• Home
  • »
  • News
  • »
  • national-international
  • »
  • JaganMohan Reddy Temple: ಆಂಧ್ರ ಸಿಎಂ ಜಗನ್ ಹೆಸರಲ್ಲಿ ದೇವಸ್ಥಾನವನ್ನೇ ನಿರ್ಮಿಸಿದ ಶಾಸಕ.. ಕಾರಣ ಇಲ್ಲಿದೆ

JaganMohan Reddy Temple: ಆಂಧ್ರ ಸಿಎಂ ಜಗನ್ ಹೆಸರಲ್ಲಿ ದೇವಸ್ಥಾನವನ್ನೇ ನಿರ್ಮಿಸಿದ ಶಾಸಕ.. ಕಾರಣ ಇಲ್ಲಿದೆ

ಸಿಎಂ ಜಗನ್​ ಹೆಸರಲ್ಲಿ ದೇವಸ್ಥಾನ ಕಮ್​​ ಮ್ಯೂಸಿಯಂ

ಸಿಎಂ ಜಗನ್​ ಹೆಸರಲ್ಲಿ ದೇವಸ್ಥಾನ ಕಮ್​​ ಮ್ಯೂಸಿಯಂ

ನವರತ್ನಗಳು ಆಲಯಂ ಮುಖ್ಯಮಂತ್ರಿಗಳು ಕೈಗೊಂಡ ಕಲ್ಯಾಣ ಯೋಜನೆಗಳನ್ನು ಚಿತ್ರಿಸುವ ಒಂಬತ್ತು ಕಂಬಗಳನ್ನು ಹೊಂದಿದೆ.  ಶಾಸಕ ಮಧುಸೂದನ್ ರೆಡ್ಡಿ ತಮ್ಮ ಶಾಸಕರ ನಿಧಿಯ ಸುಮಾರು ಶೇ. 75ರಷ್ಟು ಹಣವನ್ನು ಖರ್ಚು ಮಾಡಿದ್ದಾರೆ.  

  • Share this:

ರಾಜಕೀಯ ಪಕ್ಷಗಳ ವರಿಷ್ಠರಿಗೆ ಬೆಂಬಲಿಗರು, ಕಾರ್ಯಕರ್ತರು ತೋರುವ ಸ್ವಾಮಿ ನಿಷ್ಠೆಗಳು ಕೆಲವೊಮ್ಮೆ ಅತಿರೇಕ ಅನಿಸಿಕೊಳ್ಳುತ್ತವೆ. ಇದೇ ರೀತಿ ಆಂಧ್ರಪ್ರದೇಶದ ಶಾಸಕರೊಬ್ಬರು ಸಿಎಂ ಜಗನ್​​ಮೋಹನ್​ ರೆಡ್ಡಿ ಮೇಲಿನ ಅಭಿಮಾನದಿಂದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ದೇವಸ್ಥಾನ-ಕಮ್-ಮ್ಯೂಸಿಯಂ ಅನ್ನು ನಿರ್ಮಿಸಿದ್ದಾರೆ. ದೇವಸ್ಥಾನ ಗಾಜಿನ ಸಭಾಂಗಣವನ್ನು ಹೊಂದಿದೆ. ಸಿಎಂ ಜಗನ್​​ ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಪ್ರತಿಬಿಂಬಿಸುವಂತೆ ನವರಥಲು ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶ್ರೀಕಲಹಸ್ತಿಯಲ್ಲಿರುವ ದೇವಸ್ಥಾನ-ಕಮ್-ಮ್ಯೂಸಿಯಂ ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಪ್ರತಿನಿಧಿಸುತ್ತವೆ.


ಆಡಳಿತ ಪಕ್ಷದ ಶಾಸಕ ಸಿರ್ಕಲಹಸ್ತದ ಬಿಯಾಪು ಮಧುಸೂದನ್ ರೆಡ್ಡಿಯವರು ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದು ಕೇವಲ ಮುಖ್ಯಮಂತ್ರಿಗೆ ಮೀಸಲಾಗಿರುವ ದೇವಸ್ಥಾನವಲ್ಲ. ಏಕೆಂದರೆ ಇದು "ನವರಥಲು" ಎಂಬ ಜಗನ್ ಸರ್ಕಾರ ಕೈಗೊಂಡ ಕಲ್ಯಾಣ ಯೋಜನೆಗಳ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಈ ದೇವಸ್ಥಾನವನ್ನು ಗಾಜಿನಿಂದ ಅಲಂಕರಿಸಲಾಗಿದೆ. ಇದನ್ನು ನೆರೆಯ ಕರ್ನಾಟಕ ಮತ್ತು ತಮಿಳುನಾಡಿನ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಇದು ಆಂಧ್ರದ ನವಕಲ್ಯಾಣ ಕಾರ್ಯಕ್ರಮವನ್ನು ಪ್ರತಿನಿಧಿಸುತ್ತದೆ.


ದೇವಸ್ಥಾನ ಕಮ್​ ಮ್ಯೂಸಿಯಂ ನಿರ್ಮಾಣಕ್ಕೆ ಶಾಸಕ ಮಧುಸೂದನ್ ರೆಡ್ಡಿ ತಮ್ಮ ಸ್ವಂತ ಹಣದ ಜೊತೆಗೆ ಪಕ್ಷದ ಕಾರ್ಯಕರ್ತರಿಂದ ಹಣವನ್ನು ಸಂಗ್ರಹಿಸಿದ್ದಾರೆ. ಆರಂಭದಲ್ಲಿ ಈ ನವರಥನ್ಲು ಆಲಯಂಗೆ ಅಂದಾಜು 10 ಲಕ್ಷ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ನಂತರ ವೆಚ್ಚವು ಸುಮಾರು 2 ಕೋಟಿ ರೂ.ಗಳಿಗೆ ಏರಿತು. ಅಂತಿಮವಾಗಿ ಇದನ್ನು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲಾಯಿತು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಒಂಬತ್ತು ಯೋಜನೆಗಳನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ.


ಇದನ್ನೂ ಓದಿ: ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಅಫ್ಘಾನಿಸ್ತಾನದ ಮಹಿಳೆ


ಈ ಬಗ್ಗೆ ಮಾತನಾಡಿದ ಶಾಸಕ ಮಧುಸೂಧನ್ ರೆಡ್ಡಿ, ನವರಥಲು ಯೋಜನೆಗಳು ರಾಜ್ಯದ ಕಡು ಬಡವರಿಗೆ ಹಿಂದೆಂದಿಗಿಂತಲೂ ಹೆಚ್ಚು ಸಹಾಯ ಮಾಡಿದೆ. ಜಗನ್ ಮೋಹನ್ ರೆಡ್ಡಿ ಸರ್ಕಾರವು ಹಿಂದಿನ ಸಿಎಂಗಳಿಗಿಂತ ಹೆಚ್ಚಾಗಿ ಬಡ ಮತ್ತು ದುರ್ಬಲ ವರ್ಗಗಳಿಗೆ ಇಂತಹ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು. ದೇವಸ್ಥಾನ ಕಮ್​ ಮ್ಯೂಸಿಯಂ ಅನ್ನು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಶೀಘ್ರದಲ್ಲೇ ಉದ್ಘಾಟಿಸಲಿದ್ದಾರೆ.  ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ, ಪಂಚಾಯತ್ ರಾಜ್ ಸಚಿವ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ, ಅವರ ಪುತ್ರ ಮತ್ತು ಸಂಸದ ಮಿಥುನ್ ರೆಡ್ಡಿ ಈ ನವರತ್ನಗಳು ಆಲಯಂನ ಪ್ರಾರಂಭದಲ್ಲಿ ಭಾಗವಹಿಸಲಿದ್ದಾರೆ.


ನವರತ್ನಗಳು ಯೋಜನೆಗಳ ಮೂಲಕ ಜೀವನೋಪಾಯಕ್ಕಾಗಿ ಆರ್ಥಿಕ ನೆರವು ಮತ್ತು ಬೆಂಬಲವನ್ನು ನೀಡುವ ಮೂಲಕ ಬಡವರನ್ನು ಮೇಲೆತ್ತಲು ಸರ್ಕಾರ ನಿರ್ಧರಿಸಿದೆ. ಆದುದರಿಂದ ದೇವಸ್ಥಾನ-ಮ್ಯೂಸಿಯಂ ಅನ್ನು "ನವರತ್ನಗಳು ಆಲಯಂ" ಎಂದು ನಾಮಕರಣ ಮಾಡಲಾಗಿದೆ.
ನವರತ್ನಗಳು ಆಲಯಂ ಮುಖ್ಯಮಂತ್ರಿಗಳು ಕೈಗೊಂಡ ಕಲ್ಯಾಣ ಯೋಜನೆಗಳನ್ನು ಚಿತ್ರಿಸುವ ಒಂಬತ್ತು ಕಂಬಗಳನ್ನು ಹೊಂದಿದೆ. ಎಲ್ಲಾ ಒಂಬತ್ತು ಸ್ತಂಭಗಳು ಪ್ರವಾಸಿಗರಿಗೆ ಮರುಪಾವತಿ, ಆರೋಗ್ಯಶ್ರೀ, ಅಮ್ಮಾಡಿ, ರೈತ ಭರೋಸಾ, ವೈಎಸ್‌ಆರ್ ಆಸರೆ, ಬಡವರಿಗೆ ಮನೆಗಳು, ಪಿಂಚಣಿ ಮತ್ತು ಇತರ ವಿವರಗಳೊಂದಿಗೆ ಮಾಹಿತಿ ನೀಡುತ್ತೆ. ರೈತು ಭಾರೋಸಾ ಯೋಜನೆಯ ಸಾಂಕೇತಿಕ ಪ್ರಾತಿನಿಧ್ಯದಲ್ಲಿ, ಆಹಾರ ಧಾನ್ಯದ ಚೀಲಗಳನ್ನು ಹೊತ್ತಿರುವ ಎತ್ತಿನ ಗಾಡಿಯನ್ನು ಆವರಣದಲ್ಲಿ ಇಟ್ಟಿದ್ದು ಇನ್ನೊಂದು ಆಕರ್ಷಣೆಯಾಗಿದೆ.


ಶಾಸಕ ಮಧುಸೂಧನ್ ರೆಡ್ಡಿ ತಮ್ಮ ಶಾಸಕರ ನಿಧಿಯ ಸುಮಾರು ಶೇ. 75ರಷ್ಟು ಹಣವನ್ನು ಖರ್ಚು ಮಾಡಿದ್ದಾರೆ.  ಉಳಿದ ಹಣವನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಂದ ಸಂಗ್ರಹಿಸಿ ಈ ನವರಥನ್ಲು ಆಲಯವನ್ನು ನಿರ್ಮಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: