• Home
  • »
  • News
  • »
  • national-international
  • »
  • Chandrababu Naidu: ಅಮರಾವತಿ ಭೂ ಹಗರಣ ಪ್ರಕರಣ; ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿಚಾರಣೆಗೆ ನೊಟೀಸ್​ ಜಾರಿ

Chandrababu Naidu: ಅಮರಾವತಿ ಭೂ ಹಗರಣ ಪ್ರಕರಣ; ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿಚಾರಣೆಗೆ ನೊಟೀಸ್​ ಜಾರಿ

ಚಂದ್ರಬಾಬು ನಾಯ್ಡು.

ಚಂದ್ರಬಾಬು ನಾಯ್ಡು.

ಅಧಿಕಾರಿಗಳು ಜಾರಿಗೊಳಿಸಿರುವ ನೊಟೀಸ್​ನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸುವಲ್ಲಿ ವಿಫಲವಾದರೆ, ಅಥವಾ ವಿಚಾರಣೆಗೆ ಹಾಜರಾಗದಿದ್ದರೆ, ಸಿಆರ್‌ಪಿಸಿಯ ಸೆಕ್ಷನ್ 41 (3) ಮತ್ತು (4) ರ ಅಡಿಯಲ್ಲಿ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

  • Share this:

    ಹೈದ್ರಾಬಾದ್​ (ಮಾರ್ಚ್​ 16); ಕಳೆದ ಎರಡು ವರ್ಷಗಳಿಂದ ಆಂಧ್ರಪ್ರದೇಶದ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಾರ್ಟಿ (TDP) ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಎಫ್‌ಐಆರ್ ದಾಖಲಿಸಿರುವ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು, ಸೋಮವಾರ ಸಂಜೆ ಚಂದ್ರಬಾಬು ನಾಯ್ಡು ಅವರ ಹೈದರಾಬಾದ್‌ನ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ನಾಯ್ಡು ಅವರನ್ನು 'ಆರೋಪಿ ನಂಬರ್‌ 1' ಎಂದು ಉಲ್ಲೇಖಿಸಿರುವ ನೋಟಿಸ್‌, ವಿಜಯವಾಡದ ಸತ್ಯನಾರಾಯಣಪುರಂನ ಸಿಐಡಿ ಪ್ರಾದೇಶಿಕ ಕಚೇರಿಯಲ್ಲಿ ಮಾರ್ಚ್ 23 ರಂದು ತನಿಖಾ ಅಧಿಕಾರಿ ಎದುರು ಚಂದ್ರಬಾಬು ನಾಯ್ಡು ಖುದ್ದಾಗಿ ಹಾಜರಾಗಬೇಕು" ಎಂದು ಸೂಚಿಸಿದೆ.


    "ಅಧಿಕಾರಿಗಳು ಜಾರಿಗೊಳಿಸಿರುವ ನೊಟೀಸ್​ನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸುವಲ್ಲಿ ವಿಫಲವಾದರೆ, ಅಥವಾ ವಿಚಾರಣೆಗೆ ಹಾಜರಾಗದಿದ್ದರೆ, ಸಿಆರ್‌ಪಿಸಿಯ ಸೆಕ್ಷನ್ 41 (3) ಮತ್ತು (4) ರ ಅಡಿಯಲ್ಲಿ ಬಂಧಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಲಾಗಿದೆ.


    ಆಂಧ್ರಪ್ರದೇಶ ಒಡೆದು ಇಬ್ಭಾಗವಾದಾಗ ಹೈದ್ರಾಬಾದ್​ ತೆಲಂಗಾಣ ಪಾಲಾಗಿತ್ತು. ಹೀಗಾಗಿ ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿಯನ್ನು ನಿರ್ಮಿಸುವ ಕೆಲಸಕ್ಕೆ ಮುಂದಾಗಿದ್ದ ಅಂದಿನ ಸಿಎಂ ಚಂದ್ರಬಾಬು ನಾಯ್ಡು, ಅಮರಾತಿಯಲ್ಲಿ ಆಂಧ್ರಪ್ರದೇಶದ ರಾಜಧಾನಿ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದರು. ಈ ಸಲುವಾಗಿ ಸಾವಿರಾರು ಎಕರೆ ಭೂಮಿಯನ್ನು ಒಟ್ಟುಗೂಡಿಸಲಾಗಿತ್ತು, ರೈತರಿಂದ ಪಡೆಯಲಾಗಿತ್ತು. ಆದರೆ, ಈ ವೇಳೆ ಸಾಕಷ್ಟು ಅಕ್ರಮ ಎಸಗಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.


    ಸಿಐಡಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ಅಧಿಕಾರಿ ಲಕ್ಷ್ಮಿ ನಾರಾಯಣ ರಾವ್ ನೀಡಿದ ನೋಟಿಸ್‌‌ನಲ್ಲಿ, "ಪ್ರಕರಣದಲ್ಲಿ ನಂಬರ್‌ 1 ಆರೋಪಿ ಆರೋಪಿಯಾಗಿರುವ ನಿಮ್ಮನ್ನು ಪರಿಣಾಮಕಾರಿ ಮತ್ತು ಉತ್ತಮ ತನಿಖೆಗಾಗಿ, ವಿಚಾರಣೆಗೆ ಒಳಪಡಿಸುವುದು ಸೂಕ್ತವಾಗಿದೆ ಮತ್ತು ಅಗತ್ಯವೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.


    ಇದನ್ನೂ ಓದಿ: West Bengal Assembly Election 2021: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಸ್ವಪನ್​ ದಾಸ್​ಗುಪ್ತಾ ರಾಜೀನಾಮೆ; ಬಂಗಾಳದಲ್ಲಿ ಬಿಜೆಪಿಯಿಂದ ಟಿಕೆಟ್!


    ಟಿಡಿಪಿ ಆಡಳಿತದ ಅವಧಿಯಲ್ಲಿ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ (ಎಂಎ ಮತ್ತು ಯುಡಿ) ಸಚಿವರಾಗಿದ್ದ ಟಿಡಿಪಿ ಮುಖಂಡ ಪೊಂಗುರು ನಾರಾಯಣ ರಾವ್ ಅವರಿಗೂ ಸಿಆರ್‌ಪಿಸಿಯ ಸೆಕ್ಷನ್ 41 (ಎ) ಅಡಿಯಲ್ಲಿ ಇದೇ ರೀತಿಯ ಸೂಚನೆ ನೀಡಲಾಗಿದೆ.


    ನಾಯ್ಡು ಅವರಿಗೆ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಪಕ್ಷದ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕೆ. ಅಚ್ಚಣ್ಣೈದು, "ಅಮರಾವತಿಗೆ ಎಸ್‌ಸಿ ಮತ್ತು ಎಸ್‌ಟಿಗಳ ಒಪ್ಪಿಗೆಯೊಂದಿಗೆ ನಿಯೋಜಿತ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ಮಂಗಳಗಿರಿ ಶಾಸಕ ರಾಮಕೃಷ್ಣ ರೆಡ್ಡಿ ಅವರು ಆ ಸಮುದಾಯಕ್ಕೆ ಸೇರದಿದ್ದಾಗ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಆಧಾರದ ಮೇಲೆ ಹೇಗೆ ದೂರು ಸಲ್ಲಿಸಬಹುದು? ಇದು ಕಾಯಿದೆಯ ದುರುಪಯೋಗವಲ್ಲದೆ ಮತ್ತೇನಲ್ಲ. ಟಿಡಿಪಿ ಮುಖ್ಯಸ್ಥರ ವಿರುದ್ದ ಸರ್ಕಾರವು ದ್ವೇಷ ರಾಜಕೀಯ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

    Published by:MAshok Kumar
    First published: