ಡಾಯ, ತಪ್ಪಿದ್ರೆ ಬೀಳುತ್ತೆ ಭಾರೀ ದಂಡ!

  ಶೀಘ್ರದಲ್ಲೇ, ಪೊಲೀಸರು ಅಪರಾಧಿಯನ್ನು ಗುರುತಿಸಿ ಕಸ್ಟಡಿಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಆಂಧ್ರ ಪ್ರದೇಶ ರಾಜ್ಯ ಕೃಷಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಹೇಳಿದ್ದಾರೆ. ಜೊತೆಗೆ ಕಠಿಣ ಶಿಕ್ಷೆಯನ್ನು ನೀಡಲು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
  Published by:guruganesh bhat
  First published: