ಆಂಧ್ರದ ಐಎಎಸ್​ ಅಧಿಕಾರಿ ಮಗನ ಮದುವೆಗೆ ಖರ್ಚಾದ ಮೊತ್ತ ಕೇಳಿದರೆ ಶಾಕ್​ ಆಗ್ತೀರ!

ಮದುವೆಯನ್ನು ಅದ್ದೂರಿಯಾಗಿ ಮಾಡುವುದು ಈಗಿನ ಟ್ರೆಂಡ್​. ಮದುವೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದರ ಆಧಾರದ ಮೇಲೆ ಅವರ ಅಂತಸ್ತನ್ನು ಅಳೆಯುವ ಪದ್ಧತಿಯೂ ಇದೆ. ಹಾಗಾಗಿಯೇ ಸೆಲೆಬ್ರಿಟಿಗಳ, ಶ್ರೀಮಂತರ ಮನೆಯ ಮದುವೆಗಳು ಭಾರೀ ಸದ್ದು ಮಾಡುತ್ತವೆ. 

sushma chakre | news18
Updated:February 7, 2019, 7:15 PM IST
ಆಂಧ್ರದ ಐಎಎಸ್​ ಅಧಿಕಾರಿ ಮಗನ ಮದುವೆಗೆ ಖರ್ಚಾದ ಮೊತ್ತ ಕೇಳಿದರೆ ಶಾಕ್​ ಆಗ್ತೀರ!
ಪ್ರಾತಿನಿಧಿಕ ಚಿತ್ರ
  • News18
  • Last Updated: February 7, 2019, 7:15 PM IST
  • Share this:
ಮದುವೆಯಾದ ಮೇಲೆ ದಂಪತಿ ಹೇಗಿರುತ್ತಾರೆ ಎಂಬುದಕ್ಕಿಂತ ಮದುವೆಯನ್ನು ಯಾವ ರೀತಿ ಮಾಡಿದ್ದಾರೆ ಎಂಬುದೇ ಹಲವರಿಗೆ ಮುಖ್ಯವಾದ ವಿಷಯವಾಗಿಬಿಡುತ್ತದೆ. ಹಾಗಾಗಿಯೇ ಮಧ್ಯಮ ವರ್ಗದವರು ಕೂಡ ತಮ್ಮ ಸಾಮರ್ಥ್ಯಕ್ಕೂ ಮೀರಿ ಸಾಲ ಮಾಡಿಯಾದರೂ ಅದ್ದೂರಿಯಾಗೇ ಮದುವೆ ಮಾಡುತ್ತಾರೆ.

ಆದರೆ, ಆಂಧ್ರಪ್ರದೇಶದ ಐಎಎಸ್​ ಅಧಿಕಾರಿಯೊಬ್ಬರು ತಮ್ಮ ಮಗನ ಮದುವೆಯನ್ನು ಕೇವಲ 16 ಸಾವಿರ ರೂ.ಗಳಲ್ಲಿ ಮುಗಿಸಿ ಮಾದರಿಯಾಗಿದ್ದಾರೆ. ವಿಶಾಖಪಟ್ಟಣಂ ಮೆಟ್ರೋಪಾಲಿಟನ್ ವಿಭಾಗ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಟ್ನಾಲ ಬಸಂತ್​ ಕುಮಾರ್​ ಫೆಬ್ರವರಿ 10ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಮಗನ ಮದುವೆಗೆ ಖರ್ಚು ಮಾಡುತ್ತಿರುವ ಹಣ ಕೇವಲ 36,000!. 36 ಸಾವಿರ ರೂ.ನಲ್ಲಿ ಮದುವೆ ಮಾಡಲು ಸಾಧ್ಯವಾ? ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ಸತ್ಯ.

ತನ್ನನ್ನು ಹುಟ್ಟಿಸಿದ್ದೇ ತಪ್ಪೆಂದು ಅಪ್ಪ-ಅಮ್ಮನ ಮೇಲೆ ದೂರು ನೀಡಿದ ಮಗರಾಯ!

ಅಂದಹಾಗೆ, ಮದುವೆಗೆ ತಗಲುವ 36 ಸಾವಿರ ರೂ.ಗಳಲ್ಲಿ ವಧುವಿನ ಮನೆಯವರು ಮತ್ತು ವರನ ಮದುವೆಯವರು ಸಮವಾಗಿ 18 ಸಾವಿರ ರೂ.ಗಳನ್ನು ಹಂಚಿಕೊಳ್ಳಲಿದ್ದಾರೆ. ವಧುವಿನ ಮನೆಯವರ ಮೇಲೆ ಹೊರೆ ಹೊರಿಸಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಊಟ, ಶಾಸ್ತ್ರಗಳ ಪರಿಕರಗಳು, ಆಹ್ವಾನ ಪತ್ರಿಕೆ, ಬಟ್ಟೆ ಎಲ್ಲವೂ ಸೇರಿ ಮದುವೆಗೆ ತಗುಲುವ ವೆಚ್ಚ ಕೇವಲ 36 ಸಾವಿರ ರೂ.

ಹಾಗಂತ, ಬಹಳ ಸರಳವಾಗಿ ಮದುವೆ ಮಾಡುತ್ತಿದ್ದಾರೆ ಎಂದು ನೀವಂದುಕೊಳ್ಳಬೇಡಿ. ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್​.ಎಲ್​. ನರಸಿಂಹನ್ ಕೂಡ ಈ ಮದುವೆಗೆ ಅತಿಥಿಯಾಗಿ ಆಗಮಿಸಲಿದ್ದಾರೆ. ಐಎಎಸ್​ ಅಧಿಕಾರಿ ಬಸಂತ್​ ಕುಮಾರ್​ ಇದೇ ಮೊದಲ ಬಾರಿಗೆ ಕಡಿಮೆ ಬಜೆಟ್​ನಲ್ಲಿ ಮದುವೆ ಮಾಡುತ್ತಿರುವುದಲ್ಲ. ಈ ಮೊದಲು 2017ರಲ್ಲಿ ಅವರ ಮಗಳ ಮದುವೆಯನ್ನು ಕೂಡ 32 ಸಾವಿರ ರೂ.ಗಳಲ್ಲಿ ಮುಗಿಸಿದ್ದರು. ವರನ ಕಡೆಯವರು ಮತ್ತು ಬಸಂತ್​ ಕುಮಾರ್​ ಕುಟುಂಬಸ್ಥರು 16 ಸಾವಿರ ರೂ.ಗಳನ್ನು ಸಮವಾಗಿ ಹಂಚಿಕೊಂಡಿದ್ದರು.

ಈ ವಿಚಿತ್ರ ಉದ್ಯೋಗ ನೋಡಿದರೆ ಬೆಚ್ಚಿ ಬಿಳೋದು ಗ್ಯಾರಂಟಿ..!

2012ರಲ್ಲಿ ಬಸಂತ್​ ಕುಮಾರ್​ ಅವರಿಗೆ ಐಎಎಸ್​ ಅಧಿಕಾರಿಯಾಗಿ ಬಡ್ತಿ ಸಿಕ್ಕಿತ್ತು. ಅದಕ್ಕೂ ಮೊದಲು ಅವರು ರಾಜ್ಯಪಾಲ ನರಸಿಂಹನ್ ಅವರಿಗೆ ಜಂಟಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅದ್ದೂರಿ ಮದುವೆಗೆ ಬ್ರೇಕ್​ ಹಾಕಬೇಕೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದ ನಂತರವೂ ಕೋಟಿ-ಕೋಟಿ ರೂ. ಹಣ ಚೆಲ್ಲಿ ಮದುವೆ ಮಾಡುವ ಸಂಪ್ರದಾಯ ನಿಂತಿರಲಿಲ್ಲ. ಇದೀಗ ಸರಳವಾಗಿಯೂ ಮದುವೆಯನ್ನು ಹೇಗೆ ಸಂಭ್ರಮಿಸಬಹುದು ಎಂಬುದಕ್ಕೆ ಬಸಂತ್​ ಕುಮಾರ್​ ಉದಾಹರಣೆಯಾಗಿದ್ದಾರೆ.
First published:February 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ