ತರಕಾರಿ ಬೆಳೆ ರಕ್ಷಣೆಗೆ ಸನ್ನಿ ಲಿಯೋನ್ ಮೊರೆಹೋದ ಆಂಧ್ರಪ್ರದೇಶದ ರೈತ


Updated:February 14, 2018, 9:34 PM IST
ತರಕಾರಿ ಬೆಳೆ ರಕ್ಷಣೆಗೆ ಸನ್ನಿ ಲಿಯೋನ್ ಮೊರೆಹೋದ ಆಂಧ್ರಪ್ರದೇಶದ ರೈತ
ಬೆಳೆ ರಕ್ಷಣೆಗೆ ಸನ್ನಿ ಲಿಯೋನ್ ಮೊರೆಹೋದ ರೈತ

Updated: February 14, 2018, 9:34 PM IST
-ನ್ಯೂಸ್ 18

ಹೈದ್ರಾಬಾದ್(ಫೆ.14): ಸಾಮಾನ್ಯವಾಗಿ ನಟ-ನಟಿಯರನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನ ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ರೈತ ತನ್ನ ಬೆಳೆ ಉಳಿಸಿಕೊಳ್ಳು ಸನ್ನಿ ಲಿಯೋನ್ ಮೊರೆ ಹೋಗಿದ್ದಾನೆ.

ಹೌದು, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರೈತನೊಬ್ಬ ತಾನು ಬೆಳೆದ ಬೆಳೆ ಕಾಪಾಡಿಕೊಳ್ಳಲು ನಟಿ ಸನ್ನಿ ಲಿಯೋನ್ ಫೋಟೋ ಬಳಸಿಕೊಂಡಿದ್ದಾರೆ. 10 ಎಕರೆ ಜಾಗದಲ್ಲಿ ಚೆಂಚು ರೆಡ್ಡಿ ತರಕಾರಿ ಬೆಳೆದಿದ್ದಾರೆ. ಈ ಮಾರ್ಗದಲ್ಲಿ ಓಡಾಡುವವರ ಕಣ್ಣು ಬೆಳೆಗಳ ಮೇಲೆ ಬೀಳುತ್ತದೆ ಎಂದು ಕೆಂಪು ಬಿಕಿನಿಯಲ್ಲಿರುವ ಸನ್ನಿ ಲಿಯೋನ್ ದೊಡ್ಡ ಫೋಟೋವನ್ನು ಹೊಲದ ಮುಂದೆ ಹಾಕಿದ್ದಾರೆ. ಪೋಸ್ಟರ್​ನಲ್ಲಿ ನನ್ನನ್ನ ನೋಡಿ ಹೊಟ್ಟೆ ಉರಿದುಕೊಳ್ಳಬೇಡ ಎಂದೂ ಸಹ ಉಲ್ಲೇಖಿಸಲಾಗಿದೆ.

10 ಎಕರೆ ಪ್ರದೇಶದಲ್ಲಿ ಒಳ್ಳೆಯ ಬೆಳೆ ಬೆಳೆದಿದ್ದೇನೆ. ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಗರ ದೃಷ್ಟ ನನ್ನ ಬೆಳೆ ಮೇಲೆಯೇ ಇತ್ತು. ಹೀಗಾಗಿ, ಯಾರ ದೃಷ್ಟಿಯೂ ತಾಕಬಾರದೆಂದು ಈ ಐಡಿಯಾ ಮಾಡಿದೆ. ಜನರ ದೃಷ್ಟಿ ಈಗ ಸನ್ನಿ ಮೇಲೆ ಬೀಳ್ತಿದೆಯೇ ಹೊರತು, ಬೆಳೆಯ ಮೇಲೆ ಬೀಳುತ್ತಿಲ್ಲ. ತನ್ನ ಪ್ಲಾನ್ ಸಕ್ಸಸ್ ಆಗಿರುವ ಬಗ್ಗೆ ರೈತ ಫುಲ್ ಖುಷಿಯಾಗಿದ್ದಾನೆ. ರೈತನ ಈ ವಿಭಿನ್ನ ಐಡಿಯಾ ಬಗ್ಗೆ ಟ್ವಿಟ್ಟರ್​ನಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

 
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ